ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಭೂಕಂಪ

ಸೋಮವಾರ ಮಧ್ಯಾಹ್ನ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಭೂಕಂಪದ ಅನುಭವವಾಗಿದೆ.

Last Updated : Jun 8, 2020, 02:08 PM IST
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಭೂಕಂಪ title=

ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನ ಲಘು ಭೂಕಂಪದ ಅನುಭವವಾಗಿದೆ. ದೆಹಲಿ-ಹರಿಯಾಣ ಭೂಕಂಪದ ಕೇಂದ್ರಬಿಂದುವಾಗಿತ್ತು. ಆದಾಗ್ಯೂ ಭೂಕಂಪದ ತೀವ್ರತೆಯು 2.1 ದಾಖಲಾಗಿದ್ದು ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿಲ್ಲ. ಗಮನಾರ್ಹವಾಗಿ ದೆಹಲಿ-ಎನ್‌ಸಿಆರ್ (Delhi-NCR) ಪ್ರದೇಶದಲ್ಲಿ ಕಳೆದ ಎರಡು ತಿಂಗಳಲ್ಲಿ 13 ಭೂಕಂಪಗಳು ಸಂಭವಿಸಿವೆ.

ಈ ಭೂಕಂಪದ ಚಟುವಟಿಕೆಯಲ್ಲಿ ಅಸಾಮಾನ್ಯ ಏನೂ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಭೂಕಂಪಗಳ ಮುನ್ಸೂಚನೆ ನೀಡಲು ಸಾಧ್ಯವಿಲ್ಲ, ಆದರೆ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ವಿಪತ್ತು ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಅವರು ಹೇಳಿದರು.

ಭಾರತ ಹವಾಮಾನ ಇಲಾಖೆಯ ಭೂವಿಜ್ಞಾನ ಮತ್ತು ಭೂಕಂಪ (Earthquake) ಅಪಾಯದ ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥ ಎ.ಕೆ.ಸುಕ್ಲಾ ಅವರ ಪ್ರಕಾರ 1720 ರಲ್ಲಿ ದೆಹಲಿಯಲ್ಲಿ ಸಂಭವಿಸಿದ ದೊಡ್ಡ ಭೂಕಂಪನವು 6.5 ತೀವ್ರತೆಯನ್ನು ಹೊಂದಿದೆ. ಈ ಪ್ರದೇಶದ ಕೊನೆಯ ದೊಡ್ಡ ಭೂಕಂಪನವು 1956ರಲ್ಲಿ ಬುಲಂದ್‌ಶಹರ್ ಬಳಿ ಸಂಭವಿಸಿದ್ದು ಅದರ ತೀವ್ರತೆ 6.7 ರಷ್ಟಿತ್ತು ಎಂದು ಹೇಳಲಾಗಿದೆ.

Trending News