ಸಂಸತ್ತಿಗೆ ಟ್ರ್ಯಾಕ್ಟರ್ನಲ್ಲಿ ಬಂದ ಸಂಸದ ದುಶ್ಯಂತ ಚೌತಾಲ

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಇಂಡಿಯನ್ ನ್ಯಾಷನಲ್ ಲೋಕ್ ದಳದ ಸಂಸದ ದುಶ್ಯಂತ್ ಚೌತಾಲಾ ಅವರು ಟ್ರ್ಯಾಕ್ಟರ್‌ನಲ್ಲಿ ಆಗಮಿಸಿ ಗಮನ ಸೆಳೆದರು.

Last Updated : Dec 15, 2017, 01:39 PM IST
ಸಂಸತ್ತಿಗೆ ಟ್ರ್ಯಾಕ್ಟರ್ನಲ್ಲಿ ಬಂದ ಸಂಸದ ದುಶ್ಯಂತ ಚೌತಾಲ title=

ನವ ದೆಹಲಿ: ಇಂದಿನಿಂದ ಆರಂಭವಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಇಂಡಿಯನ್ ನ್ಯಾಷನಲ್ ಲೋಕ್ ದಳದ ಸಂಸದ ದುಶ್ಯಂತ್ ಚೌತಾಲಾ ಅವರು ಟ್ರ್ಯಾಕ್ಟರ್‌ನಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದರು.

ಅಧಿವೇಶನದ ಮೊದಲ ದಿನವಾದ ಇಂದು ಹರಿಯಾಣದ ಹಿಸ್ಸಾರ್ ಸಂಸದರಾಗಿರುವ ದುಶ್ಯಂತ್ ಅವರು ಹಸಿರು ಬಣ್ಣದ ಟ್ರ್ಯಾಕ್ಟರ್‌ ಚಲಾಯಿಸಿಕೊಂಡು ಸಂಸತ್ತಿಗೆ ಬಂದದ್ದು ವಿಶೇಷವಾಗಿತ್ತು. ಸಂಸದರ ಜೊತೆ ಅವರ ಬೆಂಬಲಿಗರು ಸಹ ಇದ್ದರು. 

ಸಂಸತ್ತಿನ ಇತಿಹಾಸದಲ್ಲೇ ದುಶ್ಯಂತ್ ಅವರು ಅತಿ ಕಿರಿಯ ಸಂಸದ ಎಂಬ ಖ್ಯಾತಿಗೆ ಪಾತ್ರರಾದವರು. ಈ ಹಿಂದೆ ಕೆಲ ಸಂಸದರು ಕುದುರೆ, ಸೈಕಲ್ ಮೇಲೆ ಆಗಮಿಸಿ ಗಮನ ಸೆಳೆದಿದ್ದರು. 

Trending News