ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸುವ ಗ್ರಾಹಕರ ಗಮನಕ್ಕೆ

ಎಲ್ಲಾ ಆಭರಣಕಾರರು ಹಾಲ್ಮಾರ್ಕ್ ಮಾಡಿದ ಆಭರಣಗಳನ್ನು ಮಾರಾಟ ಮಾಡುತ್ತಿಲ್ಲ. ಅನೇಕರು ತಾವೇ ಹಾಲ್ಮಾರ್ಕ್ ಮಾಡುತ್ತಾರೆ. ಹಾಗಾಗಿ ಚಿನ್ನ ಖರೀದಿ ಮೊದಲು ಬಿಐಎಸ್ ಹಾಲ್ಮಾರ್ಕ್ ಇದ್ಯಾ ಎಂಬುದನ್ನು ಪರೀಕ್ಷಿಸಿ.

Last Updated : Nov 12, 2020, 02:18 PM IST
  • ಗ್ರಾಹಕರಿಗೆ ಶುದ್ಧ ಚಿನ್ನದ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇದ್ರಿಂದ ಅವರು ನಷ್ಟ ಅನುಭವಿಸುತ್ತಾರೆ.
  • ಎಲ್ಲಾ ಆಭರಣಕಾರರು ಹಾಲ್ಮಾರ್ಕ್ ಮಾಡಿದ ಆಭರಣಗಳನ್ನು ಮಾರಾಟ ಮಾಡುತ್ತಿಲ್ಲ.
  • 22 ಕೆ 916: 22 ಕ್ಯಾರೆಟ್ ಚಿನ್ನಕ್ಕೆ, 18 ಕೆ 750: 18 ಕ್ಯಾರೆಟ್ ಚಿನ್ನಕ್ಕೆ, 14 ಕೆ 585: 14 ಕ್ಯಾರೆಟ್ ಚಿನ್ನಕ್ಕೆ ಬೇರೆ ಬೇರೆಯಾಗಿರುತ್ತದೆ.
ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸುವ ಗ್ರಾಹಕರ ಗಮನಕ್ಕೆ title=

ದೀಪವಾಳಿಯ ಧನ ತ್ರಯೋದಶಿ ದಿನ ಚಿನ್ನ(Gold) ಖರೀದಿ ಮಾಡುವ ಪದ್ಧತಿ ಇದೆ. ಚಿನ್ನ ಖರೀದಿ ಮಾಡುವ ಮೊದಲು ಚಿನ್ನದ ಶುದ್ಧತೆ ಬಗ್ಗೆ ತಿಳಿದಿರಬೇಕಾಗುತ್ತದೆ. ಅನೇಕ ಬಾರಿ ಗ್ರಾಹಕರಿಗೆ ಶುದ್ಧ ಚಿನ್ನದ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇದ್ರಿಂದ ಅವರು ನಷ್ಟ ಅನುಭವಿಸುತ್ತಾರೆ.

ಶಾಲಾ ಪುನರಾರಂಭ ನಿರ್ಧಾರದಿಂದ ಹಿಂದೆ ಸರಿದ ತಮಿಳುನಾಡು

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(Bureau of Indian Standards) ಪ್ರಕಾರ, ಚಿನ್ನದ ಶುದ್ಧತೆಯನ್ನು ಪರೀಕ್ಷಿಸಲು ನಾಲ್ಕು ಪ್ರಮುಖ ಮಾರ್ಗಗಳಿವೆ. ಬಿಐಎಸ್(BIS) ಹಾಲ್ಮಾರ್ಕ್ ಸಂಸ್ಥೆ, ಚಿನ್ನದ ಶುದ್ಧತೆಯನ್ನು ಪರೀಕ್ಷಿಸಲು ಹಾಲ್ಮಾರ್ಕಿಂಗ್ ಮಾಡುವ ಏಕೈಕ ಸಂಸ್ಥೆಯಾಗಿದೆ. ಎಲ್ಲಾ ಆಭರಣಕಾರರು ಹಾಲ್ಮಾರ್ಕ್ ಮಾಡಿದ ಆಭರಣಗಳನ್ನು ಮಾರಾಟ ಮಾಡುತ್ತಿಲ್ಲ. ಅನೇಕರು ತಾವೇ ಹಾಲ್ಮಾರ್ಕ್ ಮಾಡುತ್ತಾರೆ. ಹಾಗಾಗಿ ಚಿನ್ನ ಖರೀದಿ ಮೊದಲು ಬಿಐಎಸ್ ಹಾಲ್ಮಾರ್ಕ್ ಇದ್ಯಾ ಎಂಬುದನ್ನು ಪರೀಕ್ಷಿಸಿ.

ಗುಡ್ ನ್ಯೂಸ್! ಹೆಚ್ಚಿನ ಉತ್ಪಾದನೆಗೆ ಸಿಗಲಿದೆ ಅಧಿಕ ಬೋನಸ್, ಸರ್ಕಾರದ ಈ ಯೋಜನೆ ಬಗ್ಗೆ ತಿಳಿಯಿರಿ

ಬಿಎಸ್‌ಐ(BSI ವೆಬ್‌ಸೈಟ್ ಪ್ರಕಾರ, ಹಾಲ್ಮಾರ್ಕಿಂಗ್‌ಗೆ 3 ರೀತಿಯಲ್ಲಿ ನಡೆಯುತ್ತದೆ. 22 ಕೆ 916: 22 ಕ್ಯಾರೆಟ್ ಚಿನ್ನಕ್ಕೆ, 18 ಕೆ 750: 18 ಕ್ಯಾರೆಟ್ ಚಿನ್ನಕ್ಕೆ, 14 ಕೆ 585: 14 ಕ್ಯಾರೆಟ್ ಚಿನ್ನಕ್ಕೆ ಬೇರೆ ಬೇರೆಯಾಗಿರುತ್ತದೆ.

ಆಸ್ಪತ್ರೆಯ 5ನೇ ಮಹಡಿಯಿಂದ ಜಿಗಿದ ಕರೋನವೈರಸ್‌ ರೋಗಿ...

ಚಿನ್ನ ಅಥವಾ ಬೆಳ್ಳಿ ಖರೀದಿಸುವ ಮೊದಲು ಚಿನ್ನ ಮತ್ತು ಬೆಳ್ಳಿಯ ಇತ್ತೀಚಿನ ದರಗಳನ್ನು ತಿಳಿದುಕೊಳ್ಳಿ. ಇಂಡಿಯನ್ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಶನ್ ವೆಬ್‌ಸೈಟ್ https://ibjarates.com/ ಗೆ ಭೇಟಿ ನೀಡುವ ಮೂಲಕ ಇತ್ತೀಚಿನ ದರವನ್ನು ಪರಿಶೀಲಿಸಬಹುದು. ಆಭರಣಗಳಿಗೆ 22 ಕ್ಯಾರೆಟ್ ಚಿನ್ನವನ್ನು ಬಳಸಲಾಗುತ್ತದೆ.ಇದರಲ್ಲಿ ಶೇಕಡಾ 91.66 ಚಿನ್ನವಿರುತ್ತದೆ. ಇಷ್ಟೇ ಅಲ್ಲ ಆಭರಣ ಖರೀದಿ ನಂತ್ರ ಬಿಲ್ ತೆಗೆದುಕೊಳ್ಳುವುದನ್ನ ಮರೆಯಬೇಡಿ.

Trending News