ಗಾಂಧೀನಗರ: ಪ್ರಧಾನಿ ನರೇಂದ್ರ ಮೋದಿಯವರ ಏಕತಾ ಮೂರ್ತಿ ಕೇವಲ ಮಾರ್ಕೆಟಿಂಗ್ ಗಿಮಿಕ್ ಅಷ್ಟೇ, ಮೊದಲು ಆರ್ಬಿಐ ಮತ್ತು ಸಿಬಿಐ ಸಂಸ್ಥೆಗಳನ್ನು ಒಗ್ಗೂಡಿಸಿ ಆಮೇಲೆ ಏಕತೆ ಬಗ್ಗೆ ಮಾತನಾಡಿ ಎಂದು ಮಾಜಿ ಗುಜರಾತ್ ಮುಖ್ಯಮಂತ್ರಿ ಶಂಕರ್ಸೀನ್ ವಘೇಲಾ ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಏಕತಾ ಮೂರ್ತಿ ಅನಾವರಣಗೊಳಿಸುತ್ತಿರುವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ವಘೇಲಾ "ನೀವು ಯಾವ ಏಕತೆ ಬಗ್ಗೆ ಮಾತನಾಡುತ್ತಿದ್ದೀರಿ?" ಎಂದು ಪತ್ರಕರ್ತರನ್ನು ಪರ್ಶ್ನಿಸಿದರು. "ಮೊದಲು ಕುಸಿಯುತ್ತಿರುವ ರೂಪಾಯಿ ಮೌಲ್ಯ ಉಳಿಸಿ, ಮತ್ತು ಆರ್ಬಿಐ ಸಿಬಿಐಗಳ್ಳನ್ನು ಒಂದೂಗೂಡಿಸಿ ಅಲ್ಲದೆ ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ಕಡಿತಗೊಳಿಸಿ ಒಂದನ್ನು ಒಗ್ಗೂಡಿಸಿ" ಎಂದು ಅವರು ಪ್ರಧಾನಿ ಮೋದಿಗೆ ಆಗ್ರಹಿಸಿದರು.
ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ಬುಧವಾರದಂದು ಸರ್ದಾರ್ ಪಟೇಲ್ ಅವರ ಜನ್ಮ ದಿನೊತ್ಸವದ ಸಂದರ್ಭದಲ್ಲಿ 182 ಮೀಟರ್ ಎತ್ತರದ ಏಕತಾ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸುತ್ತಿರುವ ಸಂದರ್ಭದಲ್ಲಿ ಅವರ ಟೀಕೆಗಳು ಕೇಳಿ ಬಂದಿವೆ.ಸಿಬಿಐ ಮತ್ತು ಆರ್ಬಿಐ ಮುಂತಾದ ಪ್ರಮುಖ ಸಂಸ್ಥೆಗಳ ನಡುವಿನ ಬಿಕ್ಕಟ್ಟಿನ ಬಗ್ಗೆ ಮೊದಲು ಪ್ರಧಾನಿ ಮೋದಿ ಮಾತನಾಡಿ ಅನಂತರ ಏಕತೆ ಬಗ್ಗೆ ಮಾತನಾಡಬೇಕು ಎಂದು ಅವರು ವಾಗ್ದಾಳಿ ನಡೆಸಿದರು.
ಇನ್ನು ಮುಂದುವರೆದು "ನೀವು ಸರ್ದಾರ್ ಬಗ್ಗೆ ಮಾತನಾಡುವಾಗ, ಜೈಲಿನಲ್ಲಿರುವ ಪಾಟೀದರ್ ಯುವಕರನ್ನು ಬಿಡುಗಡೆ ಮಾಡಿ" ಎಂದು ವಘೇಲಾ ಹೇಳಿದ್ದಾರೆ. ದೇಶದ್ರೋಹದ ಆರೋಪಗಳ ಮೇಲೆ ಜೈಲಿನಲ್ಲಿರುವ ಪಟಿದಾರ್ ನಾಯಕ ಹಾರ್ಡಿಕ್ ಪಟೇಲ್ ಅಲ್ಪೇಶ್ ಕತ್ರಿರಿಯಾ ಅವರನ್ನು ಬಿಡುಗಡೆ ಮಾಡಿ ಎಂದು ಅವರು ಒತ್ತಾಯಿಸಿದರು.
ಸರ್ದಾರ್ ಪಟೇಲ್ ಅವರ ಸರಳತೆ ಮತ್ತು ಈ ಏಕತಾ ಮೂರ್ತಿ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಗುಜರಾತ್ ರಾಜ್ಯವು 2,50,000 ಕೋಟಿ ರೂ.ಸಾಲವನ್ನು ಹೊಂದಿದೆ ಈ ಸಂದರ್ಭದಲ್ಲಿ ಸುಖಾಸುಮ್ಮನೆ ಸಾರ್ವಜನಿಕರ ಹಣವನ್ನು ಖರ್ಚು ಮಾಡಲಾಗಿದೆ ಎಂದು ಅವರು ಟೀಕಿಸಿದರು.