ಮಹಾರಾಷ್ಟ್ರ ಚುನಾವಣೆ: 798 ನಾಮಪತ್ರಗಳು ಅಮಾನ್ಯ ಎಂದು ಘೋಷಿಸಿದ ಚುನಾವಣಾ ಆಯೋಗ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇರುವ ಹಿನ್ನಲೆಯಲ್ಲಿ ಈಗ ಚುನಾವಣಾ ಆಯೋಗವು ಒಟ್ಟು 5543 ನಾಮನಿರ್ದೇಶನಗಳಲ್ಲಿ 798 ಅಮಾನ್ಯವಾಗಿದೆ ಎಂದು ಘೋಷಿಸಿತು.

Last Updated : Oct 6, 2019, 12:32 PM IST
ಮಹಾರಾಷ್ಟ್ರ ಚುನಾವಣೆ: 798 ನಾಮಪತ್ರಗಳು ಅಮಾನ್ಯ ಎಂದು ಘೋಷಿಸಿದ ಚುನಾವಣಾ ಆಯೋಗ  title=
file photo

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇರುವ ಹಿನ್ನಲೆಯಲ್ಲಿ ಈಗ ಚುನಾವಣಾ ಆಯೋಗವು ಒಟ್ಟು 5543 ನಾಮನಿರ್ದೇಶನಗಳಲ್ಲಿ 798 ಅಮಾನ್ಯವಾಗಿದೆ ಎಂದು ಘೋಷಿಸಿತು.

ಈಗ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಒಟ್ಟು 4745 ಅಭ್ಯರ್ಥಿಗಳು ಚುನಾವಣಾ ಆಯೋಗದಿಂದ ಅನುಮೋದನೆ ಪಡೆದಿದ್ದಾರೆ ಎನ್ನಲಾಗಿದೆ. ಅಭ್ಯರ್ಥಿಗಳ ಅಂತಿಮ ಪಟ್ಟಿ ಮತ್ತು ಅವರಿಗೆ ನೀಡಲಾದ ಚಿಹ್ನೆಯನ್ನು ಅಕ್ಟೋಬರ್ 7 ರಂದು ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳುವ ಗಡುವು ಮುಗಿದ ನಂತರ ನೀಡಲಾಗುತ್ತದೆ ಎನ್ನಲಾಗಿದೆ. 

ಅಕ್ಟೋಬರ್ 21 ರಂದು ಮಹಾರಾಷ್ಟ್ರದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 24 ರಂದು ಮತ ಎಣಿಕೆ ನಿಗದಿಯಾಗಿದೆ.
 

Trending News