ನಟಿ ಜಯಪ್ರದಾ ಅಜಂಖಾನ್ ನನ್ನು ಖಿಲ್ಜಿ ಎಂದಿದ್ದು ಯಾಕೆ ಗೊತ್ತಾ?

     

Last Updated : Mar 10, 2018, 05:15 PM IST
ನಟಿ ಜಯಪ್ರದಾ ಅಜಂಖಾನ್ ನನ್ನು ಖಿಲ್ಜಿ ಎಂದಿದ್ದು ಯಾಕೆ ಗೊತ್ತಾ? title=

ನವದೆಹಲಿ: ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಪದ್ಮವಾತ್ ಚಿತ್ರದಲ್ಲಿನ ಖಿಲ್ಜಿ ಇದ್ದ ಹಾಗೆ ಎಂದು ನಟಿ ಮತ್ತು ರಾಜಕಾರಣಿ ಜಯಪ್ರದಾ ಕಿಡಿಕಾರಿದ್ದಾರೆ.

ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಯಿಸಿರುವ ಜಯಪ್ರದಾ "ಪದ್ಮಾವತ್ ಚಿತ್ರದಲ್ಲಿನ ಖಿಲ್ಜಿ ಪಾತ್ರವನ್ನು ವಿಕ್ಷಿಸುತ್ತಿರುವಾಗ ನನಗೆ ಅಜಂ ಖಾನ್ ರ ನೆನಪು ಬಂದಿತು, ಕಾರಣ ಅವರು 2009 ರಲ್ಲಿ  ಉತ್ತರಪ್ರದೇಶದ ರಾಮಪುರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ತಮಗೆ ಸಾಕಷ್ಟು ಕಿರುಕುಳ ನೀಡಿದ್ದಲ್ಲದೆ ತಮ್ಮ ವ್ಯಕ್ತಿತ್ವವನ್ನು ಹಿನಗೋಳಿಸುವ ಪ್ರಯತ್ನ ಮಾಡಿದ್ದರು ಎಂದು ತಿಳಿಸಿದರು. 

ಈ ಹಿಂದೆ ತಿರುಚಿದ ಫೋಟೋಗಳನ್ನು ಹೊಂದಿರುವ ಸಿಡಿಗಳನ್ನು ಸಹಿತ ಅಜಂ ಖಾನ್ ವಿತರಿಸಿದ್ದರು ಎಂದು ಜಯಪ್ರದಾ ಆರೋಪಿಸಿದರು.

Trending News