ಬಿಸಿಲಿನ ಪರಿಣಾಮ ಶಾಲೆಗಳ ಬೇಸಿಗೆ ರಜೆ ವಿಸ್ತರಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಪರಿತ ಬಿಸಿಲಿನ ಪರಿಣಾಮದಿಂದಾಗಿ ದೆಹಲಿ ಸರ್ಕಾರವು ನಗರದ ಶಾಲೆಗಳಲ್ಲಿ ಬೇಸಿಗೆ ರಜೆಯನ್ನು 8ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ವಾರ ವಿಸ್ತರಿಸಲು ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಜುಲೈ 8 ರಂದು ಶಾಲೆಗಳು ಮತ್ತೆ ತೆರೆಯಲಿವೆ ಎನ್ನಲಾಗಿದೆ.

Last Updated : Jun 30, 2019, 05:18 PM IST
ಬಿಸಿಲಿನ ಪರಿಣಾಮ ಶಾಲೆಗಳ ಬೇಸಿಗೆ ರಜೆ ವಿಸ್ತರಿಸಿದ ದೆಹಲಿ ಸರ್ಕಾರ   title=
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಪರಿತ ಬಿಸಿಲಿನ ಪರಿಣಾಮದಿಂದಾಗಿ ದೆಹಲಿ ಸರ್ಕಾರವು ನಗರದ ಶಾಲೆಗಳಲ್ಲಿ ಬೇಸಿಗೆ ರಜೆಯನ್ನು 8ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ವಾರ ವಿಸ್ತರಿಸಲು ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಜುಲೈ 8 ರಂದು ಶಾಲೆಗಳು ಮತ್ತೆ ತೆರೆಯಲಿವೆ ಎನ್ನಲಾಗಿದೆ.

ಇನ್ನು ಉನ್ನತ ತರಗತಿಗಳಿಗೆ ಹಿಂದಿನ ವೇಳಾಪಟ್ಟಿಯ ಪ್ರಕಾರದಂತೆ ಸೋಮವಾರದಿಂದ ಪ್ರಾರಂಭವಾಗಲಿದೆ ಎನ್ನಲಾಗಿದೆ. ಈಗ ಸರ್ಕಾರದ ನಿರ್ಧಾರವನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

"ದೆಹಲಿಯ ಬಿಸಿಲಿನ ಪರಿಣಾಮದಿಂದ 8 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯನ್ನು ಜುಲೈ 8 ರವರೆಗೆ ವಿಸ್ತರಿಸಲಾಗುತ್ತಿದೆ. ಇತರ ತರಗತಿಗಳಿಗೆ ಶಾಲೆಗಳು ಹಿಂದಿನ ವೇಳಾಪಟ್ಟಿಯಂತೆ ಮತ್ತೆ ತೆರೆಯಲ್ಪಡುತ್ತವೆ" ಎಂದು ಹೇಳಿದ್ದಾರೆ. ಈ ಆದೇಶವು ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗಲಿದೆ ಎಂದು ಶಿಕ್ಷಣ ಸಚಿವರಾಗಿರುವ ಸಿಸೋಡಿಯಾ ಸ್ಪಷ್ಟಪಡಿಸಿದ್ದಾರೆ. ಇನ್ನು ನಗರದಲ್ಲಿ ಬಿಸಿಲಿನ ಏರಿಕೆ ಇನ್ನು ಮುಂದುವರಿಯಬಹುದು ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.

 

Trending News