ಕ್ರಿಕೆಟರ್ ರವೀಂದ್ರ ಜಡೇಜಾ ತಂದೆ ಹಾಗೂ ಸಹೋದರಿ ಕಾಂಗ್ರೆಸ್ ಗೆ ಸೇರ್ಪಡೆ

ರವೀಂದ್ರ ಜಡೇಜಾ ಪತ್ನಿ ಬಿಜೆಪಿಗೆ ಸೇರಿದ ಒಂದು ತಿಂಗಳ ನಂತರ ಅವರ ತಂದೆ ಮತ್ತು ಸಹೋದರಿ ಭಾನುವಾರ ಗುಜರಾತ್ ನಲ್ಲಿ  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಮುಖಂಡ ಮತ್ತು ಪಾಟೀದರ್ ನಾಯಕ  ಹಾರ್ದಿಕ್ ಪಟೇಲ್ ಅವರು ಉಪಸ್ಥಿತಿಯಲ್ಲಿ ಕಾಂಗ್ರೆಸ್ ಗೆ ಸೇರಿದ್ದಾರೆ.

Last Updated : Apr 14, 2019, 06:56 PM IST
ಕ್ರಿಕೆಟರ್ ರವೀಂದ್ರ ಜಡೇಜಾ ತಂದೆ ಹಾಗೂ ಸಹೋದರಿ ಕಾಂಗ್ರೆಸ್ ಗೆ ಸೇರ್ಪಡೆ title=

ಜಾಮ್ ನಗರ್: ರವೀಂದ್ರ ಜಡೇಜಾ ಪತ್ನಿ ಬಿಜೆಪಿಗೆ ಸೇರಿದ ಒಂದು ತಿಂಗಳ ನಂತರ ಅವರ ತಂದೆ ಮತ್ತು ಸಹೋದರಿ ಭಾನುವಾರ ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಮುಖಂಡ ಮತ್ತು ಪಾಟೀದರ್ ನಾಯಕ  ಹಾರ್ದಿಕ್ ಪಟೇಲ್ ಅವರು ಉಪಸ್ಥಿತಿಯಲ್ಲಿ ಕಾಂಗ್ರೆಸ್ ಗೆ ಸೇರಿದ್ದಾರೆ.

ಜಡೇಜಾ ಅವರ ತಂದೆ, ಅನಿರುದ್ಸಿನ್ ಮತ್ತು ಸಹೋದರಿ ನೈನಬಾ, ಜಾಮ್ನಗರ್ ಜಿಲ್ಲೆಯ ಕಲಾವದ್ ನಗರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಜಾಮ್ನಗರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುಲು ಕಂಡೋರಿಯಾ ಉಪಸ್ಥಿತರಿದ್ದರು ಎನ್ನಲಾಗಿದೆ.ಕಳೆದ ತಿಂಗಳು ಮಾರ್ಚ್ 3 ರಂದು ಜಡೇಜಾ ಪತ್ನಿ ರಿವಾಬಾ ಅವರು ಜಾಮನಗರ್ ದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 

ಜಾಮನಗರ್ ದಿಂದ  ಹಾರ್ದಿಕ್ ಪಟೇಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇತ್ತು.ಆದರೆ ಏಪ್ರಿಲ್ 2 ರಂದು ಸುಪ್ರೀಂ ಕೋರ್ಟ್ ಅವರು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಪ್ರಕರಣದ ವಿಚಾರವಾಗಿ ಶಿಕ್ಷೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ನಿರಾಕರಿಸಿತ್ತು.ಇದಾದ ನಂತರ ಅವರು ಚುನಾವಣೆಗೆ ನಿಲ್ಲುವ ಎಲ್ಲ ಸಾಧ್ಯತೆಗಳು ಕಡಿಮೆಯಾದವು. ಗುಜರಾತ್ ನಲ್ಲಿ 26 ಲೋಕಸಭಾ ಸ್ಥಾನಗಳಿಗೆ ಮತದಾನವು ಏಪ್ರಿಲ್ 23 ರಂದು ಮೂರನೇ ಹಂತದಲ್ಲಿ ನಡೆಯಲಿದೆ.

Trending News