ಜಿ-20 ಶೃಂಗಸಭೆ ಹಿನ್ನೆಲೆ ದೆಹಲಿಯಲ್ಲಿ ʼಮಿನಿ ಲಾಕ್‌ಡೌನ್ʼ..!

G-20 controlled zone in Delhi : ಜಿ-20 ಶೃಂಗಸಭೆ ಹಿನ್ನೆಲೆ ದೆಹಲಿಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಹಾಗೂ ಖಾಸಗಿ ಕಛೇರಿಗಳಿಗೆ ಸೆಪ್ಟೆಂಬರ್‌ 8 ರಿಂದ 10 ರವರೆಗೆ ರಜೆ ಘೋಷಿಸಲಾಗಿದೆ.

Written by - Zee Kannada News Desk | Last Updated : Sep 1, 2023, 07:08 PM IST
  • ದೆಹಲಿಯಲ್ಲಿ ಜಿ-20 ಶೃಂಗಸಭೆ ಹಿನ್ನೆಲೆ ಮಿನಿ ಲಾಕ್‌ಡೌನ್.
  • ಜಿ-20 ಶೃಂಗಸಭೆಯಲ್ಲಿ 43 ದೇಶಗಳು ಭಾಗಿ.
  • ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಹಾಗೂ ಖಾಸಗಿ ಕಛೇರಿಗಳಿಗೆ ಸೆಪ್ಟೆಂಬರ್‌ 8 ರಿಂದ 10 ರವರೆಗೆ ರಜೆ ಘೋಷಣೆ.
 ಜಿ-20 ಶೃಂಗಸಭೆ ಹಿನ್ನೆಲೆ ದೆಹಲಿಯಲ್ಲಿ ʼಮಿನಿ ಲಾಕ್‌ಡೌನ್ʼ..! title=

G-20 Summit : ಈ ಜಾಗತಿಕ ಸನ್ನಿವೇಶದಲ್ಲಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲಿರುವ 43 ದೇಶಗಳಿಗೆ ದೆಹಲಿ ಆತಿಥ್ಯವಹಿಸಲಿದ್ದು, ದೆಹಲಿ ನಗರದಲ್ಲಿ ಅಗತ್ಯಕ್ಕನುಸಾರವಾಗಿ ಕೆಲವೊಂದು ತಾತ್ಕಾಲಿಕ ಕಟ್ಟುಪಾಡುಗಳನ್ನು ಸಿದ್ಧಗೊಳಿಸಿದೆ. ಅವುಗಳಲ್ಲಿ ಟ್ರಾಫಿಕ್‌ನ ಸೂಚನೆಗಳಲ್ಲಿನ ಮಾದರಿಗಳ ಬದಲಾವಣೆಗಳು, ಅದರೊಂದಿಗೆ ತಯಾರಿಗೆ ಅವಶ್ಯಕ ಸರಕು ಮತ್ತು ಸೇವೆಗಳಿಗೂ ಏರ್ಪಾಡು ನಡೆಯುತ್ತಿದೆ.

ಈ ಹಿನ್ನೆಲೆ ಜಿ-20 ಶೃಂಗಸಭೆಯ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಹಾಗೂ ಖಾಸಗಿ ಕಛೇರಿಗಳಿಗೆ ಸೆಪ್ಟೆಂಬರ್‌ 8 ರಿಂದ 10 ರವರೆಗೆ ರಜೆ ಘೋಷಿಸಲಾಗಿದೆ. ಯಾವುದೇ ಅಡಚಣೆಗಳಿಗೆ ಆಸ್ಪದ ಕೊಡದಂತೆ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ. ಅದಲ್ಲದೇ ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳು, ದಿನಬಳಕೆಯ ಸಾಮಗ್ರಿಗಳು, ಔಷಧಿಯ ವಸ್ತುಗಳು ಎಲ್ಲವೂ ಎಂದಿನಂತೆ ಲಭ್ಯವಿದ್ದು, ತಾತ್ಕಾಲಿಕ ಕಟ್ಟುಪಾಡುಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಇದನ್ನೂ ಓದಿ :ರಜನಿಕಾಂತ್ ಮಾತ್ರವಲ್ಲ, ಈ ಸಿನಿ ತಾರೆಯರಿಗೂ ಉಡುಗೊರೆಯಾಗಿ ಸಿಕ್ಕಿದೆ ಕೋಟ್ಯಾಂತರ ಮೌಲ್ಯದ ಕಾರು

ದೆಹಲಿಯ ಕೆಲವು ಪ್ರದೇಶಗಳನ್ನು ನಿರ್ಬಂಧಗೊಳಿಸಲಾಗಿರುತ್ತದೆ ಮತ್ತು ಅಕ್ಷರಧಾಮ, ಡಿಎನ್‌ಡಿ ರಸ್ತೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಆದರೆ ಕೆಲವೊಂದು ರಸ್ತಗಳು ತಾತ್ಕಾಲಿಕವಾಗಿ ನಿರ್ಬಂಧವಾಗಿರುತ್ತವೆ. ಜಿ-20 ಶೃಂಗಸಭೆಯ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಈ ಎಲ್ಲಾ ಅಗತ್ಯ ಕಟ್ಟುಪಾಡುಗಳನ್ನು ಹೇರಲಾಗಿದ್ದು, ದೆಹಲಿಯು ಅಂತರರಾಷ್ಟ್ರೀಯ ಮಟ್ಟದ ಸಂದರ್ಭಕ್ಕೆ ಸಾಕ್ಷಿಯಾಗಿ,ಜಿ-20 ಶೃಂಗಸಭೆಗೆ ಆತಿಥ್ಯವಹಿಸಲು ಸಿದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News