ಗುಜರಾತ್ ನಲ್ಲಿ ಡಿಸೆಂಬರ್ 15-25 ರ ನಡುವೆ ಚುನಾವಣೆ, ಇಂದು ದಿನಾಂಕ ಘೋಷಿಸಲಿರುವ ಚುನಾವಣಾ ಆಯೋಗ

ಡಿಸೆಂಬರ್ 15 ರಿಂದ 25 ರ ನಡುವೆ ಗುಜರಾತ್ ನಲ್ಲಿ ಎರಡು ಹಂತದಲ್ಲಿ ಮತ್ತು ಹಿಮಾಚಲ ಪ್ರದೇಶದಲ್ಲಿ ನವೆಂಬರ್ ನಲ್ಲಿ ಒಂದು ಹಂತದ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Last Updated : Oct 12, 2017, 12:55 PM IST
ಗುಜರಾತ್ ನಲ್ಲಿ ಡಿಸೆಂಬರ್ 15-25 ರ ನಡುವೆ ಚುನಾವಣೆ, ಇಂದು ದಿನಾಂಕ ಘೋಷಿಸಲಿರುವ ಚುನಾವಣಾ   ಆಯೋಗ title=

ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ನಡೆಯಲಿರುವ ಚುನಾವಣೆಗಳ ದಿನಾಂಕವನ್ನು ಚುನಾವಣಾ ಆಯೋಗ ಗುರುವಾರ ಸಂಜೆ ಘೋಷಿಸಲಿದೆ. ಮೂಲಗಳ ಪ್ರಕಾರ ಗುಜರಾತ್ ನಲ್ಲಿ ಡಿಸೆಂಬರ್ 15-25 ರ ನಡುವೆ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು,  ಚುನಾವಣಾ ಆಯೋಗವು ಅಕ್ಟೋಬರ್ 10 ರಂದು ಅಹಮದಾಬಾದ್ ನಲ್ಲಿ ಗುಜರಾತ್ ವಿಧಾನ ಸಭಾ ಚುನಾವಣೆಯು ಡಿಸೆಂಬರ್ ನಲ್ಲಿ ನಡೆಯಲಿದೆ. ಏಕೆಂದರೆ ಪ್ರಸ್ತುತ  ವಿಧಾನ ಸಭೆಯ ಅವಧಿಯ ಜನವರಿ ಮೂರನೇ ವಾರದಲ್ಲಿ ಮುಕ್ತಾಯಗೊಳ್ಳುವ ಹಂತದಲ್ಲಿದೆ ಎಂದು ತಿಳಿಸಿತ್ತು.

ಮುಖ್ಯ ಚುನಾವಣಾ ಆಯುಕ್ತರಾದ (ಸಿಇಸಿ) ಎ.ಕೆ. ಜ್ಯೋತಿ ಗುಜರಾತ್ ಪರಿಶೀಲನೆ ಸ್ಲಿಪ್ (VVPAT) ವ್ಯವಸ್ಥೆಯಲ್ಲಿ 50 ಸಾವಿರ ಮತಗಟ್ಟೆಗಳಲ್ಲಿ ಮತದಾನದ ಬಳಸಬಹುದು ಎಂದು ಹೇಳಿದರು. ಈ ವ್ಯವಸ್ಥೆಯನ್ನು ಮೊದಲು ಈ ವರ್ಷದ ಗೋವಾ ಚುನಾವಣೆಯಲ್ಲಿ ಬಳಸಲಾಯಿತು ಎಂದು ಸಹ ಹೇಳಿದ್ದರು.

ಎಲ್ಲಾ 182 ಸ್ಥಾನಗಳಲ್ಲಿ ಪ್ರತಿ ಬೂತ್ ನಲ್ಲಿಯೂ ಪರಿಶೀಲನೆ ಕಾರ್ಯ ನಡೆಯಲಿದೆ ಎಂದೂ ಸಹ ಹೇಳಿದ್ದರು. ಚುನಾವಣಾ ಆಯೋಗವು ಗುಜರಾತ್ ನಲ್ಲಿ ಮೊದಲ ಬಾರಿಗೆ ಪ್ರತಿ ವಿಧಾನ ಸಭಾ ಮತದಾನ ಕ್ಷೇತ್ರಗಳಲ್ಲಿ ಎಲ್ಲಾ ಮಹಿಳೆಯರಿಗಾಗಿ ಮತದಾನ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

Trending News