Fact Check: ನಿರುದ್ಯೋಗಿಗಳಿಗೆ Modi Government ನೀಡಲಿದೆಯೇ 3800 ರೂ. ಭತ್ಯೆ, ಇಲ್ಲಿದೆ ಫ್ಯಾಕ್ಟ್ ಚೆಕ್

Fact Check - ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವೈರಲ್ ಆಗುತ್ತಿರುವ ಒಂದು ಪೋಸ್ಟ್‌ನಲ್ಲಿ, ಪ್ರಧಾನಿ ನಿರುದ್ಯೋಗ ಭತ್ಯೆ ಯೋಜನೆಯಡಿ 3800 ರೂಪಾಯಿಗಳಭತ್ಯೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಒಂದು ಲಿಂಕ್ ಅನ್ನು ಸಹ ನೀಡಲಾಗುತ್ತಿದ್ದು ತನ್ಮೂಲಕ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ನಿಮ್ಮನ್ನು ಕೋರಲಾಗುತ್ತಿದೆ.

Written by - Nitin Tabib | Last Updated : Jan 29, 2021, 04:37 PM IST
  • ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ವೊಂದು ಭಾರಿ ವೈರಲ್ ಆಗುತ್ತಿದೆ.
  • ಈ ಪೋಸ್ಟ್ ನಲ್ಲಿ ಪ್ರಧಾನ ಮಂತ್ರಿ ನಿರುದ್ಯೋಗ ಭತ್ಯೆ ಯಜನೆಯಡಿ 3800 ಮಾಸಿಕ ಭತ್ಯೆ ನೀಡಲಾಗುವುದು ಎನ್ನಲಾಗುತ್ತಿದೆ.
  • ಈ ಪೋಸ್ಟ್ ಸತ್ಯಾಸತ್ಯತೆ ಏನು ತಿಳಿದುಕೊಳ್ಳೋಣ ಬನ್ನಿ.
Fact Check: ನಿರುದ್ಯೋಗಿಗಳಿಗೆ  Modi Government ನೀಡಲಿದೆಯೇ 3800 ರೂ. ಭತ್ಯೆ, ಇಲ್ಲಿದೆ ಫ್ಯಾಕ್ಟ್ ಚೆಕ್  title=
Fact Check (Representational Image)

Fact Check - ನವದೆಹಲಿ: ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಪೋಸ್ಟ್ ಭಾರಿ ವೈರಲ್ ಆಗುತ್ತಿದ್ದು, ಈ ಪೋಸ್ಟ್ ನಲ್ಲಿ ಪ್ರಧಾನಿ ನಿರುದ್ಯೋಗ ಭತ್ಯೆ ಯೋಜನೆಯಡಿ ರೂ.3800  ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಈ ಪೋಸ್ಟ್ ಜೊತೆಗೆ ಒಂದು ಲಿಂಕ್ ಅನ್ನು ಸಹ ಹಂಚಿಕೊಳ್ಳಲಾಗುತ್ತಿದೆ. ಈ ಲಿಂಕ್ ಬಳಸಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದೂ ಕೂಡ ಕೋರಲಾಗುತ್ತಿದೆ. ಸರ್ಕಾರ (Modi Government) ಈ ರೀತಿಯ ಪೋಸ್ಟ್ ಅನ್ನು ನಕಲಿ (Fake News) ಎಂದು ಕರೆದಿದ್ದು, ಈ ಕುರಿತು ಸರ್ಕಾರದ ವತಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ ಎಂದಿದೆ.

ಈ ನಕಲೀ ಪೋಸ್ಟ್ ಜೊತೆಗೆ ಒಂದು ಲಿಂಕ್ ಕೂಡ ಶೇರ್ ಮಾಡಲಾಗುತ್ತಿದ್ದು, ಈ ಲಿಂಕ್ ಲಿಂಕ್ ಕ್ಲಿಕ್ಕಿಸಿದಾಗ ಫಾರ್ಮ್ ವೊಂದು ತೆರೆದುಕೊಳ್ಳಲಿದ್ದು, ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಭರ್ತಿ ಮಾಡಲು ಕೇಳಲಾಗುತ್ತದೆ.

ಇದನ್ನು ಓದಿ- ಮೋದಿ ಸರ್ಕಾರದಿಂದ ಪ್ರತಿ ಕುಟುಂಬಕ್ಕೂ ಸಿಗಲಿದೆಯೇ 10 ಸಾವಿರ ರೂ.? ಇದರ ಹಿಂದಿನ ಸತ್ಯವನ್ನು ತಿಳಿಯಿರಿ

ಪೋಸ್ಟ್ ನಲ್ಲೇನು ಬರೆಯಲಾಗಿದೆ?
ಫಾರ್ವರ್ಡ್ ಆಗುತ್ತಿರುವ ಈ ಪೋಸ್ಟ್ ನಲ್ಲಿ ಈ ಜೋಜನೆಯ ಅಡಿ ನಿಮ್ಮ ಹೆಸರು ನೋಂದಾಯಿಸಲು ಕೋರಲಾಗುತ್ತಿದೆ. ಈ ಯೋಜನೆಯ ಅಡಿ ಯುವ ನಿರುದ್ಯೋಗಿಗಳಿಗೆ ರೂ.3800 ರೂ. ಪ್ರತಿ ತಿಂಗಳಿಗೆ ಭತ್ಯೆ (Unemployeement Allowance) ನೀಡಲಾಗುವುದು ಎನ್ನಲಾಗುತ್ತಿದೆ. ಇದಕ್ಕಾಗಿ ಯಾವುದೇ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಿ ಹಾಗೂ ಅರ್ಜಿ ಸಲ್ಲಿರುವವರ ವಯಸ್ಸು 18 ರಿಂದ 50ರೋಳಗಿರಬೇಕು ಎನ್ನಲಾಗುತ್ತಿದೆ. ಹೆಸರನ್ನು ನೋಂದಾಯಿಸಲು http://bit.ly/pradhanmantrI-berojgar-bhatta-yojnaa  ಲಿಂಕ್ ಮೇಲೆ ಕ್ಲಿಕ್ಕಿಸಲು ಹೇಳಲಾಗುತ್ತಿದೆ. ಈ ಪೋಸ್ಟ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಕೂಡ ಒಳಗೊಂಡಿದೆ.

ಇದನ್ನು ಓದಿ-Modi Govt ವಿದ್ಯಾರ್ಥಿಗಳಿಗೆ Free Laptop & Smartphone ಗಳನ್ನು ವಿತರಿಸುತ್ತಿದೆಯಂತೆ ! ನಿಜಾನಾ?

ನಿಜಾಂಶ ಏನು?
Fact Check
- ಈ ಪೋಸ್ಟ್ ಜೊತೆಗೆ ಹಂಚಿಕೊಳ್ಳಲಾಗುತ್ತಿರುವ ಲಿಂಕ್  https://www.hubbyhubby.life/ ವೆಬ್ ಸೈಟ್ ನ ಹಿಡನ್ ಲಿಂಕ್ ಆಗಿದೆ. ಸಾಮಾನ್ಯವಾಗಿ ಮೂಲ ವೆಬ್ ಸೈಟ್ ಲಿಂಕ್ ಮರೆಮಾಚಲು bit.ly ಹೆಸರನ್ನು ಬಳಸಲಾಗುತ್ತದೆ. ಈ ಪೋಸ್ಟ್ ನ ಲಿಂಕ್ ನಲ್ಲಿ ಪ್ರಧಾನಮಂತ್ರಿ ನಿರುದ್ಯೋಗ ಭತ್ಯೆ ಯೋಜನೆಯ ಹೆಸರನ್ನು ಬಳಸಲಾಗಿದೆ. ಈ ಪೋಸ್ಟ್ ನಲ್ಲಿ ನೀಡಲಾಗಿರುವ ಲಿಂಕ್ ಹಾಗೂ ಪೋಸ್ಟ್ ಎರಡೂ ಕೂಡ ನಕಲಿಯಾಗಿವೆ. ಹೀಗಾಗಿ ಈ ರೀತಿಯ ಯಾವುದೇ ಪೋಸ್ಟ್ ಅಥವಾ ಲಿಂಕ್ ಹಂಚಿಕೊಳ್ಳುವ ಮೊದಲು ಎಚ್ಚರಿಕೆ ವಹಿಸಿ. ಜೊತೆಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೂಡ ಈ ಲಿಂಕ್ ಜೊತೆಗೆ ಹಂಚಿಕೊಳ್ಳಬೇಡಿ.

ಇದನ್ನು ಓದಿ- ಪ್ರತಿ ವಾರ ಬದಲಾಗಲಿದೆಯೇ LPG ಬೆಲೆ! ಇದರ ಸತ್ಯಾಸತ್ಯತೆ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News