ದಾಲ್ ರೋಟಿ ತಿನ್ನಲ್ಲ ಎಂದ ನವಜೋತ್ ಸಿಂಗ್ ಸಿಧು

ಈಗ ಎರಡು ದಿನಗಳಿಂದ  ಸೆರೆವಾಸ ಅನುಭವಿಸುತ್ತಿರುವ ನವಜೋತ್ ಸಿಂಗ್ ಸಿಧು ಅವರು ಜೈಲು ಪ್ರವೇಶಿಸಿದ ಮೊದಲ ರಾತ್ರಿಯಿಂದ ಏನನ್ನೂ ಸೇವಿಸಿಲ್ಲ ಎನ್ನಲಾಗಿದೆ. ಶನಿವಾರದಂದು ಅವರು ದಾಲ್ ರೋಟಿ ನೀಡಲು ಮುಂದಾದಾಗ ಅದಕ್ಕೆ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ.

Written by - Zee Kannada News Desk | Last Updated : May 23, 2022, 10:08 PM IST
  • ಶನಿವಾರದಂದು ಅವರು ದಾಲ್ ರೋಟಿ ನೀಡಲು ಮುಂದಾದಾಗ ಅದಕ್ಕೆ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ.
  • ‘ವೈದ್ಯರು ಸಿದ್ದುಗೆ ವಿಶೇಷ ಆಹಾರ ನೀಡುವಂತೆ ಶಿಫಾರಸು ಮಾಡಿದ್ದರೆ, ಜೈಲು ಕ್ಯಾಂಟೀನ್‌ನಿಂದ ಖರೀದಿಸಿ ತಿನ್ನಲು ಅವಕಾಶ ನೀಡಬಹುದು.
ದಾಲ್ ರೋಟಿ ತಿನ್ನಲ್ಲ ಎಂದ ನವಜೋತ್ ಸಿಂಗ್ ಸಿಧು  title=

ನವದೆಹಲಿ: ಈಗ ಎರಡು ದಿನಗಳಿಂದ  ಸೆರೆವಾಸ ಅನುಭವಿಸುತ್ತಿರುವ ನವಜೋತ್ ಸಿಂಗ್ ಸಿಧು ಅವರು ಜೈಲು ಪ್ರವೇಶಿಸಿದ ಮೊದಲ ರಾತ್ರಿಯಿಂದ ಏನನ್ನೂ ಸೇವಿಸಿಲ್ಲ ಎನ್ನಲಾಗಿದೆ. ಶನಿವಾರದಂದು ಅವರು ದಾಲ್ ರೋಟಿ ನೀಡಲು ಮುಂದಾದಾಗ ಅದಕ್ಕೆ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ.

ದಿನನಿತ್ಯದ ಔಷಧಿಯನ್ನು ಬಿಟ್ಟರೆ ಬೇರೇನೂ ತಿನ್ನುತ್ತಿರಲಿಲ್ಲ.ಇದರಿಂದ ಸೋಮವಾರ ಬೆಳಗ್ಗೆ ಅವರನ್ನು ಪಟಿಯಾಲಾದ ರಾಜೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜೈಲಿನ ಮೂಲಗಳ ಪ್ರಕಾರ ಆಸ್ಪತ್ರೆಯಲ್ಲಿ ದೈಹಿಕ ಪರೀಕ್ಷೆಗೆ ಒಳಗಾಗಲಿದ್ದಾರೆ.ಇದಕ್ಕಾಗಿ ವೈದ್ಯಕೀಯ ಮಂಡಳಿಯನ್ನೂ ರಚಿಸಲಾಗಿದೆ. ಇದು ಸಿದ್ದು ಅವರ ಡಯಟ್‌ ಚಾರ್ಟ್‌ ಸಿದ್ಧಪಡಿಸಲಿದೆ.

ಇದನ್ನೂ ಓದಿ: Vikrant Rona: ‘ಗಡಂಗ್​ ರಕ್ಕಮ್ಮ’ ಎಂಟ್ರಿಗೆ ಡೇಟ್‌ ಫಿಕ್ಸ್.. ಇಲ್ಲಿದೆ ವಿಕ್ರಾಂತ್‌ ರೋಣ ಹೊಸ ಅಪ್‌ಡೇಟ್ಸ್‌

‘ವೈದ್ಯರು ಸಿದ್ದುಗೆ ವಿಶೇಷ ಆಹಾರ ನೀಡುವಂತೆ ಶಿಫಾರಸು ಮಾಡಿದ್ದರೆ, ಜೈಲು ಕ್ಯಾಂಟೀನ್‌ನಿಂದ ಖರೀದಿಸಿ ತಿನ್ನಲು ಅವಕಾಶ ನೀಡಬಹುದು’ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ವೈದ್ಯಕೀಯ ಮಂಡಳಿಯ ವೈದ್ಯರು ಸಿಧು ಅವರ ಡಯಟ್ ಚಾರ್ಟ್ ಸಿದ್ಧಪಡಿಸಿ ಪಟಿಯಾಲದ ಸ್ಥಳೀಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.ಅದರಂತೆ ನವಜೋತ್ ಸಿಧುಗೆ ಅನ್ನ ಸಿಗಲಿದೆ.

ಇದನ್ನೂ ಓದಿ:'ತುರ್ತು ನಿರ್ಗಮನ' ಸಿನಿಮಾದಿಂದ ಅಪ್ಪುಗೆ ಗಾನ ನಮನ...ಹೇಗಿದೆ 'ಜೀವ' ಹಾಡು ಕೇಳಿ ಈಗ?

ಗೋಧಿ, ಸಕ್ಕರೆ, ಮೈದಾ ಮುಂತಾದ ಸಕ್ಕರೆ ಅಂಶವಿರುವ ಆಹಾರಗಳನ್ನು ಸಿದ್ದು ತಿನ್ನುವಂತಿಲ್ಲ, ಅವರಿಗೆ ಪಪ್ಪಾಯಿ, ಪೇರಲ, ಡಬ್ಬಲ್ ಟೋನ್ಡ್ ಹಾಲು ಹಾಗೂ ಸಕ್ಕರೆ ಇಲ್ಲದ ಆಹಾರಗಳನ್ನು ನೀಡಬೇಕಾಗುತ್ತದೆ ಎಂದು ಅವರ ವಕೀಲರು ಹೇಳಿದ್ದಾರೆ.ಪಟಿಯಾಲ ಜೈಲಿನ ಮೂಲಗಳ ಪ್ರಕಾರ,ಸಿಧು ಅವರು ವೈದ್ಯರ ಸಲಹೆಯಂತೆ ನಿಯಮಿತವಾಗಿ ತೆಗೆದುಕೊಳ್ಳಬೇಕಾದ ಔಷಧಿಗಳನ್ನು ಸೇವಿಸಿದ್ದಾರೆ.ಆದರೆ ಆಹಾರದ ಕೊರತೆಯಿಂದ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ವೈದ್ಯರು ಅವರಿಗೆ ಏನು ಸಲಹೆ ನೀಡುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.

ರಸ್ತೆ ಹಿಂಸಾಚಾರ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.ಪಂಜಾಬ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು ಮೇ 20 ರಂದು ಪಟಿಯಾಲ ನ್ಯಾಯಾಲಯದ ಮುಂದೆ ಶರಣಾದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News