ಲಕ್ನೋ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಫೆಬ್ರವರಿ ತಿಂಗಳಲ್ಲಿ ಲಕ್ನೋದಲ್ಲಿ 'ಡಿಫೆನ್ಸ್ ಎಕ್ಸ್‌ಪೋ -2020'(Defence Expo 2020) ನಡೆಯಲಿದೆ ಎಂದು ಘೋಷಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ ಭಾರತದಲ್ಲಿ ರಕ್ಷಣಾ ಉತ್ಪಾದನೆ ಮತ್ತು ಏರೋಸ್ಪೇಸ್ ತಯಾರಿಕೆಗೆ ಉತ್ತರ ಪ್ರದೇಶವು ಒಂದು ತಾಣವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಮ್ಮೇಳನದ ಮೊದಲು ಸಿಎಂ ಯೋಗಿ ಆದಿತ್ಯನಾಥ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಅವರೊಂದಿಗೆ 'ಡಿಫೆನ್ಸ್ ಎಕ್ಸ್‌ಪೋ -2020' ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಮಾತನಾಡಿದ ಆದಿತ್ಯನಾಥ್, ಫೆಬ್ರವರಿಯಲ್ಲಿ ನಡೆಯಲಿರುವ ಡಿಫೆನ್ಸ್ ಎಕ್ಸ್‌ಪೋಗೆ ಸಿದ್ಧತೆಗಳು ನಡೆಯುತ್ತಿವೆ. ಭಾರತದಲ್ಲಿ ರಕ್ಷಣಾ ಉತ್ಪಾದನೆ ಮತ್ತು ಏರೋಸ್ಪೇಸ್ ತಯಾರಿಕೆಗೆ ಉತ್ತರ ಪ್ರದೇಶವು ಒಂದು ತಾಣವಾಗಲಿದೆ ಎಂದು ನನಗೆ ಮನವರಿಕೆಯಾಗಿದೆ ಎಂದವರು ತಿಳಿಸಿದರು.
ಅವರ ಸಾಧನೆಗಳ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್(Yogi Adityanath), '' ಉತ್ತರ ಪ್ರದೇಶದಲ್ಲಿ, ನಾವು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿದ್ದೇವೆ. ನಾವು ಲಕ್ನೋದಲ್ಲಿ ಹೂಡಿಕೆದಾರರ ಶೃಂಗಸಭೆ, ವಾರಣಾಸಿಯಲ್ಲಿ ಎನ್‌ಆರ್‌ಐ ಸಮ್ಮೇಳನ ಮತ್ತು ಪ್ರಯಾಗರಾಜ್‌ನಲ್ಲಿ ಕುಂಭವನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ. ಇಲ್ಲಿ ಆಯೋಜಿಸಲಾದ ಅನೇಕ ಕಾರ್ಯಕ್ರಮಗಳು ಜಾಗತಿಕ ಮನ್ನಣೆಯನ್ನು ಗಳಿಸಿವೆ" ಎಂದರು.
ಎಕ್ಸ್‌ಪೋಗೆ ಉತ್ತರ ಪ್ರದೇಶವನ್ನು ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ರಾಜನಾಥ್ ಸಿಂಗ್ ಅವರಿಗೆ ಆದಿತ್ಯನಾಥ್ ಧನ್ಯವಾದ ಅರ್ಪಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಡಿಫೆನ್ಸ್ ಎಕ್ಸ್‌ಪೋ 2020 ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಪ್ರದರ್ಶನವಾಗಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಲಿರುವ ಭಾರತದ ಅತಿದೊಡ್ಡ ಎಕ್ಸ್‌ಪೋ ಇದಾಗಿದೆ. ಅನೇಕ ಹೂಡಿಕೆದಾರರು ಒಪ್ಪಂದಕ್ಕೆ ಒಪ್ಪಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ಬರುತ್ತಿದ್ದಾರೆ ಮತ್ತು ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಅವರು ಉತ್ಸುಕರಾಗಿದ್ದಾರೆ'' ಎಂದರು.
DefExpo India- 2020 ರ ವಿಷಯವು 'ಭಾರತ: ಉದಯೋನ್ಮುಖ ರಕ್ಷಣಾ ಉತ್ಪಾದನಾ ಕೇಂದ್ರ' ಮತ್ತು 'ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಆಫ್ ಡಿಫೆನ್ಸ್' ಬಗ್ಗೆ ಗಮನ ಹರಿಸಲಿದೆ ಎಂದವರು ತಿಳಿಸಿದರು.
ಹಿರಿಯ ವಿದೇಶಿ ನಿಯೋಗಗಳೊಂದಿಗೆ ಬಿಸಿನೆಸ್-ಟು-ಬ್ಯುಸಿನೆಸ್ (ಬಿ 2 ಬಿ) ಸಂವಾದದಲ್ಲಿ ತೊಡಗಿಸಿಕೊಳ್ಳಲು ಭಾರತೀಯ ಸಂಸ್ಥೆಗಳಿಗೆ ಡಿಫೆನ್ಸ್ ಎಕ್ಸ್‌ಪೋ ಅವಕಾಶ ನೀಡುತ್ತದೆ. ಇದು ಸರ್ಕಾರದಿಂದ ಸರ್ಕಾರಕ್ಕೆ (ಜಿ 2 ಜಿ) ಸಭೆಗಳು ಮತ್ತು ಜ್ಞಾಪಕ ಪತ್ರಗಳ ಸಹಿ (ಎಂಒಯು) ಗೆ ಸಹಕರಿಸುತ್ತದೆ. 2018 ರಲ್ಲಿ ಚೆನ್ನೈ ಮೊದಲ ಬಾರಿಗೆ ದ್ವೈವಾರ್ಷಿಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು.