ಮುಂಬೈನ ಭೆಂಡಿ ಬಜಾರ್​ನಲ್ಲಿ ಅಗ್ನಿ ದುರಂತ; ಇಬ್ಬರು ಸಾವು

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಇದುವರೆಗೆ 12 ಜನರನ್ನು ರಕ್ಷಣೆ ಮಾಡಲಾಗಿದೆ. 

Last Updated : May 24, 2019, 05:58 AM IST
ಮುಂಬೈನ ಭೆಂಡಿ ಬಜಾರ್​ನಲ್ಲಿ ಅಗ್ನಿ ದುರಂತ; ಇಬ್ಬರು ಸಾವು title=
Pic Courtesy: ANI

ಭೆಂಡಿ ಬಜಾರ್: ಮಹಾರಾಷ್ಟ್ರದ ಮುಂಬೈನ ಭೆಂಡಿ ಬಜಾರ್ ನಲ್ಲಿರುವ ಕಟ್ಟಡವೊಂದರಲ್ಲಿ ಗುರುವಾರ ತಡರಾತ್ರಿ ಬೆಂಕಿ ಅನಾಹುತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಇದುವರೆಗೆ 12 ಜನರನ್ನು ರಕ್ಷಣೆ ಮಾಡಲಾಗಿದೆ. 

ಬೆಂಕಿ ಅನಾಹುತಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಘಟನೆಯಲ್ಲಿ ಗಾಯಗೊಂಡವರನ್ನು ಖಾಸಗಿ ಆಂಬುಲೆನ್ಸ್ ನಲ್ಲಿ  ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಬಿಎಂಸಿ ಕಮೀಷನರ್ ಪ್ರವೀಣ್ ಪಾರ್ಡೇಶಿ ಹೇಳಿದ್ದಾರೆ.

Trending News