ನವದೆಹಲಿ: ಬ್ಯಾಂಕ್ ವೀಲಿನ ಕಾರಣದ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಮಾಡಲಾಗುತ್ತದೆ ಎನ್ನುವ ನೌಕರರ ಆತಂಕಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಂತಹ ಯಾವುದೇ ಉದ್ದೇಶ ಸರ್ಕಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತಾಗಿ ಸ್ಪಷ್ಟನೆ ನೀಡಿರುವ ನಿರ್ಮಲಾ ಸೀತಾರಾಮನ್ 'ಬ್ಯಾಂಕುಗಳ ಮುಚ್ಚುವಿಕೆ ಇಲ್ಲ.ಯಾವುದೇ ಬ್ಯಾಂಕುಗಳು ತಾವು ಮಾಡುತ್ತಿದ್ದ ಕೆಲಸಕ್ಕಿಂತ ಭಿನ್ನವಾಗಿ ಏನನ್ನೂ ಮಾಡಲು ಹೇಳುವುದಿಲ್ಲ. ವಾಸ್ತವವಾಗಿ, ಅವರು ಏನು ಮಾಡುತ್ತಿದ್ದರೋ ಅದಕ್ಕೆ ನಾವು ಹೆಚ್ಚಿನ ಬಂಡವಾಳವನ್ನು ಅವರಿಗೆ ನೀಡುತ್ತೇವೆ 'ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಾಲ್ಕು ಘಟಕಗಳಾಗಿ ವಿಲೀನಗೊಳಿಸುವ ಕೇಂದ್ರದ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಸದಸ್ಯರು ಶನಿವಾರ ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದ ಎರಡು ದಿನಗಳ ನಂತರ ಹಣಕಾಸು ಸಚಿವರ ಹೇಳಿಕೆಗಳು ಬಂದಿವೆ. ಕೇಂದ್ರ ಸರ್ಕಾರದ ನಿಲವುವನ್ನು ವಿರೋಧಿಸಿ ಭೋಪಾಲ್, ಕೋಲ್ಕತಾ ಮತ್ತು ದೇಶದ ಕೆಲವು ಭಾಗಗಳಲ್ಲಿಯೂ ಇದೇ ರೀತಿಯ ಪ್ರತಿಭಟನೆಗಳು ನಡೆದವು.
ಇದೇ ವೇಳೆ ಆರ್ಥಿಕ ಕುಸಿತದ ಬಗ್ಗೆ ಕೇಳಿದಾಗ, ಈ ಕುರಿತಾಗಿ ತಜ್ಞರ ಜೊತೆ ಹಾಗೂ ವಿವಿಧ ಪಾಲುದಾರರ ಜೊತೆ ಸಭೆ ನಡೆಸುವುದಾಗಿ ಸಚಿವರು ಹೇಳಿದರು. “ಸರ್ಕಾರ ಸಾಕಷ್ಟು ಕ್ಷೇತ್ರಗಳೊಂದಿಗೆ ಸಮಾಲೋಚಿಸುತ್ತಿದೆ. ಕೆಲವು ಕ್ಷೇತ್ರಗಳಲ್ಲಿ, ದಾಸ್ತಾನು ಸಂಗ್ರಹವಾಗುತ್ತಿದೆ. ನಾನು ಉದ್ಯಮದ ತಜ್ಞರನ್ನು ಭೇಟಿಯಾಗುತ್ತಿದ್ದೇನೆ ಮತ್ತು ಅವರ ಒಳಹರಿವು, ಅವರು ಏನು ಬಯಸುತ್ತಾರೆ ಮತ್ತು ಸರ್ಕಾರದಿಂದ ನಿರೀಕ್ಷಿಸಬಹುದು ಎಂಬುದರ ಕುರಿತು ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನಾನು ಇದನ್ನು ಈಗಾಗಲೇ ಎರಡು ಬಾರಿ ಮಾಡಿದ್ದೇನೆ. ನಾನು ಅದನ್ನು ಹೆಚ್ಚು ಬಾರಿ ಮಾಡುತ್ತೇನೆ, ”ಎಂದು ಹೇಳಿದರು.
ಮೋದಿ ಸರಕಾರದ ಸರ್ವಾಂಗೀಣ ದುರುಪಯೋಗದ ಪರಿಣಾಮವೇ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯ ಬಗ್ಗೆ ಕೇಳಿದಾಗ, ಸೀತಾರಾಮನ್ ನೇರ ಉತ್ತರ ನೀಡಲು ನಿರಾಕರಿಸಿದರು.“ಡಾ. ಮನಮೋಹನ್ ಸಿಂಗ್ ಅವರು‘ ರಾಜಕೀಯ ದುರುದ್ದೇಶದ ಬದಲು ಸೂಕ್ತ ವ್ಯಕ್ತಿಗಳನ್ನು ಸಂಪರ್ಕಿಸಬೇಕು ಎಂದು ಹೇಳುತ್ತಾರೆಯೇ? ’ಅವರು ಹಾಗೆ ಹೇಳಿದ್ದಾರೆಯೇ? ಸರಿ, ಧನ್ಯವಾದಗಳು, ನಾನು ಅವರ ಹೇಳಿಕೆಯನ್ನು ಪರಿಗಣಿಸುತ್ತೇನೆ. ಅದು ನನ್ನ ಉತ್ತರ, ”ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.