ಸಿನಿಮಾಗೆ ವಿದಾಯ ಹೇಳುತ್ತಾರಾ ಕಮಲ್ ಹಾಸನ್?

    

Last Updated : Feb 14, 2018, 04:56 PM IST
ಸಿನಿಮಾಗೆ ವಿದಾಯ ಹೇಳುತ್ತಾರಾ ಕಮಲ್ ಹಾಸನ್? title=

ನವದೆಹಲಿ: ರಾಜಕಾರಣದಲ್ಲಿ ಆಸಕ್ತಿ ತೋರಿಸಿರುವ ಕಮಲ್ ಹಾಸನ್ ಇನ್ನು ಮುಂದೆ ಸಿನಿಮಾ ಬದುಕಿಗೆ ವಿದಾಯ ಹೇಳುವ ಸಿದ್ದತೆ ನಡೆಸಿದ್ದಾರೆಯೇ ?ಎನ್ನುವ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ. 

ಈ ಕುರಿತಾಗಿ ಮಂಗಳವಾರದಂದು ಪ್ರತಿಕ್ರಯಿಸಿರುವ ಅವರು ಮುಂದೆ ಬಿಡುಗಡೆಯಾಗಲಿರುವ  ಚಿತ್ರಗಳ ಹೊರತಾಗಿ ಅನಂತರ ಯಾವುದೇ ಚಿತ್ರಗಳಿರುವುದಿಲ್ಲ ಎಂದು ತಿಳಿಸಿದ್ದಾರೆ.

ಮಂಗಳವಾರದಂದು ನ್ಯೂಸ್ ಚಾನೆಲ್ ಗೆ ಸಂದರ್ಶನ ನೀಡಿರುವ ಅವರು  "ನಾನು ಇಲ್ಲಿ ನನ್ನ ಬ್ಯಾಂಕ್ ಖಾತೆಯನ್ನು ಉತ್ತಮ ಪಡಿಸಲು ಇಲ್ಲಿಗೆ ಬಂದಿಲ್ಲ,ನಾನು ಜೀವನದ ನಿವೃತ್ತಿ ದಿನವನ್ನು ಸಂತೋಷವಾಗಿ ಕಳೆಯಬಹುದು,ಆದರೆ ನನ್ನ ರಾಜಕೀಯಕ್ಕೆ ಬರುವ ನನ್ನ ಆಲೋಚನೆ ಕೇವಲ ನಾನು ನಟನಾಗಿ ಉಳಿಯುವುದಲ್ಲ ಬದಲಾಗಿ ಜನರ ಸೇವೆಗೊಸ್ಕರವಾಗಿ ನನ್ನ ಜೀವನವನ್ನು ಮುಡಿಪಾಗಿಡಳು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.    

Trending News