Yaas Cyclone ಪರಿಣಾಮ : ಇಂದಿನಿಂದ ಮೇ 29 ರವರೆಗೆ 25 ರೈಲ್ವೆ ಸಂಚಾರ ರದ್ದು!

ಯಾಸ್ ಚಂಡಮಾರುತ ಮೇ 26ರ ಸಂಜೆ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ಕರಾವಳಿಗಳನ್ನು ದಾಟಲಿದೆ ಎಂದು ಡಾ. ಮೊಹಾಪಾತ್ರ ಮಾಹಿತಿ ನೀಡಿದರು

Last Updated : May 24, 2021, 10:31 AM IST
  • ಯಾಸ್ ಚಂಡಮಾರುತದ ಪರಿಣಾಮ ಮೇ 24 ರಿಂದ 29 ರವರೆಗೆ 25 ರೈಲ್ವೆ ಸಂಚಾರ ರದ್ದು
  • ಭಾನುವಾರ ವಾಯುಭಾರ ಕುಸಿತಕ್ಕೆ ತೀವ್ರಗೊಂಡಿದೆ
  • ಇಂದು ಬೆಳಿಗ್ಗೆ ಯಸ್ ಚಂಡಮಾರುತ ಬಿಸಲಿದೆ
Yaas Cyclone ಪರಿಣಾಮ : ಇಂದಿನಿಂದ ಮೇ 29 ರವರೆಗೆ 25 ರೈಲ್ವೆ ಸಂಚಾರ ರದ್ದು! title=

ನವದೆಹಲಿ : ಯಾಸ್ ಚಂಡಮಾರುತದ ಪರಿಣಾಮ ಮೇ 24 ರಿಂದ 29 ರವರೆಗೆ 25 ರೈಲ್ವೆ ಸಂಚಾರಗಳನ್ನ ರದ್ದು ಗೊಳಿಸಲಾಗಿದೆ ಎಂದು ಪೂರ್ವ ರೈಲ್ವೆ ಭಾನುವಾರ ತಿಳಿಸಿದೆ.

ಯಾಸ್ ಚಂಡಮಾರುತ(Cyclone Yaas) ಮೇ 26ರ ಸಂಜೆ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ಕರಾವಳಿಗಳನ್ನು ದಾಟಲಿದೆ ಎಂದು ಡಾ. ಮೊಹಾಪಾತ್ರ ಮಾಹಿತಿ ನೀಡಿದರು.

ಇದನ್ನೂ ಓದಿ : ಕರೋನಾಗೆ ಬಲಿಯಾದ ನೌಕರನಿಗೆ 60 ವರ್ಷದ ತನಕ ಸಂಬಳ : ಟಾಟಾ ಸ್ಟೀಲ್

ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಶನಿವಾರ ಬೆಳಿಗ್ಗೆ ರೂಪುಗೊಂಡ ಕಡಿಮೆ ಒತ್ತಡದ ಪ್ರದೇಶವು ಭಾನುವಾರ ವಾಯುಭಾರ ಕುಸಿತಕ್ಕೆ ತೀವ್ರಗೊಂಡಿದೆ ಮತ್ತು ಇಂದು ಬೆಳಿಗ್ಗೆ ಯಸ್ ಚಂಡಮಾರುತ ಬಿಸಲಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.

ಇದನ್ನೂ ಓದಿ : ಆಕ್ಸಿಮೀಟರ್ ಬೇಕಾಗಿಲ್ಲ.!ಮೊಬೈಲ್ ನಲ್ಲೇ ನೋಡಬಹುದು ಆಕ್ಸಿಜನ್ ಲೆವೆಲ್..!

ಯಾಸ್ ಚಂಡಮಾರುತ ಮೇ 26ರ ಸಂಜೆ ಪಶ್ಚಿಮ ಬಂಗಾಳ(West Bengal) ಮತ್ತು ಉತ್ತರ ಒಡಿಶಾ ಕರಾವಳಿಗಳನ್ನು ದಾಟಲಿದೆ ಎಂದು ಡಾ. ಮೊಹಾಪಾತ್ರ ಮಾಹಿತಿ ನೀಡಿದರು. ಚಂಡಮಾರುತದ ಗಾಳಿಯ ವೇಗವು ಗಂಟೆಗೆ ಸುಮಾರು 155-165 ಕಿ.ಮೀ. ಎಂದು ಐಎಂಡಿ ಊಹಿಸಿತ್ತು, ಇದು ಗಂಟೆಗೆ 185 ಕಿ.ಮೀ. ವೇಗದಲ್ಲಿ ಬೀಸುತ್ತದೆ.

ಇದನ್ನೂ ಓದಿ : Galwan ಕಣಿವೆಯಲ್ಲಿ ಭಾರತ-ಚೀನಾ ನಡುವೆ ಮತ್ತೆ ಸಂಘರ್ಷದ ಬಗ್ಗೆ ಭಾರತೀಯ ಸೇನೆ ಹೇಳಿದ್ದೇನು?

ರದ್ದಾದ ರೈಲುಗಳು ಗುವಾಹಟಿ-ಬೆಂಗಳೂರು ಕ್ಯಾಂಟ್(Guwahati-Bangalore Cant), ಮುಜಾಫರ್ಪುರ್-ಯಸ್ವಂತ್ಪುರ್, ಎರ್ನಾಕುಲಂ-ಪಾಟ್ನಾ, ನ್ಯೂ ಟಿನ್ಸುಕಿಯಾ-ತಂಬರಂ, ಭಾಗಲ್ಪುರ್-ಯಸ್ವಂತ್ಪುರ್ ಸೇರಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News