ಜಮ್ಮು ಕಾಶ್ಮೀರದಲ್ಲಿ ಭೂಕಂಪ: ಕಣಿವೆ ರಾಜ್ಯ ಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಸೋಮವಾರ ತಡರಾತ್ರಿ ಭೂಕಂಪದ ಅನುಭವವಾಗಿದೆ. ವಾಸ್ತವವಾಗಿ, ಜಮ್ಮು ಮತ್ತು ಕಾಶ್ಮೀರದ ಕತ್ರಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಮಧ್ಯರಾತ್ರಿ ಸುಮಾರು 2.20ರ ಸುಮಾರಿಗೆ ಭೂಕಂಪದ ಅನುಭವವಾಗಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.9 ರಷ್ಟು ಎಂದು ದಾಖಲಾಗಿದೆ.
An earthquake of magnitude 3.9 occurred 61km East of Katra, Jammu & Kashmir, at around 2:20 am today. The depth of the earthquake was 10 km below the ground: National Center for Seismology pic.twitter.com/vdBvk4DhSM
— ANI (@ANI) August 22, 2022
ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಈ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.9 ಎಂದು ಅಳೆಯಲಾಗಿದೆ. ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಕತ್ರಾ ಎಂದು ತಿಳಿದುಬಂದಿದ್ದು, ಭೂಮಿಯಿಂದ 10 ಕಿ.ಮೀ ಆಳದಲ್ಲಿದೆ ಎಂದು ಹೇಳಲಾಗುತ್ತಿದೆ. ಕತ್ರಾದಲ್ಲಿ ತಡರಾತ್ರಿ ಸಂಭವಿಸಿದ 3.9 ತೀವ್ರತೆಯ ಭೂಕಂಪದ ಕೇಂದ್ರಬಿಂದುವನ್ನು ಕತ್ರಾದಿಂದ 61 ಕಿಮೀ ಪೂರ್ವಕ್ಕೆ ಎಂದು ಹೇಳಲಾಗಿದೆ.
ಇದನ್ನೂ ಓದಿ- ಭಾರತೀಯ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! ಮತ್ತೆ ವಿದ್ಯಾರ್ಥಿ ವೀಸಾ ನೀಡಲಿದೆ ಚೀನಾ
ಇದಕ್ಕೂ ಮೊದಲು, ಭಾನುವಾರವೂ ಭಾರತದಲ್ಲಿ ಭೂಕಂಪನದ ಅನುಭವವಾಗಿದೆ. ಸೋಮವಾರ, ರಾಜಸ್ಥಾನದ ಬಿಕಾನೇರ್‌ನಲ್ಲಿ ಭೂಕಂಪನದ ಕಂಪದ ಅನುಭವವಾಗಿತ್ತು. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭಾನುವಾರ ತಡರಾತ್ರಿ ಬಿಕಾನೆರ್‌ನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ 4.1 ರಷ್ಟಿತ್ತು.
ಇದನ್ನೂ ಓದಿ- ಜೆಎನ್ ಯುನಲ್ಲಿ ಮತ್ತೆ ಗಲಾಟೆ: ವಿದ್ಯಾರ್ಥಿಗಳು- ಸೆಕ್ಯುರಿಟಿಗಳ ಮಧ್ಯೆ ಮಾರಾಮಾರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.