'24 ರಿಂದ 48 ಗಂಟೆಯಲ್ಲಿ ಹೋರಾಟ ನಿರತ ರೈತರ ಸಮಸ್ಯೆಗೆ ಇತ್ಯರ್ಥ'

ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ಪ್ರತಿಭಟಿಸುವತ್ತಿರುವ ರೈತರು ಮುಂದಿನ 24 ರಿಂದ 48 ಗಂಟೆಗಳಲ್ಲಿ ಅವರ ಸಮಸ್ಯೆ ಇತ್ಯರ್ಥಗೊಳ್ಳಲಿದೆ ಎಂದು ಹರಿಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಹೇಳಿದ್ದಾರೆ.

Last Updated : Dec 12, 2020, 08:37 PM IST
 '24 ರಿಂದ 48 ಗಂಟೆಯಲ್ಲಿ ಹೋರಾಟ ನಿರತ ರೈತರ ಸಮಸ್ಯೆಗೆ ಇತ್ಯರ್ಥ' title=
Photo Courtesy: Twitter

ನವದೆಹಲಿ: ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಸಮಸ್ಯೆ ಮುಂದಿನ 24 ರಿಂದ 48 ಗಂಟೆಗಳಲ್ಲಿ ಇತ್ಯರ್ಥಗೊಳ್ಳಲಿದೆ ಎಂದು ಹರಿಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಹೇಳಿದ್ದಾರೆ.

ರೈತರ ಬೇಡಿಕೆ ಈಡೇರದೆ ಹೋದಲ್ಲಿ ದೇಶಾದ್ಯಂತ ರೈಲ್ವೆ ಟ್ರ್ಯಾಕ್ ಬಂದ್ ...!

ಶನಿವಾರದಂದು ಪ್ರತಿಭಟನಾಕಾರರು ತಮ್ಮ ಆಂದೋಲನವನ್ನು ತೀವ್ರಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ ಬೆನ್ನಲ್ಲೇ ಚೌತಾಲಾ ಅವರ ಈ ಹೇಳಿಕೆ ಬಂದಿದೆ.ಅವರ ಪಕ್ಷವಾದ ಜನ್ನಾಯಕ್ ಜನತಾ ಪಕ್ಷವು (ಜೆಜೆಪಿ) ರೈತರನ್ನು ಪ್ರಮುಖವೆಂದು ಪರಿಗಣಿಸಿದೆ.ಈ ಹಿನ್ನಲೆಯಲ್ಲಿ ಈಗ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಈಗ ಅವರ ಬಿಜೆಪಿ ಮೈತ್ರಿ ಜೊತೆಗಿನ ವಿಚಾರವಾಗಿ ರೈತರು ಅಸಮಧಾನಗೊಂಡಿದ್ದಾರೆ.ಈ ಹಿನ್ನಲೆಯಲ್ಲಿ ಚೌತಾಲಾ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾದರು.

"ಕೇಂದ್ರದ ನಡುವೆ ಮಾತುಕತೆ ನಡೆಯಲಿದೆ ಮತ್ತು ರೈತರು ಫಲಪ್ರದವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಮುಂದಿನ 24 ರಿಂದ 48 ಗಂಟೆಗಳಲ್ಲಿ ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ ಮತ್ತು ಎರಡೂ ಕಡೆಯವರು ನಿರ್ಣಾಯಕ ಪರಿಹಾರವನ್ನು ತಲುಪುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.

Farmers protests: ಇಂದಿನಿಂದ ಟೋಲ್ ಫ್ಲಾಜಾಗಳಲ್ಲಿ ಜಾಮ್, ಬಿಜೆಪಿ ನಾಯಕರ ಮನೆ ಮುಂದೆ ಮುಷ್ಕರ

'ರೈತರ ಪ್ರತಿನಿಧಿಯಾಗಿ ಅವರ ಹಕ್ಕುಗಳನ್ನು ಪಡೆದುಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ನಾನು ಈ ವಿಷಯವನ್ನು ಕೇಂದ್ರ ಸಚಿವರೊಂದಿಗೆ ಚರ್ಚಿಸಿದೆ, ಪರಸ್ಪರ ಒಪ್ಪಿಗೆಯೊಂದಿಗೆ ಒಂದು ಮಾರ್ಗವನ್ನು ಕಂಡುಕೊಳ್ಳಲಾಗುವುದು ಮತ್ತು ನಿಲುವು ಬಗೆಹರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಕೇಂದ್ರವು ಸಕಾರಾತ್ಮಕವಾಗಿದೆ" ಎಂದು ಅವರು ಹೇಳಿದರು.

ದೆಹಲಿಯ ಹೊರವಲಯದಲ್ಲಿರುವ ಸಾವಿರಾರು ಪೊಲೀಸರೊಂದಿಗೆ ದಿನವಿಡೀ ಮುಖಾಮುಖಿಯಾದ ನಂತರ ರೈತ ಗುಂಪುಗಳು ದೆಹಲಿ-ಜೈಪುರ ಹೆದ್ದಾರಿಯನ್ನು ದಿಗ್ಬಂಧನ ಮತ್ತು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಚೌತಾಲಾ ಅವರ ಹೇಳಿಕೆ ಬಂದಿದೆ. 

Trending News