ನ್ಯಾವಿಗೇಷನ್ ಚಾರ್ಟ್ ಮರೆತು ಬ್ಯಾಂಕಾಕ್‌ಗೆ ಹಾರಿದ ಗೋಏರ್ ವಿಮಾನ! ಮುಂದೇನಾಯ್ತು?

 ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್‌ಗೆ ಹೊರಟಿದ್ದ ಗೋಏರ್ ವಿಮಾನವೊಂದು ಕೆಲವೇ ಕ್ಷಣಗಳಲ್ಲಿ ಹಿಂದಿರುಗಿದ ಘಟನೆ ಶುಕ್ರವಾರ ನಡೆದಿದೆ. 

Last Updated : Aug 17, 2019, 02:32 PM IST
ನ್ಯಾವಿಗೇಷನ್ ಚಾರ್ಟ್ ಮರೆತು ಬ್ಯಾಂಕಾಕ್‌ಗೆ ಹಾರಿದ ಗೋಏರ್ ವಿಮಾನ! ಮುಂದೇನಾಯ್ತು?  title=

ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್‌ಗೆ ಹೊರಟಿದ್ದ ಗೋಏರ್ ವಿಮಾನವೊಂದು ಕೆಲವೇ ಕ್ಷಣಗಳಲ್ಲಿ ಹಿಂದಿರುಗಿದ ಘಟನೆ ಶುಕ್ರವಾರ ನಡೆದಿದೆ. 

ವಿಮಾನಗಳು ಕಾರ್ಯನಿರ್ವಹಿಸುವಾಗ ಕಡ್ಡಾಯವಾಗಿ ಹೊಂದಿರಬೇಕಾದ ನ್ಯಾವಿಗೇಷನ್ ಚಾರ್ಟ್ ಅನ್ನೇ ಮರೆತು ಬ್ಯಾಂಕಾಕ್‌ಗೆ ಹಾರಿದ್ದ ಬಜೆಟ್ ಕ್ಯಾರಿಯರ್ ಗೋಏರ್ ನ ದೆಹಲಿ-ಬ್ಯಾಂಕಾಕ್ ವಿಮಾನ ಕೆಲವೇ ಕ್ಷಣಗಳಲ್ಲಿ ರಾಜಧಾನಿಗೆ ಮರಳಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ವಿಮಾನವು ಬ್ಯಾಂಕಾಕ್‌ಗೆ ಹೊರಡುವ ಮುನ್ನ ಕಡ್ಡಾಯವಾಗಿ ಹೊಂದಿರಬೇಕಾದ ನ್ಯಾವಿಗೇಷನ್ ಚಾರ್ಟ್‌ಗಳನ್ನು ಇರಿಸಿಕೊಂಡಿಲ್ಲ ಎಂಬುದನ್ನು ಸಿಬ್ಬಂದಿ ಅರಿತ ಕೂಡಲೇ 146 ಪ್ರಯಾಣಿಕರಿದ್ದ ಗೋಏರ್ ಎ 320 ವಿಮಾನ-ವಿಟಿ ಡಬ್ಲ್ಯುಜೆಎ- ನವದೆಹಲಿಗೆ ಮರಳಿತು. ಬಳಿಕ ಅಗತ್ಯ ಚಾರ್ಟ್ ಗಳನ್ನು ಪಡೆದು ಮತ್ತೆ ವಿಮಾನವು ಬ್ಯಾಂಕಾಕ್ ಗೆ ಮರಳಿತು ಎಂದು ವಿಮಾನ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

Trending News