Driving Licence ಮರೆತು ವಾಹನ ಚಲಾಯಿಸಿದರೆ ಟೆನ್ಶನ್ ಪಡಬೇಡಿ… ಹೀಗೆ ಮಾಡಿದರೆ ಕೆಲಸ ನಡೆಯುತ್ತೆ

Driving Licence: ಇದೀಗ ಹೊಸ ತಂತ್ರಜ್ಞಾನ ಈ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಿದೆ. ಸಾಮಾನ್ಯವಾಗಿ ಮನೆಯಲ್ಲಿ ಪರವಾನಗಿಯನ್ನು ಮರೆತು, ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಹಣವನ್ನು ಪಾವತಿಸಬೇಕಾದ ಸಂದರ್ಭ ಸಂಭವಿಸುತ್ತದೆ. ಆದರೆ ಈಗ ನಿಮ್ಮ ಎಲ್ಲಾ ಕೆಲಸಗಳು ಸ್ಮಾರ್ಟ್‌ಫೋನ್‌ನಿಂದ ಸಾಧ್ಯವಾಗುತ್ತವೆ.

Written by - Bhavishya Shetty | Last Updated : Dec 6, 2022, 11:19 AM IST
    • ಡ್ರೈವಿಂಗ್ ಲೈಸೆನ್ಸ್ ಅನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ
    • ಹೊಸ ತಂತ್ರಜ್ಞಾನ ಈ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಿದೆ
    • ಈಗ ನಿಮ್ಮ ಎಲ್ಲಾ ಕೆಲಸಗಳು ಸ್ಮಾರ್ಟ್‌ಫೋನ್‌ನಿಂದ ಸಾಧ್ಯವಾಗುತ್ತವೆ
Driving Licence ಮರೆತು ವಾಹನ ಚಲಾಯಿಸಿದರೆ ಟೆನ್ಶನ್ ಪಡಬೇಡಿ… ಹೀಗೆ ಮಾಡಿದರೆ ಕೆಲಸ ನಡೆಯುತ್ತೆ title=
driving license

Download Digilocker: ಕೆಲವು ಬಾರಿ ವಾಹನ ಚಲಾವಣೆ ಮಾಡುವ ಸಂದರ್ಭದಲ್ಲಿ ನಾವು ಡ್ರೈವಿಂಗ್ ಲೈಸನ್ಸ್ ತೆಗೆದುಕೊಂಡು ಹೋಗುವುದನ್ನು ಮರೆಯುತ್ತೇವೆ. ಈ ವೇಳೆ ಟ್ರಾಫಿಕ್ ಪೊಲೀಸರು ಎದುರಾದರೆ ಖಂಡಿತ ಸಮಸ್ಯೆ ಕಟ್ಟಿಟ್ಟಬುತ್ತಿ. ಹೀಗಾಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ದಂಡ ಪಾವತಿಸುವುದಕ್ಕಿಂದ ಲೈಸನ್ಸ್ ಇಟ್ಟುಕೊಳ್ಳುವುದೇ ಉತ್ತಮ ಎಂಬುದು ಎಲ್ಲರ ಭಾವನೆ.

ಇದನ್ನೂ ಓದಿ: Gujarat Assembly Election Exit Poll Results 2022 : ಗುಜರಾತ್‌ನಲ್ಲಿ ಬಿಜೆಪಿಗೆ ಸತತ 7ನೇ ಬಾರಿ ಹ್ಯಾಟ್ರಿಕ್ ಗೆಲುವಾಗಲಿದೆ!

ಇದೀಗ ಹೊಸ ತಂತ್ರಜ್ಞಾನ ಈ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಿದೆ. ಸಾಮಾನ್ಯವಾಗಿ ಮನೆಯಲ್ಲಿ ಪರವಾನಗಿಯನ್ನು ಮರೆತು, ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಹಣವನ್ನು ಪಾವತಿಸಬೇಕಾದ ಸಂದರ್ಭ ಸಂಭವಿಸುತ್ತದೆ. ಆದರೆ ಈಗ ನಿಮ್ಮ ಎಲ್ಲಾ ಕೆಲಸಗಳು ಸ್ಮಾರ್ಟ್‌ಫೋನ್‌ನಿಂದ ಸಾಧ್ಯವಾಗುತ್ತವೆ.

ಈಗ ನಿಮ್ಮ ಜೇಬಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೂ ಸಹ ನೀವು ದಂಡ ತೆರಬೇಕಾಗಿಲ್ಲ. ಏಕೆಂದರೆ ನೀವು ಫೋನ್‌ನಲ್ಲಿ ಈ ಒಂದು ಕೆಲಸವನ್ನು ಮಾಡಿದರೆ ಸಾಕು. ನೀವು ಮಾಡಬೇಕಾಗಿರುವುದು ಇಷ್ಟೇ. ಸ್ಮಾರ್ಟ್ ಫೋನ್ ಮೂಲಕ ಡಿಜಿಲಾಕರ್ ಎಂಬ ಆಪ್ ನ್ನು ಡೌನ್ ಲೋಡ್ ಮಾಡಿಟ್ಟುಕೊಳ್ಳಿಬೇಕು. ಇದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.   

ನಿಮ್ಮ ಫೋನ್‌ನಲ್ಲಿ ಡಿಜಿಲಾಕರ್ ಇದ್ದರೆ, ಟೆನ್ಷನ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಈ ಆ್ಯಪ್‌ನಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್, ವಾಹನದ ದಾಖಲೆಗಳು, ವಾಹನ ವಿಮೆ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಇತರ ಹಲವು ದಾಖಲೆಗಳನ್ನು ಸೇವ್ ಮಾಡಿಟ್ಟುಕೊಳ್ಳಬಹುದು. ಇದರ ನಂತರ ಟ್ರಾಫಿಕ್ ಪೊಲೀಸರು ವಾಹನದ ಪೇಪರ್‌ಗಳನ್ನು ತೋರಿಸಲು ನಿಲ್ಲಿಸಿದರೆ, ನೀವು ಫೋನ್‌ನಲ್ಲಿರುವ ಎಲ್ಲಾ ಪೇಪರ್‌ಗಳನ್ನು ತೋರಿಸಬಹುದು. ಇದನ್ನು ತೋರಿಸುವುದರ ಮೂಲಕ ನೀವು ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು. ಇದು ಸೌಲಭ್ಯ ಸಂಪೂರ್ಣವಾಗಿ ಮಾನ್ಯವಾಗಿದೆ.

ವಾಹನ ಚಲಾಯಿಸುವಾಗ ನಿಮ್ಮ ಬಳಿ ದಾಖಲೆಗಳು ಇಲ್ಲದಿದ್ದರೆ ನೀವು ದಂಡ ತೆರಬೇಕಾಗುತ್ತದೆ. ಅಥವಾ ನ್ಯಾಯಾಲಯದಲ್ಲಿ ನೀವು ಅಪ್ಲಿಕೇಶನ್‌ನಲ್ಲಿರುವ ದಾಖಲೆಗಳನ್ನು ತೋರಿಸುವ ಮೂಲಕ ಚಲನ್ ಕಡಿತಗೊಳಿಸಬಹುದು. ಆದರೆ ನೀವು ಪ್ರಯಾಣದ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಚಾಲನೆ ಮಾಡುವಾಗ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದೆ. ಅದು ಸ್ಮಾರ್ಟ್‌ಫೋನ್‌ನಲ್ಲಿರಲಿ ಅಥವಾ ಡಿಎಲ್‌ನಲ್ಲಿರಲಿ. ಡಿಜಿಲಾಕರ್ ಅಪ್ಲಿಕೇಶನ್ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು. ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ ದಾಖಲೆಗಳು ಎಲ್ಲೆಡೆ ಸ್ವೀಕಾರಾರ್ಹ.

ಇದನ್ನೂ ಓದಿ: Shocking Video : ಸೀನಿದ ಮರು ಘಳಿಗೆ ಪ್ರಾಣಬಿಟ್ಟ ವ್ಯಕ್ತಿ! ಸಾವು ಹೀಗೂ ಬರಬಹುದೇ?

ಆದರೆ ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬುದು ನೆನಪಿನಲ್ಲಿಟ್ಟುಕೊಳ್ಳಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News