Corona ಟೆಸ್ಟ್ ನಡೆಸಲು ವೈದ್ಯರ ಚೀಟಿ ಅಗತ್ಯವಿಲ್ಲ, ನ್ಯಾಯಾಲಯದ ಆದೇಶ

ಮಂಗಳವಾರ ದೆಹಲಿ ಹೈ ಕೋರ್ಟ್ ತೀರ್ಪೊಂದನ್ನು ಪ್ರಕಟಿಸಿದ್ದು, ಇದರಲ್ಲಿ ರಾಜಧಾನಿ ದೆಹಲಿಯಲ್ಲಿ ಕೊವಿಡ್ -19ನ RT/PCR ಪರೀಕ್ಷೆಗೆ ಒಳಗಾಗಲು ವೈದ್ಯರ ಚೀಟಿ ಅಥವಾ ಪ್ರಿಸ್ಕ್ರಿಪ್ಶನ್ ಕಡ್ಡಾಯವಲ್ಲ ಎಂದು ಹೇಳಿದೆ.

Last Updated : Sep 8, 2020, 09:26 PM IST
  • ಕೊವಿಡ್ -19ನ RT/PCR ಟೆಸ್ಟ್ ಗೆ ಪ್ರಿಸ್ಕ್ರಿಪ್ಶನ್ ಕಡ್ಡಾಯವಲ್ಲ.
  • ದೆಹಲಿ ಹೈ ಕೋರ್ಟ್ ಮಹತ್ವದ ತೀರ್ಪು.
  • ಆದರೆ, ದೆಹಲಿಯ ಅಡ್ರೆಸ್ ಪ್ರೂಫ್ ರೂಪದಲ್ಲಿ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯ.
Corona ಟೆಸ್ಟ್ ನಡೆಸಲು ವೈದ್ಯರ ಚೀಟಿ ಅಗತ್ಯವಿಲ್ಲ, ನ್ಯಾಯಾಲಯದ ಆದೇಶ title=

ನವದೆಹಲಿ: ಮಂಗಳವಾರ ದೆಹಲಿ ಹೈ ಕೋರ್ಟ್ ತೀರ್ಪೊಂದನ್ನು ಪ್ರಕಟಿಸಿದ್ದು, ಇದರಲ್ಲಿ ರಾಜಧಾನಿ ದೆಹಲಿಯಲ್ಲಿ Covid-19ನ RT/PCR ಪರೀಕ್ಷೆಗೆ ಒಳಗಾಗಲು ವೈದ್ಯರ ಚೀಟಿ ಅಥವಾ ಪ್ರಿಸ್ಕ್ರಿಪ್ಶನ್ ಕಡ್ಡಾಯವಲ್ಲ ಎಂದು ಹೇಳಿದೆ.

ಇಲ್ಲಿಯವರೆಗೆ, ಒಬ್ಬ ವ್ಯಕ್ತಿಯ ಕರೋನಾ ಪರೀಕ್ಷೆಯನ್ನು ನಡೆಸಲು ವೈದ್ಯರ  ಪ್ರಿಸ್ಕ್ರಿಪ್ಷನ್ ಅಥವಾ ಕರೋನಾ ರೋಗಲಕ್ಷಣಗಳನ್ನು ಹೊಂದಿರುವುದು ಕಡ್ಡಾಯವಾಗಿತ್ತು, ಆದರೆ ಇನ್ಮುಂದೆ ಅದು ಅನಿವಾರ್ಯವಲ್ಲ ಎಂದು ದೆಹಲಿ ನ್ಯಾಯಾಲಯ ಹೇಳಿದೆ. ಕರೋನಾ ಸಾಂಕ್ರಾಮಿಕ ರೋಗದೊಂದಿಗೆ ದೇಶಾದ್ಯಂತ ಜನರು ಹೆಣಗಾಡುತ್ತಿರುವ ಸಮಯದಲ್ಲಿ ಹೈಕೋರ್ಟ್ ನ ಈ ತೀರ್ಪು ಭಾರಿ ಮಹತ್ವಪಡೆದುಕೊಂಡಿದೆ.

ಆದರೆ, ಈ ತಪಾಸಣೆಗಾಗಿ ಜನರು ದೆಹಲಿಯ ವಿಳಾಸ ಪುರಾವೆಗಾಗಿ ವಿಳಾಸ ಪುರಾವೆ ರೂಪದಲ್ಲಿ ಆಧಾರ್ ಕಾರ್ಡ್ ಅನ್ನು ಕೊಂಡೊಯ್ಯಬೇಕಾಗುತ್ತದೆ ಎಂದು ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಹೇಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರ ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ. ಇದಲ್ಲದೆ, ಜನರು ಕೋವಿಡ್ -19 ಪರೀಕ್ಷೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಸೂಚಿಸಿರುವ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ದೆಹಲಿ ಉಚ್ಛ ನ್ಯಾಯಾಲಯ ದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ವೇಗವಾಗಿ ಬೆಳೆದಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ಲ್ಯಾಬ್ ಗಳಲ್ಲಿ ನಿತ್ಯ 2000 ಜನರ ಕೊವಿಡ್-19 ಟೆಸ್ಟ್ ನಡೆಸಲು ಹೇಳಲಾಗಿದೆ. ಇದರಲ್ಲಿ ಸ್ವಯಂ ಪ್ರೇರಣೆಯಿಂದ ಟೆಸ್ಟ್ ಗೆ ಒಳಗಾಗಲು ಬಯಸುವವರು ಕೂಡ ಶಾಮೀಲಾಗಿದ್ದಾರೆ ಎಂದು ನ್ಯಾಯಾ ಪೀಠ ಹೇಳಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿತ್ಯ ಸುಮಾರು 12,000 ಟೆಸ್ಟ್ ಗಳನ್ನು ನಡೆಸಲಾಗುತ್ತಿದೆ.

ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಕುರಿತು ಹೇಳುವುದಾದರೆ, ಇದುವರೆಗೆ ದೆಹಲಿಯಲ್ಲಿ ಒಟ್ಟು 1,93,526 ಕೊರೊನಾ ಪ್ರಕರಣಗಲಿವೆ. ಇಉಗಳಲ್ಲಿ 1, 68, 384 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ ಹಾಗೂ 20,543 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಹಾಮಾರಿಗೆ ಇದುವರೆಗೆ 4599 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

Trending News