ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ ಕೆಲವೊಮ್ಮೆ ಕಷ್ಟಕರ ಸಂದರ್ಭಗಳಲ್ಲಿ ಅಥವಾ ತೊಂದರೆಗಳಿಂದ ಪಾರಾಗಲು ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಹಲವು ಬಾರಿ ಅವರು ನೀಡುತ್ತಿದ್ದ ಉತ್ತರದಿಂದ ವಿಷಯವೇ ಬದಲಾಗುತ್ತಿತ್ತು ಮತ್ತು ಅವರು ಗಂಭೀರ ವಿಷಯವನ್ನು ಬಹಳ ಲಘು ಮತ್ತು ಹಾಸ್ಯಮಯ ವಾತಾವರಣಕ್ಕೆ ತಿರುಗಿಸುವಂತಹ ಉತ್ತರಗಳನ್ನು ನೀಡುತ್ತಿದ್ದರು. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಸಮಿತಿ ಸದಸ್ಯ ಆನಂದ್ ಅವಸ್ತಿ, "ಅಟಲ್ ಜೀ ಎರಡೂ ಕಲೆಗಳಲ್ಲಿ ಪರಿಣಿತರಾಗಿದ್ದರು. ಅವರು ತುಂಬಾ ಕಷ್ಟಕರವಾದ ಅಥವಾ ಅಹಿತಕರ ಪ್ರಶ್ನೆಗೆ ಲಘು ಮತ್ತು ಹಾಸ್ಯಮಯ ಪ್ರತಿಕ್ರಿಯೆಯನ್ನು ನೀಡುತ್ತಿದ್ದರು ಮತ್ತು ಅನೇಕ ಬಾರಿ ಅವರು ಹಾಸ್ಯದ ಮೂಲಕವೇ ಗಂಭೀರವಾದ ವಿಷಯಗಳನ್ನು ಹೇಳುತ್ತಿದ್ದರು" ಎಂದಿದ್ದರು.
ಅಂತಹ ಒಂದು ಘಟನೆಯನ್ನು ಉಲ್ಲೇಖಿಸಿ RSS ಚಳುವಳಿಕಾರರು ಮತ್ತು ಈಗ ದೀನ್ ದಯಾಳ್ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಂತೋಷ್ ಮಿಶ್ರ ಅವರು, ಅಟಲ್ ಜೀ ಪ್ರಧಾನಮಂತ್ರಿಯಾಗಿದ್ದಾಗ, ಚಿತ್ರಕೂಟದಲ್ಲಿ ನಾನಾ ಜೈ ದೇಶ್ ಮುಖ್ ಅವರು ಪ್ರಾರಂಭಿಸಿದ ಗ್ರಾಮ ವಿಕಾಸ್ ಕಾರ್ಯಕ್ರಮವನ್ನು ನೋಡಲು ಬಂದರು. 'ಆ ಸಮಯದಲ್ಲಿ ಐದನೇ ತರಗತಿಯ ಬಾಲಕಿ ಅಟಲ್ ಜೀ ಅವರನ್ನು ನೀವೇಕೆ ವಿವಾಹವಾಗಿಲ್ಲ ಎಂದು ಕೇಳಿದಳು.'
ಬಾಲಕಿಯ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಅಟಲ್ ಜೀ, ಜೋರಾಗಿ ನಗಲು ಪ್ರಾರಂಭಿಸಿದರು. ಅವರು ನಗುವುದನ್ನು ನೋಡಿ, ಪ್ರತಿಯೊಬ್ಬರೂ ನಿಟ್ಟುಸಿರು ಬಿಟ್ಟರು. ನಂತರ ಅಟಲ್ ಜೀ 'ನನಗೆ ವಿವಾಹವಾಗಲು ಯಾರೂ ಸಿಗಲೇ ಇಲ್ಲ' ಎಂದು ಹೇಳಿದರು. ಅವರ ಆ ಉತ್ತರದಿಂದ ಅಲ್ಲಿ ಮತ್ತೆ ನಗು ಮನೆಮಾಡಿತು. ಅಟಲ್ ಜೀ ಮಕ್ಕಳನ್ನು ಬಹಳ ಇಷ್ಟಪಡುತ್ತಿದ್ದರು. ಅವರು ಯಾರ ಮನೆಗೆ ಹೋದರು ದೊಡ್ದವರಿಗಿಂತ ಹೆಚ್ಚು ಮಕ್ಕಳೊಂದಿಗೆ ಮಾತನಾಡುತ್ತಿದ್ದರು.
"ನಾವು ಬಾಲ್ಯದಲ್ಲಿ ಆರ್ಎಸ್ಎಸ್ ಶಿಬಿರದಲ್ಲಿ ಭಾಗವಹಿಸುತ್ತಿದ್ದೇವು. ಅಟಲ್ ಜಿ ಅಲ್ಲಿ ಉಪನ್ಯಾಸ ನೀಡಲು ಬಂದಿದ್ದರು. ಅವರು ಸುಮಾರು ಒಂದು ಗಂಟೆ ಮಾತನಾಡಿದರು ಮತ್ತು ಸುಮಾರು ಅರ್ಧ ಘಂಟೆಯ ನಂತರ ನಾವು ಮಧ್ಯದಲ್ಲಿ ಜತೆಗಿದ್ದವರೊಂದಿಗೆ ಮಾತನಾಡುತ್ತಿದ್ದೆವು. ಆ ಸಂದರ್ಭದಲ್ಲಿ ಓದುವುದು ಮತ್ತು ಬರೆಯುವುದರಲ್ಲಿ ಹಾಸ್ಯವೂ ಅಡಗಿದೆ ಎಂದು ಹೇಳಿದ್ದರು" ಎಂದು ಅವರು ಹೇಳಿದ್ದನ್ನು ಸಂತೋಷ್ ಮಿಶ್ರಾ ತಿಳಿಸಿದರು.
'ಅಟಲ್ ಜೀ ಅವರಂತಹ ಸರಳ ಮತ್ತು ಅರ್ಥಗರ್ಭಿತ ನಾಯಕ ಬೇರಾರೂ ಇಲ್ಲ'. ಅವರನ್ನು ಭೇಟಿಯಾಗುವುದು, ಅವರೊಂದಿಗೆ ಹೋಗಿ ಕುಳಿತುಕೊಳ್ಳುವುದು ಬಹಳ ಸುಲಭವಾಗಿತ್ತು. ಒಮ್ಮೆ ಅವರು ಆಚಲಂಗಜ್ ನಲ್ಲಿ ಶಾಲೆಯ ಶಿಲಾನ್ಯಾಸ ನೆರವೇರಿಸಲು ಬಂದಿದ್ದರು. ಬಿಜೆಪಿಯ ಓರ್ವ ನಾಯಕ ಅವರನ್ನು ತಮ್ಮ ಮನೆಗೆ ಕರೆದೊಯ್ದು ಚಹಾ ನೀಡಲು ಬಯಸಿದ್ದರು, ಆದರೆ ಪ್ರೋಟೋಕಾಲ್ ಕಾರಣದಿಂದ ನಿರಾಕರಿಸಿದರು. ಈ ವಿಷಯ ಅಟಲ್ ಜೀ ಅವರಿಗೆ ತಿಳಿದೊಡನೆ ಅವರು ಆ ನಾಯಕನ ಮನೆಗೆ ತೆರಳಲು ಸಿದ್ದರಾದರು. ಅಷ್ಟು ಸರಳ ವ್ಯಕ್ತಿತ್ವ ಅವರದು ಎಂದು ಆನಂದ್ ಅವಸ್ತಿ ವಿವರಿಸಿದರು.
ಅಟಲ್ ಜೀ ಅವರಿಗಿ ಸಿಹಿ ತಿನಿಸುಗಳೆಂದರೆ ಬಹಳ ಇಷ್ಟ. ಊಟದ ನಂತರ ಅವರಿಗೆ ಸಿಹಿ ನೀಡಿಲ್ಲವಾದರೆ ಅವರೇ ಕೇಳಿ ಪಡೆಯುತ್ತಿದ್ದರು ಎಂದು ಆನಂದ್ ಅವಸ್ತಿ ಅಟಲ್ ಅವರ ಬಗ್ಗೆ ತಿಳಿಸಿದ್ದಾರೆ.