ಮಸೀದಿ, ದೇವಸ್ತಾನಗಳನ್ನು ಧ್ವಂಸಗೊಳಿಸಿದ ಲೋಕೋಪಯೋಗಿ ಇಲಾಖೆ

ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯು ಶನಿವಾರ (ಫೆಬ್ರವರಿ 25) ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ಮಧ್ಯ ದೆಹಲಿಯ ಕಾಲುದಾರಿಯಲ್ಲಿದ್ದ ಮಸೀದಿ ಮತ್ತು ದೇವಾಲಯ ಸೇರಿದಂತೆ ಧಾರ್ಮಿಕ ರಚನೆಗಳನ್ನು ನೆಲಸಮಗೊಳಿಸಿದೆ.

Written by - Zee Kannada News Desk | Last Updated : Feb 25, 2023, 04:08 PM IST
  • ಲಾಧಾ ಸರಾಯ್ ಗ್ರಾಮದಲ್ಲಿರುವ ತನ್ನ ಭೂಮಿಯಿಂದ ಅತಿಕ್ರಮಣವನ್ನು ತೆಗೆದುಹಾಕಲು ನೆಲಸಮ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
  • ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮತ್ತು ದೆಹಲಿಯ ರಾಜ್ಯ ಪುರಾತತ್ವ ಇಲಾಖೆಯ ರಕ್ಷಣೆಯಲ್ಲಿ
  • ಈ ಉದ್ಯಾನವನವು ಸುಮಾರು 55 ಸ್ಮಾರಕಗಳನ್ನು ಹೊಂದಿದೆ ಎಂದು ಡಿಡಿಎ ಹೇಳಿದೆ.
ಮಸೀದಿ, ದೇವಸ್ತಾನಗಳನ್ನು ಧ್ವಂಸಗೊಳಿಸಿದ ಲೋಕೋಪಯೋಗಿ ಇಲಾಖೆ title=

ನವದೆಹಲಿ: ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯು ಶನಿವಾರ (ಫೆಬ್ರವರಿ 25) ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ಮಧ್ಯ ದೆಹಲಿಯ ಕಾಲುದಾರಿಯಲ್ಲಿದ್ದ ಮಸೀದಿ ಮತ್ತು ದೇವಾಲಯ ಸೇರಿದಂತೆ ಧಾರ್ಮಿಕ ರಚನೆಗಳನ್ನು ನೆಲಸಮಗೊಳಿಸಿದೆ.

ಇದನ್ನೂ ಓದಿ : Commissioner Dance : 'ಡಿಜೆ ಸೌಂಡಿಗೆ ಸ್ಟೆಪ್ಸ್ ಹಾಕಿ ಜನರಿಗೆ ಡ್ರಗ್ಸ್ ಜಾಗೃತಿ ಮೂಡಿಸಿದ ಕಮೀಷನರ್'

ವರದಿಗಳ ಪ್ರಕಾರ ಪಾದಚಾರಿ ಮಾರ್ಗದಲ್ಲಿ ಧಾರ್ಮಿಕ ರಚನೆಗಳನ್ನು ನಿರ್ಮಿಸಲಾಗಿದೆ ಮತ್ತು ಅವುಗಳನ್ನು ಕೆಡವಲು ನ್ಯಾಯಾಲಯ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ಮಾತನಾಡಿ, ‘ಪಾದಚಾರಿ ಮಾರ್ಗದಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಚಾಲನೆ ನೀಡಲಾಗುತ್ತಿದೆ, ಈ ಕುರಿತು ನ್ಯಾಯಾಲಯದ ಆದೇಶವಿದೆ’ ಎಂದರು.ದಾಳಿ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಇದನ್ನೂ ಓದಿ : ಅಳಿವಿನಂಚಿಗೆ ತಲುಪಿದ ರಣಹದ್ದು!! 3 ರಾಜ್ಯಗಳಲ್ಲಿ ಏಕಕಾಲಕ್ಕೆ ಜಟಾಯು ಸಮೀಕ್ಷೆ

ನಗರದಾದ್ಯಂತ ಅತಿಕ್ರಮಣ ವಿರೋಧಿ ಕಾರ್ಯಾಚರಣೆಗಳ ಭಾಗವಾಗಿ, ಫೆಬ್ರವರಿಯಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮೆಹ್ರೌಲಿ ಪುರಾತತ್ವ ಉದ್ಯಾನವನದ ಲಾಧಾ ಸರಾಯ್ ಗ್ರಾಮದಲ್ಲಿರುವ ತನ್ನ ಭೂಮಿಯಿಂದ ಅತಿಕ್ರಮಣವನ್ನು ತೆಗೆದುಹಾಕಲು ನೆಲಸಮ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮತ್ತು ದೆಹಲಿಯ ರಾಜ್ಯ ಪುರಾತತ್ವ ಇಲಾಖೆಯ ರಕ್ಷಣೆಯಲ್ಲಿ ಈ ಉದ್ಯಾನವನವು ಸುಮಾರು 55 ಸ್ಮಾರಕಗಳನ್ನು ಹೊಂದಿದೆ ಎಂದು ಡಿಡಿಎ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News