ನನ್ನ ಆತ್ಮಹತ್ಯೆಗೆ ಮಮತಾ ಬ್ಯಾನರ್ಜಿಯೇ ನೇರ ಹೊಣೆ...!

1986ರ ಬ್ಯಾಚ್​ನ ಐಪಿಎಸ್​ ಅಧಿಕಾರಿ ಗೌರವ್​ ದತ್​ ಅವರನ್ನು ಮಮತಾ ಬ್ಯಾನರ್ಜಿ ಸರ್ಕಾರ ಅಮಾನತುಗೊಳಿಸಿ ಆದೇಶ ನೀಡಿತ್ತು. ಇದರಿಂದಾಗಿ ನನ್ನ ಸಾವಿಗೆ ಮಮತಾ ಬ್ಯಾನರ್ಜಿ ಅವರೇ ಕಾರಣ ಎಂದು ಆತ್ಮಹತ್ಯೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು.

Last Updated : Feb 26, 2019, 10:56 AM IST
ನನ್ನ ಆತ್ಮಹತ್ಯೆಗೆ ಮಮತಾ ಬ್ಯಾನರ್ಜಿಯೇ ನೇರ ಹೊಣೆ...! title=

ಕೋಲ್ಕತ್ತಾ: ಕಳೆದ ಮಂಗಳವಾರ ಆತ್ಮಹತ್ಯೆಗೆ ಶರಣಾದ ಪಶ್ಚಿಮ ಬಂಗಾಳ ಕೆಡರ್‌ನ ನಿವೃತ್ತ ಐಪಿಎಸ್‌ ಅಧಿಕಾರಿ ತಮ್ಮ ಡೆತ್‌ ನೋಟ್‌ನಲ್ಲಿ "ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ನನ್ನ ಸಾವಿಗೆ ಕಾರಣ'' ಎಂದು ಬರೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

1986ರ ಬ್ಯಾಚ್​ನ ಐಪಿಎಸ್​ ಅಧಿಕಾರಿ ಗೌರವ್​ ದತ್​ ಅವರನ್ನು ಮಮತಾ ಬ್ಯಾನರ್ಜಿ ಸರ್ಕಾರ ಅಮಾನತುಗೊಳಿಸಿ ಆದೇಶ ನೀಡಿತ್ತು. ಇದರಿಂದಾಗಿ ನನ್ನ ಸಾವಿಗೆ ಮಮತಾ ಬ್ಯಾನರ್ಜಿ ಅವರೇ ಕಾರಣ ಎಂದು ಆತ್ಮಹತ್ಯೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಬಿಜೆಪಿ ಈ ಪ್ರಕರಣವನ್ನು ರಾಜಕೀಯಗೊಳಿಸಲು ಮುಂದಾಗಿದೆ. ಅಲ್ಲದೆ, ಮಮತಾ ಬ್ಯಾನರ್ಜಿ ಕೂಡಲೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ. ಇದರಿಂದಾಗಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಈ ಪ್ರಕರಣ ತಡೆ ಉಂಟುಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. 

ಪುರುಷ ಪೇದೆಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಆರೋಪದ ಮೇರೆಗೆ 1986 ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಗೌರವ್‌ ದತ್‌ ಅವರನ್ನು 2010ರಲ್ಲಿ ಪಶ್ಚಿಮ ಬಂಗಾಳ ಸರಕಾರ ಅಮಾನತುಗೊಳಿಸಿ, ಕಡ್ಡಾಯ ರಜೆ ಮೇರೆಗೆ ಕಳುಹಿಸಿತ್ತು. 1939 ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಗೋಪಾಲ್‌ ಅವರು ಕಳೆದ ತಿಂಗಳಷ್ಟೆ ನಿವೃತ್ತರಾಗಿದ್ದರು.

Trending News