"ನಮ್ಮನ್ನು ಭಿಕ್ಷುಕರನ್ನಾಗಿ ಮಾಡಬೇಡಿ, ಸಹಾಯ ಮಾಡಿ,"ಮೃತ ಸೈನಿಕನ ಮಗನ ಅಳಲು

ಪಾಕಿಸ್ತಾನದ ಸೈನಿಕರಿಂದ ಹತರಾಗಿರುವ ಬಿಎಸ್ಎಫ್ ಸೈನಿಕ ನರೇಂದ್ರ ಸಿಂಗ್ ಅವರ ಮಗ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ನೆರವನ್ನು ಕೇಳಿದ್ದಾರೆ.

Last Updated : Sep 20, 2018, 04:55 PM IST
"ನಮ್ಮನ್ನು ಭಿಕ್ಷುಕರನ್ನಾಗಿ ಮಾಡಬೇಡಿ, ಸಹಾಯ ಮಾಡಿ,"ಮೃತ ಸೈನಿಕನ ಮಗನ ಅಳಲು title=

ನವದೆಹಲಿ: ಪಾಕಿಸ್ತಾನದ ಸೈನಿಕರಿಂದ ಹತರಾಗಿರುವ ಬಿಎಸ್ಎಫ್ ಸೈನಿಕ ನರೇಂದ್ರ ಸಿಂಗ್ ಅವರ ಮಗ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ನೆರವನ್ನು ಕೇಳಿದ್ದಾರೆ.

ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಮೋಹಿತ್ ಕುಮಾರ್ ದಾಹಿಯಾ ತಮ್ಮ ತಂದೆ ರಾಷ್ಟ್ರಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆಂದು ಹೆಮ್ಮೆ ವ್ಯಕ್ತಪಡಿಸಿದರು." ನಮಗೆ ಇದೊಂದು ಹೆಮ್ಮೆಯ ಕ್ಷಣವಾಗಿದೆ; ಪ್ರತಿಯೊಬ್ಬರಿಗೂ ತ್ರಿವರ್ಣ ಧ್ವಜದ ಗೌರವ ಸಿಗುವುದಿಲ್ಲ ಆದರೆ ಅದು ನಮ್ಮ ತಂದೆಗೆ ಸಿಕ್ಕಿದೆ ಎಂದು ಹೇಳಿದರು.

"ನಾವು ಈಗ ಹೆಮ್ಮೆಪಡುತ್ತೇವೆ ಆದರೆ ಎರಡು ಅಥವಾ ಮೂರು ದಿನಗಳ ನಂತರ ನಮಗೆ ಯಾವುದೇ ನೆರವು ಸಿಗದೇ ಹೋದಲ್ಲಿ ಏನಾಗಬಹುದು, ನನ್ನ ಸಹೋದರ ಮತ್ತು ನಾನು ನಿರುದ್ಯೋಗಿಯಾಗಿದ್ದೇನೆ. ಆದ್ದರಿಂದ ನನ್ನ ಕುಟುಂಬವನ್ನು ಘನತೆಗೆ ತಕ್ಕಂತೆ ಕಾಣಬೇಕೆಂದು ಬಯಸುತ್ತೇನೆ. ನಮ್ಮ ಕುಟುಂಬಕ್ಕೆ ತಂದೆಯೋಬ್ಬರೇ ಜೀವನಾಧಾರವಾಗಿದ್ದರು.ಅವರು ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾಗ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಅಧಿಕಾರಿಗಳು ಅಗತ್ಯವಾದ ಸಹಾಯವನ್ನು  ಒದಗಿಸಬೇಕೆಂದು ನಾನು ಬಯಸುತ್ತೇನೆ "ಎಂದು ಬಿಎಸ್ಎಫ್ ಸೈನಿಕನ ಮಗ ಸರ್ಕಾರ ಮತ್ತು ಅಧಿಕಾರಿಗಳಲ್ಲಿ ಬೇಡಿಕೊಂಡಿದ್ದಾರೆ.

ಜಮ್ಮುವಿನ ರಾಮಗಢ ವಲಯದಲ್ಲಿ ಸೆಪ್ಟೆಂಬರ್ 18 ರಂದು  ಬಿಎಸ್ಎಫ್ ಹೆಡ್ ಕಾನ್ಸ್ಟೇಬಲ್ ಕಾಣೆಯಾಗಿ ಪಾಕಿಸ್ತಾನದ ಸೈನಿಕರಿಂದ ಹತ್ಯೆಯಾಗಿದ್ದರು.

Trending News