Ambedkar Jayanti: ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಹಿಂದಿನ ಇತಿಹಾಸ, ಮಹತ್ವ

ಡಾ. ಬಿ.ಆರ್.ಅಂಬೇಡ್ಕರ್ ಅವರು ವಿದೇಶಕ್ಕೆ ಹೋಗಿ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಡಾಕ್ಟರೇಟ್ ಅಧ್ಯಯನ ಮಾಡಿದ ಮೊದಲ ಭಾರತೀಯ.  

Written by - Yashaswini V | Last Updated : Apr 14, 2021, 11:17 AM IST
  • ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವನ್ನು ಅಂಬೇಡ್ಕರ್ ಜಯಂತಿ ಎಂದು ಆಚರಿಸಲಾಗುತ್ತದೆ
  • ಡಾ.ಬಿ.ಆರ್.ಅಂಬೇಡ್ಕರ್ ಏಪ್ರಿಲ್ 14, 1891 ರಂದು ಆಗಿನ ಮಧ್ಯ ಪ್ರಾಂತ್ಯದ ಈಗ ಮಧ್ಯಪ್ರದೇಶದ ಇಂದೋರ್ ಬಳಿಯ ಮೊಹೋದಲ್ಲಿ ಜನಿಸಿದರು
  • ಮೂಲತಃ, ಅವರ ಉಪನಾಮ ಅಂಬವಾಡೇಕರ್, ಆದರೆ ಅವರ ಶಿಕ್ಷಕರು ಶಾಲೆಯ ದಾಖಲೆಗಳಲ್ಲಿ “ಅಂಬೇಡ್ಕರ್” ಎಂಬ ಉಪನಾಮವನ್ನು ನೀಡಿದರು
Ambedkar Jayanti: ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಹಿಂದಿನ ಇತಿಹಾಸ, ಮಹತ್ವ  title=
Dr BR Ambedkar Jayanti

ಅಂಬೇಡ್ಕರ್ ಜಯಂತಿಯ ಇತಿಹಾಸ ಮತ್ತು ಮಹತ್ವ: ಬಾಬಾಸಾಹೇಬ್ ಅಂಬೇಡ್ಕರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಭೀಮರಾವ್ ರಾಮ್ಜಿ ಅಂಬೇಡ್ಕರ್ ಸಾಮಾಜಿಕ ಸುಧಾರಕ ಮತ್ತು ಭಾರತೀಯ ಸಂವಿಧಾನ ಶಿಲ್ಪಿ. ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವನ್ನು ಅಂಬೇಡ್ಕರ್ ಜಯಂತಿ ಎಂದು ಆಚರಿಸಲಾಗುತ್ತದೆ. ಅವರು ಏಪ್ರಿಲ್ 14, 1891 ರಂದು ಆಗಿನ ಮಧ್ಯ ಪ್ರಾಂತ್ಯದ ಈಗ ಮಧ್ಯಪ್ರದೇಶದ ಇಂದೋರ್ ಬಳಿಯ ಮೊಹೋದಲ್ಲಿ ಜನಿಸಿದರು.  ಮೂಲತಃ, ಅವರ ಉಪನಾಮ ಅಂಬವಾಡೇಕರ್, ಆದರೆ ಅವರ ಶಿಕ್ಷಕರು ಶಾಲೆಯ ದಾಖಲೆಗಳಲ್ಲಿ “ಅಂಬೇಡ್ಕರ್” ಎಂಬ ಉಪನಾಮವನ್ನು ನೀಡಿದರು.  ಮೊದಲ ಬಾರಿಗೆ, ಕಾರ್ಯಕರ್ತ ಜನಾರ್ದನ್ ಸದಾಶಿವ್ ರಣಪಿಸೆ ಅವರು ಅಂಬೇಡ್ಕರ್ ಅವರ ಜನ್ಮದಿನವನ್ನು 14 ಏಪ್ರಿಲ್ 1928 ರಂದು ಪುಣೆಯಲ್ಲಿ ಸಾರ್ವಜನಿಕವಾಗಿ ಆಚರಿಸಿದರು. ಅಂದಿನಿಂದ, ಈ ದಿನವನ್ನು ಅಂಬೇಡ್ಕರ್ ಜಯಂತಿ ಅಥವಾ ಭೀಮ್ ಜಯಂತಿ ಎಂದು ಆಚರಿಸಲಾಗುತ್ತದೆ. 

ಡಾ. ಬಿ.ಆರ್. ಅಂಬೇಡ್ಕರ್ (Dr BR Ambedkar) ಅವರು ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ಅವರು ಸಾಮಾಜಿಕ ಸುಧಾರಕ, ಶಿಕ್ಷಣ ತಜ್ಞ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಕಾನೂನು ತಜ್ಞರಾಗಿ ದೇಶದ ಸಂವಿಧಾನಕ್ಕೆ ನೀಡಿರುವ ಕೊಡುಗೆ ಅಪಾರ. ಸಮಾಜ, ಜಾತಿ ಮತ್ತು ಸಮುದಾಯಗಳ ಬಗೆಗಿನ ಅವರ ಆಲೋಚನೆಗಳು ರಾಜಕೀಯ ಗಡಿಗಳನ್ನು ಮೀರಿದ್ದಾಗಿದೆ.

ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ದೀನ ದಲಿತರಿಗಾಗಿ ಹೋರಾಡಿದರು ಮತ್ತು ಲಿಂಗ ಸಮಾನತೆಯನ್ನು ಬಲವಾಗಿ ನಂಬಿದ್ದರು. ಅವರು ಶಿಕ್ಷಣದ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಒತ್ತಾಯಿಸಿದರು ಮತ್ತು ಸಮಾಜದ ಎಲ್ಲ ಜನರಿಗೆ ಸಮಾನತೆಯನ್ನು ಖಾತ್ರಿಪಡಿಸಿಕೊಳ್ಳಲು ಜಾತಿ ಅಡೆತಡೆಗಳನ್ನು ಕೆಡವಲು ಶ್ರಮಿಸಿದರು. ದೀನ ದಲಿತರಿಗೆ ಶಿಕ್ಷಣವನ್ನು ತಲುಪುವಂತೆ ಮಾಡಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅವರು ಒತ್ತು ನೀಡಿದರು.

ಇದನ್ನೂ ಓದಿ - ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರ ನುಡಿಮುತ್ತುಗಳು

ಪ್ರವರ್ತಕ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ಅಂಬೇಡ್ಕರ್ ಬಗೆಗಿನ ಕೆಲವು ಸಂಗತಿಗಳು:

1. ಬಾಬಾಸಾಹೇಬ್ ಅಂಬೇಡ್ಕರ್ ಯುಎಸ್, ಬ್ರಿಟನ್ (Britain) ಮತ್ತು ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದರು. ಬಾಂಬೆ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದ ನಂತರ, ಲಂಡನ್‌ನಲ್ಲಿ ವಕೀಲರಾಗಿ ತರಬೇತಿ ಪಡೆಯುವ ಮೊದಲು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

2. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಭಾರತಕ್ಕೆ ಮರಳಿದ ನಂತರ, 1936 ರಲ್ಲಿ, ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯ ಉಗ್ರ ವಿಮರ್ಶೆಯಾದ ‘ಜಾತಿಯ ಸರ್ವನಾಶ’ ವನ್ನು ಬರೆದರು.

3. ಬಾಬಾಸಾಹೇಬರ ವೈಯಕ್ತಿಕ ಗ್ರಂಥಾಲಯ “ರಾಜ್‌ಗಿರ್” ನಲ್ಲಿ 50,000 ಕ್ಕೂ ಹೆಚ್ಚು ಪುಸ್ತಕಗಳಿವೆ ಮತ್ತು ಇದು ವಿಶ್ವದ ಅತಿದೊಡ್ಡ ಖಾಸಗಿ ಗ್ರಂಥಾಲಯ ಎಂದು ಹೇಳಲಾಗಿದೆ.

ಇದನ್ನೂ ಓದಿ -  ಭಾರತೀಯ ಸಂವಿಧಾನ ದಿನದ ಮಹತ್ವ

4. ತಾರತಮ್ಯದ ವಿರುದ್ಧ ಬದ್ಧ ಹೋರಾಟವನ್ನು ಮುನ್ನಡೆಸಿದ ಡಾ. ಬಿ. ಆರ್. ಅಂಬೇಡ್ಕರ್, ಭಾರತವು ಸ್ವತಂತ್ರವಾಗಬೇಕಾದರೂ ಜಾತಿಯನ್ನು ಎಲ್ಲರೂ ಕೈಬಿಡದ ಹೊರತು ಸಮಾಜ ಸುಧಾರಣೆ ಅಸಾಧ್ಯ ಎಂದು ಹೇಳಿದರು. 

5. ಕಾನೂನು ಸಚಿವರಾದ ನಂತರ ಅವರು ಸಂವಿಧಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.  

6. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು  ಸ್ವತಂತ್ರ ಭಾರತದ ಮೊದಲ  ಕಾನೂನು ಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು (1947–51).

7. 1956 ರಲ್ಲಿ ಅವರ ಮರಣದ ಮೊದಲು, ಅಂಬೇಡ್ಕರ್ ನಾಗ್ಪುರದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 200,000 ಸಹವರ್ತಿ ದಲಿತರೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

8. ಮಾರ್ಚ್ 31, 1990 ರಂದು ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭರತ್ ರತ್ನವನ್ನು ನೀಡಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News