72 ಗಂಟೆಗಳ ಪ್ರಚಾರ ನಿಷೇಧ ಉಲ್ಲಂಘಿಸಿದ್ದ ಪ್ರಗ್ಯಾಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗ

72 ಗಂಟೆಗಳ ಪ್ರಚಾರ ನಿಷೇಧವನ್ನು ಉಲ್ಲಂಘಿಸಿರುವ ಆರೋಪಗಳ ಮೇರೆಗೆ ಚುನಾವಣಾ ಆಯೋಗವು ಭೋಪಾಲ್ ನ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಗೆ ಕ್ಲೀನ್ ಚಿಟ್ ನೀಡಿದೆ. 

Last Updated : May 8, 2019, 10:48 AM IST
72 ಗಂಟೆಗಳ ಪ್ರಚಾರ ನಿಷೇಧ ಉಲ್ಲಂಘಿಸಿದ್ದ ಪ್ರಗ್ಯಾಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗ title=
file photo

ನವದೆಹಲಿ: 72 ಗಂಟೆಗಳ ಪ್ರಚಾರ ನಿಷೇಧವನ್ನು ಉಲ್ಲಂಘಿಸಿರುವ ಆರೋಪಗಳ ಮೇರೆಗೆ ಚುನಾವಣಾ ಆಯೋಗವು ಭೋಪಾಲ್ ನ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಗೆ ಕ್ಲೀನ್ ಚಿಟ್ ನೀಡಿದೆ. 

ಪ್ರಗ್ಯಾ ಠಾಕೂರ್ ಚುನಾವಣಾ ಆಯೋಗ ವಿಧಿಸಿದ್ದ 72 ಗಂಟೆಗಳ ಪ್ರಚಾರದ ನಿಷೇಧವನ್ನು ಉಲ್ಲಂಘಿಸಿ ಪ್ರಚಾರದಲ್ಲಿ ಭಾಗವಹಿಸಿದ್ದರು.ಈ ವೇಳೆ ದೇವಸ್ತಾನಗಳಿಗೆ ಭೇಟಿ ನೀಡುವುದು ಮತ್ತು ಜನಸ್ತೋಮವನ್ನು ಉದ್ದೇಶಿಸಿ ಭಾಷಣ ಮಾಡುವುದು ಅಲ್ಲದೆ ಕರಪತ್ರಗಳನ್ನು ವಿತರಿಸಿದ್ದರು. ಈ ವಿಚಾರವಾಗಿ ಮೂರು ದಿನಗಳ ಅವಧಿಯಲ್ಲಿ ಚುನಾವಣಾ ಪ್ರಚಾರದ ಆರೋಪಗಳಿಗೆ ಪ್ರತಿಕ್ರಿಯೆ ನೀಡುವಂತೆ ಜಿಲ್ಲಾ ಚುನಾವಣಾ ಅಧಿಕಾರಿ ಸೂಚನೆ ನೀಡಿದ್ದರು. ಆದರೆ ತನ್ನ ಉತ್ತರದಲ್ಲಿ ಠಾಕೂರ್ ಎಲ್ಲಾ ಆರೋಪಗಳನ್ನು ನಿರಾಕರಿಸಿದರು. 

ಮಾಜಿ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಮತ್ತು ಬಾಬರಿ ಮಸೀದಿ ಧ್ವಂಸ  ಕುರಿತು ಹೇಳಿಕೆ ನೀಡಿದ್ದ ಮಾಲೆಗಾಂ ಬಾಂಬ್ ಸ್ಪೋಟದ ಆರೋಪಿ ಪ್ರಗ್ಯಾ ಠಾಕೂರ್ ಗೆ 72 ಗಂಟೆಗಳ ಚುನಾವಣಾ ಪ್ರಚಾರದಿಂದ ನಿಷೇಧಕ್ಕೆ ಒಳಪಡಿಸಲಾಗಿತ್ತು. 26/11 ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಕರ್ಕರೆ ತನ್ನ ಶಾಪದಿಂದಾಗಿ ಸತ್ತರು ಎಂದು ಪ್ರಗ್ಯಾ ಹೇಳಿದ್ದರು. ಇನ್ನು 1992 ರಲ್ಲಿನ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಹೆಮ್ಮೆ ಪಡುವುದಾಗಿ ಹೇಳಿದ್ದರು. ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಚುನಾವಣಾ ಆಯೋಗ ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ನೀಡಿತು. 

ಪ್ರಗ್ಯಾ ಸಿಂಗ್ ಠಾಕೂರ್ ಭೂಪಾಲ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ.

Trending News