ಹಿಮಾಚಲ ಪ್ರದೇಶದಲ್ಲಿ ಹಸುವಿಗೆ ಸ್ಫೋಟಕ-ಮಿಶ್ರಿತ ತಿನಿಸು ನೀಡಿದ ವ್ಯಕ್ತಿ ಬಂಧನ

ಕೇರಳದಲ್ಲಿ ಗರ್ಭಿಣಿ ಆನೆಯೊಂದು ಸ್ಫೋಟಕ ತುಂಬಿದ ಅನಾನಸ್‌ನಿಂದ ಆಹಾರ ಸೇವಿಸಿ ಸಾವನ್ನಪ್ಪಿದ ಕೆಲ ದಿನಗಳ ನಂತರ, ಹಿಮಾಚಲ ಪ್ರದೇಶದಲ್ಲಿ ಶನಿವಾರ ಇದೇ ರೀತಿಯ ಪ್ರಕರಣ ವರದಿಯಾಗಿದೆ, ಅಲ್ಲಿ ಒಂದು ಹಸುವಿಗೆ ಸ್ಫೋಟಕಗಳೊಂದಿಗೆ ಬೆರೆಸಿದ ಪದಾರ್ಥಗಳನ್ನು ತಿನ್ನಿಸಿದ ನಂತರ ಗಾಯಗೊಂಡಿದೆ.

Last Updated : Jun 6, 2020, 10:49 PM IST
ಹಿಮಾಚಲ ಪ್ರದೇಶದಲ್ಲಿ ಹಸುವಿಗೆ ಸ್ಫೋಟಕ-ಮಿಶ್ರಿತ ತಿನಿಸು ನೀಡಿದ ವ್ಯಕ್ತಿ ಬಂಧನ   title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೇರಳದಲ್ಲಿ ಗರ್ಭಿಣಿ ಆನೆಯೊಂದು ಸ್ಫೋಟಕ ತುಂಬಿದ ಅನಾನಸ್‌ನಿಂದ ಆಹಾರ ಸೇವಿಸಿ ಸಾವನ್ನಪ್ಪಿದ ಕೆಲ ದಿನಗಳ ನಂತರ, ಹಿಮಾಚಲ ಪ್ರದೇಶದಲ್ಲಿ ಶನಿವಾರ ಇದೇ ರೀತಿಯ ಪ್ರಕರಣ ವರದಿಯಾಗಿದೆ, ಅಲ್ಲಿ ಒಂದು ಹಸುವಿಗೆ ಸ್ಫೋಟಕಗಳೊಂದಿಗೆ ಬೆರೆಸಿದ ಪದಾರ್ಥಗಳನ್ನು ತಿನ್ನಿಸಿದ ನಂತರ ಗಾಯಗೊಂಡಿದೆ.

ಪಿಟಿಐ ಪ್ರಕಾರ ಈ ಆಘಾತಕಾರಿ ಘಟನೆ ಬಿಲಾಸ್ಪುರ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ.ಈಗ ಘಟನೆಗೆ ಸಂಬಂಧಿಸಿದಂತೆ ಬಿಲಾಸ್ಪುರ್ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಗರ್ಭ ಧರಿಸಿದ ಹಸುವಿನ ಮಾಲೀಕರು ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ಬಂಧನವನ್ನು ಮಾಡಲಾಗಿದೆ, ಇದರಲ್ಲಿ ಶಂಕಿತ ವ್ಯಕ್ತಿಯು ಸ್ಫೋಟಕಗಳನ್ನು ಬೆರೆಸಿದ ಕೆಲವು ವಸ್ತುಗಳನ್ನು ತಿನ್ನಿಸಿದ್ದಾನೆ ಎಂದು ಆರೋಪಿಸಿದ್ದಾನೆ.

ಕಳೆದ ತಿಂಗಳು ಬಿಲಾಸ್ಪುರ ಜಿಲ್ಲೆಯ ದಹಾದ್ ಗ್ರಾಮದ ತನ್ನ ನೆರೆಹೊರೆಯ ನಂದ್ ಲಾಲ್ ಧೀಮಾನ್ ತನ್ನ ಗರ್ಭಿಣಿ ಹಸುವಿಗೆ ಸ್ಫೋಟಕಗಳೊಂದಿಗೆ ಬೆರೆಸಿದ ಕೆಲವು ತಿನ್ನಬಹುದಾದ ಪದಾರ್ಥಗಳೊಂದಿಗೆ ಆಹಾರವನ್ನು ನೀಡಿದ್ದಾನೆ ಎಂದು ಹಸು ಮಾಲೀಕ ಗುರ್ಡಿಯಾಲ್ ಸಿಂಗ್ ಆರೋಪಿಸಿರುವ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಬಂಧನ ಮಾಡಲಾಗಿದೆ.

ಈ ಬೆಳವಣಿಗೆಯನ್ನು ಧೃಡಿಕರಿಸಿದ ಬಿಲಾಸ್ಪುರ ಪೊಲೀಸ್ ವರಿಷ್ಠಾಧಿಕಾರಿ ದೇವಕರ್ ಶರ್ಮಾ, ನಂದ್ ಲಾಲ್ ಅವರನ್ನು ಶನಿವಾರ ತಮ್ಮ ಗ್ರಾಮದಿಂದ ಬಂಧಿಸಲಾಗಿದೆ.ಪೊಲೀಸ್ ತಂಡವು ವೈದ್ಯರ ಜೊತೆಗೆ ಗ್ರಾಮದ ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಹಸುವನ್ನು ಪರೀಕ್ಷಿಸಿತು.ಹಸುವಿನ ಬಾಯಿ ಮತ್ತು ದವಡೆಯು ಹೆಚ್ಚು ಗಾಯಗೊಂಡಿರುವುದು ಕಂಡುಬಂದಿದೆ, ಹಸುವಿಗೆ ತ್ವರಿತ ವೈದ್ಯಕೀಯ ನೆರವು ನೀಡಲಾಗಿದೆ ಎಂದು ಎಸ್‌ಪಿ ಹೇಳಿದರು.

Trending News