ಇಂದು ಸಿಡಬ್ಲ್ಯೂಸಿ ಸಭೆ ; ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ನೀಡುವ ಸಂಭವ

    

Last Updated : Nov 20, 2017, 10:35 AM IST
ಇಂದು ಸಿಡಬ್ಲ್ಯೂಸಿ ಸಭೆ ; ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ನೀಡುವ ಸಂಭವ title=

ನವದೆಹಲಿ: ಕಾಂಗ್ರೆಸ್ ಪಕ್ಷದ ಅತ್ಯುನ್ನತ ನಿರ್ಧಾರಕ ಮಂಡಳಿಯಾದ ಸಿಡಬ್ಲ್ಯೂಸಿ(ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಸಭೆಯು ಸೋನಿಯಾ ಗಾಂಧಿ ಅವರ ನಿವಾಸ ೧೦ ಜನಪಥ್ನಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆ ವೇಳಾಪಟ್ಟಿಯನ್ನು ನಿರ್ಧರಿಸುವ ಸಂಬಂಧ ಸಿಡಬ್ಲ್ಯೂಸಿ ಸಭೆ ಕರೆಯಲಾಗಿದ್ದು, ಹಾಲಿ ಉಪಾಧ್ಯಕ್ಷ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರುವ ಸಾಧ್ಯತೆಯಿದೆ. ನಾಮನಿರ್ದೇಶನ ಮತ್ತು ಚುನಾವಣೆ ಸಲ್ಲಿಸುವ ದಿನಾಂಕ ಸೇರಿದಂತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯ ವೇಳಾಪಟ್ಟಿಯನ್ನು ಸಿಡಬ್ಲ್ಯುಸಿ ನಿರ್ಧರಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಅಧ್ಯಕ್ಷೀಯ ಚುನಾವಣೆಯ ವೇಳಾಪಟ್ಟಿಯನ್ನು ಅನುಮೋದಿಸಲು ಸಿಡಬ್ಲ್ಯೂಸಿಯ ಔಪಚಾರಿಕ ಸಭೆ ನಡೆಸುವುದು ಅನಿವಾರ್ಯವಾಗಿದ್ದರೂ ಪಕ್ಷದ ನಾಯಕರ ಒಪ್ಪಿಗೆ ಪಡೆದು ಉನ್ನತ ನಿರ್ಧಾರ ತೆಗೆದುಕೊಳ್ಳಲು ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ.

ಸಂಪೂರ್ಣ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪಕ್ಷವು ಡಿಸೆಂಬರ್ 31 ರವರೆಗೆ ಸಮಯವನ್ನು ಹೊಂದಿದ್ದು, ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಿದೆ.

Trending News