ಎಂ. ಕರುಣಾನಿಧಿಯವರ ಸಮಾಧಿ ಮರೀನಾ ಬೀಚ್‌ನಲ್ಲೇ ಆಗಬೇಕು ಎಂದು ಡಿಎಂಕೆ ಒತ್ತಾಯಿಸಲು ಕಾರಣ ಏನು ಗೊತ್ತಾ?

ದ್ರಾವಿಡ ಚಳುವಳಿಯ ನಾಯಕ ಸಿ.ಎನ್. ಅಣ್ಣಾದುರೈ ಅವರ ಸಮಾಧಿ ಮರೀನಾ ಬೀಚ್‌ನಲ್ಲೇ ಇದೆ.  

Last Updated : Aug 8, 2018, 11:04 AM IST
ಎಂ. ಕರುಣಾನಿಧಿಯವರ ಸಮಾಧಿ ಮರೀನಾ ಬೀಚ್‌ನಲ್ಲೇ ಆಗಬೇಕು ಎಂದು ಡಿಎಂಕೆ ಒತ್ತಾಯಿಸಲು ಕಾರಣ ಏನು ಗೊತ್ತಾ?   title=

ಚೆನ್ನೈ: ದ್ರಾವಿಡ ಚಳುವಳಿಯ ಮೇರು ನಾಯಕ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಪಕ್ಷದ ಮುಖ್ಯಸ್ಥ ಎಂ. ಕರುಣಾನಿಧಿ ಇನ್ನು ನೆನಪು ಪಾತ್ರ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದ ಡಿಎಂಕೆ ಅಧಿನಾಯಕ ಎಂ. ಕರುಣಾನಿಧಿ ಅವರ ನಿಧನದ ಬೆನ್ನಲ್ಲೇ, ಅವರ ಅಂತ್ಯಸಂಸ್ಕಾರದ ವಿಚಾರ ವಿವಾದ ಸೃಷ್ಟಿಸಿದೆ. ಅಗಲಿದ ನಾಯಕನ ಅಂತ್ಯ ಕ್ರಿಯೆ ಚೆನ್ನೈನಲ್ಲಿರುವ ಮರೀನಾ ಬೀಚ್‌ನಲ್ಲೇ ಆಗಬೇಕು ಎಂದು ಡಿಎಂಕೆ ಒತ್ತಾಯಿಸಿದೆ. ಡಿಎಂಕೆ ಅಧಿನಾಯಕನ ಸಮಾಧಿ ಮರೀನಾ ಬೀಚ್‌ನಲ್ಲೇ ಆಗಬೇಕೆಂಬ ಒತ್ತಾಯಕ್ಕೆ ಕಾರಣ ಕೆಲವು ಪ್ರಮುಖ ಕಾರಣಗಳಿವೆ...

1. ದ್ರಾವಿಡ ಚಳುವಳಿಯ ನಾಯಕ ಸಿ.ಎನ್. ಅಣ್ಣಾದುರೈ ಅವರ ಸಮಾಧಿ ಮರೀನಾ ಬೀಚ್‌ನಲ್ಲೇ ಇದೆ.  1969ರಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ ಅವರು ನಿಧನರಾದರು. ಆಗ ಅವರ ಮೃತದೇಹವನ್ನು ಮರೀನಾ ಬೀಚ್‌ನಲ್ಲೇ ಸಮಾಧಿ ಮಾಡಲಾಯಿತು. ಅಣ್ಣಾದುರೈ ಮದ್ರಾಸ್ ರಾಜ್ಯದ ಕೊನೆಯ ಹಾಗೂ ಹೊಸದಾಗಿ ನಾಮಕರಣಗೊಂಡ ತಮಿಳುನಾಡಿನ ಮೊದಲ ಮುಖ್ಯಮಂತ್ರಿ. ಎಂ.ಜಿ. ರಾಮಚಂದ್ರನ್(ಎಂಜಿಆರ್) ಮತ್ತು ಎಂ. ಕರುಣಾನಿಧಿ ಅಣ್ಣಾದೊರೈ ಅವರನ್ನು ದ್ರಾವಿಡ ಚಳುವಳಿಯ ನಾಯಕ ಎಂದು ಭಾವಿಸಿದ್ದರು. ಈ ಕಾರಣಕ್ಕಾಗಿ ಮರೀನಾ ಬೀಚ್‌ ಬಳಿಯ ಅಣ್ಣ ಮೆಮರಿಯಲ್‌ನಲ್ಲಿ ಕರುಣಾನಿಧಿ ಅವರ ಸಮಾಧಿಗೆ ಡಿಎಂಕೆ ಒತ್ತಾಯಿಸಿದೆ.

2. ಅಣ್ಣಾದೊರೈ ನಿಧನದ ನಂತರ ಎಂ.ಜಿ. ರಾಮಚಂದ್ರನ್ (ಎಮ್ಜಿಆರ್) ಮತ್ತು ಎಂ ಕರುಣಾನಿಧಿ ನಡುವೆ ಯಾವುದೇ ಸಂಬಂಧವಿರಲಿಲ್ಲ. ಆದ್ದರಿಂದ 1972 ರಲ್ಲಿ ಎಂ.ಜಿ. ರಾಮಚಂದ್ರನ್ ಅವರು ಎಐಎಡಿಎಂಕೆ ಹೆಸರಿನಡಿಯಲ್ಲಿ ಪಕ್ಷವನ್ನು ರಚಿಸಿದರು. ಈ ಪಕ್ಷದ ಹೆಸರು ಅಣ್ಣಾದೊರೈ ಎಂಬ ಹೆಸರಿನಿಂದ ಸ್ಫೂರ್ತಿ ಪಡೆದಿದೆ. ಎಂ.ಜಿ.ಆರ್ 1977 ರಿಂದ 1987 ರವರೆಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಅವರ ಮರಣದ ನಂತರ ಅಣ್ಣಾದೊರೈ ಸಮಾಧಿಯ ಬಳಿಯಲ್ಲಿ ಅವರನ್ನು ಸಮಾಧಿ ಮಾಡಲಾಯಿತು.

3. ಈ ಇಬ್ಬರು ಮುಖಂಡರ ಮರಣದ ನಂತರ ಮರೀನಾ ಬೀಚ್ ಬಳಿ ದ್ರಾವಿಡ ಚಳವಳಿಯ ಯಾವುದೇ ಪ್ರಮುಖ ನಾಯಕನೂ ಇರಲಿಲ್ಲ. ಅದರ ನಂತರ, ಎಂ. ಜಿ. ಆರ್ ಉತ್ತರಾಧಿಕಾರಿ ಮತ್ತು ಎಐಎಡಿಎಂಕೆ ನಾಯಕಿಯಾಗಿದ್ದ ಜೆ. ಜಯಲಲಿತಾ ಅವರು 2016 ರಲ್ಲಿ ನಿಧನರಾದಾಗ, ಅದೇ ಮರೀನಾ ಕಡಲತೀರದಲ್ಲಿ ಅವರನ್ನು ಸಮಾಧಿ ಮಾಡಲಾಯಿತು. ಆದಾಗ್ಯೂ, ವಿಶ್ವದ ಎರಡನೆಯ ಅತಿದೊಡ್ಡ ಕಡಲತೀರವಾದ ಮರೀನಾ ಬೀಚ್ ನಲ್ಲಿ ಈಗ ಪರಿಸರ ಸಮಸ್ಯೆಗಳಿವೆ. ಅದಕ್ಕಾಗಿಯೇ ಈವರೆಗೆ ಜಯಲಲಿತಾ ಸಮಾಧಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ಎಲ್ಲಾ ದ್ರಾವಿಡ ನಾಯಕರು ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗಲೇ ಮರಣ ಹೊಂದಿದ್ದಾರೆ.

4. ಈ ಎಲ್ಲಾ ಕಾರಣಗಳಿಗಾಗಿ, ಮರಿನಾ ಬೀಚ್ ದ್ರಾವಿಡ ಚಳುವಳಿಯ ಗುರುತಿನ ಸಂಕೇತವಾಗಿದೆ. ಅಣ್ಣಾ ಸೇರಿದಂತೆ ಇತರ ಶ್ರೇಷ್ಠ ದ್ರಾವಿಡ ಮುಖಂಡರೊಂದಿಗೆ ಅವರ ನಾಯಕ ಕೂಡಾ ಮರೀನಾ ಬೀಚ್ನಲ್ಲಿ ಸ್ಥಾನ ಪಡೆಯಲಿ ಎಂದು ಡಿಎಂಕೆ ನಾಯಕರ, ಕಾರ್ಯಕರ್ತರು ಬಯಸಿದ್ದಾರೆ.

5. ಇದರ ಹಿಂದಿರುವ ಮತ್ತೊಂದು ದೊಡ್ಡ ವಿಷಯವೆಂದರೆ, ಮರೀನಾ ಬೀಚ್ನಲ್ಲಿ ಅಣ್ಣಾದೊರೈ ನಂತರ, ಎಐಎಡಿಎಂಕೆಯ ಇಬ್ಬರು ಮಹಾ ನಾಯಕರಾದ ಎಮ್ಜಿಆರ್ ಮತ್ತು ಜಯಲಲಿತಾ ಸಮಾಧಿ ಇದೆ. ಹಾಗಾಗಿ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿಯವರ ಸಮಾಧಿ ಕೂಡ ಮರೀನಾ ಬೀಚ್ ನಲ್ಲೇ ಇರುಬೇಕು ಎಂಬುದು ಡಿಎಂಕೆ ನಾಯಕರ ಬಯಕೆಕೆಯಾಗಿದೆ. 1967 ರಿಂದ 50 ವರ್ಷಕ್ಕೂ ಹೆಚ್ಚು ಕಾಲ ದ್ರಾವಿಡ್ ಪಕ್ಷಗಳು ತಮಿಳುನಾಡು ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದವು. ಈ ನಾಯಕರು ದ್ರಾವಿಡ ರಾಜಕೀಯದ ಅಸ್ಮಿತೆಯ ಗುರುತನ್ನು ಪ್ರತಿನಿಧಿಸುತ್ತಾರೆ.

Trending News