ಮೂಲ ಲೇಖಕರು: ದಯಾಶಂಕರ್ ಮಿಶ್ರಾ
ಪ್ರತಿ ಮಾತಿಗೂ ಮುನ್ನ ಯೋಚಿಸುವುದು ಒಳ್ಳೆಯದು. ಅಷ್ಟಕ್ಕೂ ನಮ್ಮ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಆ ಮೂಲಕ ನಾವು ಕೇವಲ ಮನಸ್ಸು ಮತ್ತು ಬುದ್ಧಿಗೆ ಹೆಚ್ಚು ಗಮನ ಕೊಡುವತ್ತ ಸಾಗುತ್ತೇವೆ. ಇದರಿಂದ ನಾವೆಲ್ಲ ಯಾಂತ್ರಿಕ ಜೀವನಕ್ಕೆ ಒಳಪಟ್ಟಿದ್ದೇವೆ. ಆ ಮೂಲಕ ನಾವು ಮಾತನಾಡುವ ಪ್ರತಿ ಕ್ಷಣ ಮತ್ತು ಜೀವನ ಗಣಿತದ ಲೆಕ್ಕಾಚಾರದಂತಾಗಿದೆ. ಆದ್ದರಿಂದ ಯಾರು ಈ ಲೆಕ್ಕಾಚಾರದಲ್ಲಿ ಇರುವುದಿಲ್ಲವೋ ಅವರು ಜೀವನದಿಂದ ಹೊರಗೆ ಎನ್ನುವಂತಾಗಿದೆ. ನಾವು ಇಲ್ಲಿ ಯಾರು ಎನ್ನುವುದನ್ನು ಎಲ್ಲರು ಎನ್ನುವ ಅರ್ಥದಲ್ಲಿ ಹೇಳಬಹುದು. ಇಂತಹ ಸ್ಥಿತಿಯಲ್ಲಿ ಪೋಷಕರು ಪಾಲು ಅಧಿಕ ಎನ್ನುವಂತಾಗಿದೆ.
ಸ್ನೇಹಿತರನ್ನು ಭೇಟಿಯಾಗುವುದು, ಪರಿಚಯಸ್ಥರ ಹತ್ತಿರ ಹೋಗುವುದು, ಮಾತನಾಡುವುದು ಎಲ್ಲವು ಕೂಡ ಈಗ ಲೆಕ್ಕಾಚಾರದ ನಡೆಯಾಗಿದೆ. ಮಕ್ಕಳು ಬೆಳೆದಿದ್ದಾರೋ ಗೊತ್ತಿಲ್ಲ ಆದರೆ ಅವರು ಲೆಕ್ಕಾಚಾರದಲ್ಲಿ ಹೆಚ್ಚು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಂದೆ ತಾಯಿ ಜೊತೆಗಿನ ಸಂಬಂಧ ಇಂದು ಅವರ ಅಗತ್ಯತೆಗಿನ ಆಧಾರದ ಮೇಲೆ ನಿಂತಿದೆ. ಇನ್ನೊಂದೆಡೆ ಯಾವಾಗ ಪೋಷಕರು 60 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಾರೋ ಆಗ ಅವರು ಹೊರದೇಶದಲ್ಲಿನ ತಮ್ಮ ಮಕ್ಕಳಿಗೆ ಪ್ರಮುಖರಲ್ಲ ಎನ್ನುವಂತಾಗಿದೆ. ಈಗ ಈ ಪರಿಸ್ಥಿತಿ ಸ್ವದೇಶದಲ್ಲಿರುವ ಯುವಕರಿಗೂ ಬಂದಿದೆ. ಆದ್ದರಿಂದ ಈಗ ಅವರು ಸ್ವದೇಶದಲ್ಲಿಯೂ ಕೂಡ ವಿದೇಶದಲ್ಲಿರುವವರಂತೆ ವರ್ತಿಸುತ್ತಿದ್ದಾರೆ.
ಪ್ರತಿ ನಾಲ್ಕು ತಿಂಗಳಿಗೊಮ್ಮೆ ವೀಕೆಂಡ್ ದಿನಗಳಲ್ಲಿನ ಪ್ರವಾಸದ ಸಂದರ್ಭದಲ್ಲಿ ಹಿರಿಯರನ್ನು ಪ್ರವಾಸದ ಪಟ್ಟಿಯಿಂದ ಹೊರಗಿಡಲ್ಪಟ್ಟಿದ್ದಾರೆ. ಇನ್ನು ಅವರನ್ನು ದೂರದ ಸ್ಥಳಗಳಿಗೆ ಕರೆದುಕೊಂಡು ಹೋಗುವುದು ದೂರದ ಮಾತು. ಅಲ್ಲದೆ ಈಗ ಕೆಲಸದ ವೇಳೆಯಲ್ಲಿ ಹಿರಿಯರಿಗಾಗಿ ಎರಡು ದಿನ ಮಿಸಲಿಡುವುದು ಕೂಡ ಈಗ ಸಾಧ್ಯವಾಗುತ್ತಿಲ್ಲ
ಈ ಬಾರಿಯ ಡಿಯರ್ ಜಿಂದಗಿ ಜೀವನ ಸಂವಾದದ ಪ್ರಮುಖವಾಗಿ ಇತ್ತೀಚಿಗೆ ನಾವು ಮಧ್ಯ ಪ್ರದೇಶದ ರೇವಾದಲ್ಲಿನ ಹಿರಿಯರ ಜೊತೆ ಮಾತುಕತೆ ನಡೆಯಿತು. ಅದರಲ್ಲಿ ಒಬ್ಬ ನಿವೃತ್ತ ಪ್ರಿನ್ಸಿಪಾಲ್ ನಿಗೆ ನಾನು ಅವರ ಮನೆಯಲ್ಲಿರುವವರ ಕುರಿತಾದ ಕೌಟುಂಬಿಕ ವಿಚಾರವಾಗಿ ಪ್ರಶ್ನೆಗೆಳೆದೆ. ಆಗ ಅವನು ಸ್ವಲ್ಪ ಸಮಯ ತೆಗೆದುಕೊಂಡು ಉತ್ತರಿಸುತ್ತಾ " ನಾಲ್ಕು ಮಕ್ಕಳಿದ್ದಾರೆ, ಮೂವರು ಗಂಡು ಮಕ್ಕಳು, ಒಬ್ಬಳು ಮಗಳು ಇದ್ದಾಳೆ, ಎಲ್ಲರು ಕೂಡ ಒಂದು ಹಂತಕ್ಕೆ ಸೆಟ್ಟಲ್ ಆಗಿದ್ದಾರೆ ಎಂದ ಇನ್ನು ಮುಂದುವರೆದು "ಆದರೆ ಯಾರಿಗೂ ಕೂಡ ನಮ್ಮ ಯೋಗ ಕ್ಷೇಮ ವಿಚಾರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬರಿ ಗಂಡ ಹೆಂಡತಿ ಅಂತ ಇಬ್ಬರು ಎಷ್ಟು ಮಾತನಾಡೋದು, ಎಲ್ಲೋ ಒಂದು ಕಡೆ ಜೀವನ ಅಪೂರ್ಣ ಎನಿಸಿ ಈಗ ಒಂಟಿತನ ಜೀವನದ ಭಾಗ ಎನ್ನುವಂತಾಗಿದೆ" ಎಂದು ಏದುಸಿರು ಬಿಟ್ಟ.
ಈ ಟೊಳ್ಳು ಅಭಿವೃದ್ದಿ ಮಾದರಿಯು ಜೀವನದಲ್ಲಿನ ಹಲವು ಸಂಗತಿಗಳನ್ನು ಇಲ್ಲವಾಗಿಸಿದೆ. ಈಗ ಹಳ್ಳಿಗಳು ಖಾಲಿ ಎನಿಸುತ್ತಿವೆ, ಅಲ್ಲಿ ಯುವಕರಿಗೆ ಜಾಗ ಇಲ್ಲವೇನೋ ಅನಿಸುವಂತಾಗಿದೆ. ಅಲ್ಲದೆ ಹಳ್ಳಿಯಲ್ಲಿನ ಹಿರಿಯರು ಈಗ ಒಬ್ಬಂಟಿಗರಾಗಿದ್ದಾರೆ. ಒಂದು ಕಡೆ ಮಕ್ಕಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತನೆ ಮಾಡುತ್ತಾ ತಮ್ಮ ಪೋಷಕರನ್ನು ಅವರ ಪ್ರಾಮುಖ್ಯತೆಯ ಪಟ್ಟಿಯಲ್ಲಿ ಇಲ್ಲ ಎನ್ನುವ ಹಾಗಾಗಿದೆ. ಆದ್ದರಿಂದ ಇಬ್ಬರು ಸೇರಿ ತಮ್ಮ ತಮ್ಮ ಏಕಾಂಗಿತನವನ್ನು ಬೆಳಸುತ್ತಿದ್ದಾರೆ. ಆ ಮೂಲಕ ಜೀವನ ಎನ್ನವುದು ಈಗ ನಡುರಾತ್ರಿಗೆ ಬಂದು ತಲುಪಿದೆ.
ಇದು ಕನಸುಗಳ ಸ್ಪರ್ಧೆಯಾಗಿದೆ, ಇಂತಹ ಮಹತ್ವಾಕಾಂಕ್ಷೆಯಲ್ಲಿ ಅವರಿಗೆ ಯಾವುದೇ ಸ್ಥಾನವಿಲ್ಲದಂತಾಗಿದೆ. ಅಂತಹ ಏಣಿಯನ್ನು ನಾವೀಗ ತಲುಪಿದ್ದೇವೆ, ಅಲ್ಲದೆ ನಾವು ಕರಿಯರ್ ಎನ್ನುವ ಹೆಸರಿನಲ್ಲಿ ನಮ್ಮ ಮಕ್ಕಳಿಗೆ ಕಲಿಸುತ್ತಿರುವುದು ಅಥವಾ ಕಲಿಯುತ್ತಿರುವುದಾದರೂ ಏನು ಎನ್ನುವಂತಾಗಿದೆ. ಆದ್ದರಿಂದ ಇದರ ಮಧ್ಯ ನೈತಿಕತೆಗೆ ಯಾವುದೇ ಸ್ಥಾನ ಇಲ್ಲ ಎನ್ನುವಂತಾಗಿದೆ
ನಾವು ಈಗ ಮನುಷ್ಯರಿಂದ ಮತ್ತು ಮನುಷ್ಯತ್ವದಿಂದ ನಮ್ಮ ಮಕ್ಕಳನ್ನು ದೂರವಿಡುತ್ತಿದ್ದೇವೆ. ಆ ಮೂಲಕ ಜಗತ್ತಿನ ಬುನಾದಿಯನ್ನು ನಮ್ಮ ಕೈಯಿಂದಲೇ ತೋಡುತ್ತಿದ್ದೇವೆ. ಅದೇ ರೀತಿ ನಾವು ಹಿರಿಯರಿಗೆ ಅನ್ಯಾಯವೆಸಗುತ್ತಿದೇವೆ. ಆದ್ದರಿಂದ ಈಗ ನಮ್ಮ ಜೀವನದಲ್ಲಿ ಒಂಟಿತನವೊಂದನ್ನು ಬಿಟ್ಟು ಮತ್ತಿನ್ಯಾರು ಇಲ್ಲವೆನ್ನುವಂತಾಗಿದೆ.
ಕನ್ನಡದಲ್ಲಿ 'ಡಿಯರ್ ಜಿಂದಗಿ' ಎಲ್ಲಾ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ: ಡಿಯರ್ ಜಿಂದಗಿ
ಮರಾಠಿ ಭಾಷೆಯಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ : डिअर जिंदगी : बुद्धीने 'बाहेर' येण्याची गरज
ಬೆಂಗಾಲಿ ಭಾಷೆಯಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ :ডিয়ার জিন্দগি: মগজ না, হৃদয় দিয়ে ভাবা যাক
ಹಿಂದಿ ಭಾಷೆಯಲ್ಲಿ ಎಲ್ಲಾ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ : डियर जिंदगी
(ಈ ಲೇಖನದ ಕುರಿತಾಗಿ ನಿಮ್ಮ ಪ್ರಶ್ನೆ ಮತ್ತು ಅಭಿಪ್ರಾಯಗಳನ್ನು ತಿಳಿಸಲು ಮೆಸೇಜ್ ಮಾಡಿ: https://www.facebook.com/dayashankar.mishra.54)