ನವದೆಹಲಿ: ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಮರು ಆರಂಭಿಸುವುದಕ್ಕೂ ಮೊದಲು ಕೇಂದ್ರ ಸರ್ಕಾರ ನೂತನ ಆದೇಶವೊಂದನ್ನು ಹೊರಡಿಸಿದೆ. ಹೌದು, ಮುಂಬರುವ ದಿನಗಳಲ್ಲಿ ಒಂದು ವೇಳೆ ನೀವು ವಿದೇಶಕ್ಕೆ ಹೋಗಲು ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿಯನ್ನೊಮ್ಮೆ ತಪ್ಪದೆ ಓದಿ. ನಿರ್ಲಕ್ಷಿಸಿದರೆ ನಿಮಗೆ ಹಾನಿಯಾಗುವ ಸಾಧ್ಯತೆ ಇದೆ. ಕೊರೊನಾ ವೈರಸ್ ಮಹಾಮಾರಿ ಹಾಗೂ ನಿರಂತರ ಲಾಕ್ ಡೌನ್ ಬಳಿಕ ಭಾರತದಿಂದ ಹೊರಡುವ ಹಾಗೂ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
DGCA ಹೊರಡಿಸಿದ ನೂತನ ಆದೇಶ ಇದು
ಪ್ರಸ್ತುತ ದೆಶಾಧ್ಯಂತ ಅನ್ಲಾಕ್-4 ಪ್ರಕ್ರಿಯೆಗಳು ಆರಂಭಗೊಂಡ ನಡುವೆಯೇ, ನಾಗರಿಕ ವಿಮಾನಯಾನ ಮಹಾ ನಿರ್ದೇಶಕ (DGCA), ನೂತನ ಆದೇಶವೊಂದನ್ನು ಜಾರಿಗೊಳಿಸಿದ್ದಾರೆ. ಈ ಆದೇಶದ ಅನುಸಾರ ಭಾರತಕ್ಕೆ ಬರುವ ಹಾಗೂ ಭಾರತದಿಂದ ಹೊರಡುವ ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧನೆಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದೆ.
ಈ ಕುರಿತು ಇಲಾಖೆಗೆ ಸಂಬಂಧಿಸಿದ ಸೂತ್ರಗಳು ನೀಡಿರುವ ಮಾಹಿತಿ ಪ್ರಕಾರ ಅಂತಾರಾಷ್ಟ್ರೀಯ ಯಾತ್ರೆ ಹಾಗೂ ವಿಸಾ ಕುರಿತು ಕೇಂದ್ರ ಸರ್ಕಾರ ಹೊಸ ಸರ್ಕ್ಯೂಲರ್ ಜಾರಿಗೊಳಿಸಿದೆ. ಈ ಸುತ್ತೋಲೆಯಲ್ಲಿ ಸೆಪ್ಟೆಂಬರ್ 30ರ ರಾತ್ರಿ 11.59ರವರೆಗೆ ಶೆಡ್ಯೂಲ್ ಆಗಿರುವ ಎಲ್ಲ ಕಮರ್ಷಿಯಲ್ ಪ್ಯಾಸೆಂಜರ್ ಫ್ಲೈಟ್ಸ್ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎನ್ನಲಾಗಿದೆ. ಆದರೆ, ಗೃಹ ಇಲಾಖೆಯಿಂದ ಸ್ವಿಕೃತಿ ಪಡೆದ ಉಡಾವಣೆಗಳ ಮೇಲೆ ಈ ಆದೇಶ ಅನ್ವಯಿಸುವುದಿಲ್ಲ. ಅದಲ್ಲದೆ, ಇತರ ಎಲ್ಲ ರೀತಿಯ ಕಾರ್ಗೋ ಫ್ಲೈಟ್ಸ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಮಾರ್ಚ್ 23 ರ ಬಳಿಕ ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಹಾಗೂ ದೇಶೀಯ ವಿಮಾನಯಾನ ಸೇವೆಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಮೇ 25ರಿಂದ ಶೇ.33 ರಷ್ಟು ಕ್ಷಮತೆಯೊಂದಿಗೆ ದೇಶೀಯ ವಿಮಾನಯಾನ ಸೇವೆಯನ್ನು ಪುನಃ ಆರಂಬಿಸಲು DGCA ಅನುಮೋದನೆ ನೀಡಿದ್ದು, ಬಳಿಕ ಅದನ್ನು ಶೇ.45ಕ್ಕೆ ಹೆಚ್ಚಿಸಲಾಗಿದೆ. ಒಂದೇ ಭಾರತ ಮಿಷನ್ ಅಡಿ ಕೆಲ ಆಯ್ದ ಮಾರ್ಗಗಳಲ್ಲಿ ಮಾತ್ರ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗೆ ಅನುಮತಿ ನೀಡಲಾಗಿದೆ.