Covid-19 Vaccine News: ಇನ್ಮುಂದೆ ಲಸಿಕೆ ಉತ್ಪಾದಕರಿಂದ ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಪಡೆಯುವ ಹಾಗಿಲ್ಲ

Covid-19 Vaccine News - ಕಳೆದ ತಿಂದಳ ಯಾವುದೇ ಒಂದು ವಾರದಲ್ಲಿ ನಿತ್ಯ ಬಳಕೆಯಾದ ವ್ಯಾಕ್ಸಿನ್ ಗಳ ಎರಡು ಪಟ್ಟು ಲಸಿಕೆಗಳನ್ನು ಮಾತ್ರ ಖರೀದಿಸಿ ಸಂಗ್ರಹಿಸಿಡಬಹುದು. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳು (Private Hospitals) ವಾರದ ಯಾವುದೇ ಒಂದು ದಿನದಲ್ಲಿ ಬಳಕೆಯಾದ ಒಟ್ಟು ಲಸಿಕೆಗಳನ್ನು ಆಧಾರವಾಗಿಟ್ಟುಕೊಳ್ಳಬಹುದಾಗಿದೆ. 

Written by - Nitin Tabib | Last Updated : Jun 30, 2021, 01:55 PM IST
  • ಲಸಿಕೆ ಉತ್ಪಾದಕರಿಂದ ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಖರೀದಿಸುವ ಹಾಗಿಲ್ಲ.
  • ಲಸಿಕೆ ಖರೀದಿಗಾಗಿ CoWin ಪ್ಲಾಟ್ಫಾರ್ಮ್ ಮೂಲಕ ಮಾತ್ರ ಆರ್ಡರ್ ಮಾಡಬಹುದು.
  • ಆಸ್ಪತ್ರೆಗಳಲ್ಲಿರುವ ಒಟ್ಟು ಬೆಡ್ ಗಳ ಆಧಾರದ ಮೇಲೆ ವ್ಯಾಕ್ಸಿನ್ ಸಿಗಲಿದೆ
Covid-19 Vaccine News: ಇನ್ಮುಂದೆ ಲಸಿಕೆ ಉತ್ಪಾದಕರಿಂದ ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಪಡೆಯುವ ಹಾಗಿಲ್ಲ title=
Covid-19 Vaccine News (Representational Image)

Covid-19 Vaccine News - ಕೊರೊನಾ ವ್ಯಾಕ್ಸಿನ್ ಗಾಗಿ (Covid-19 Vaccine)ಕೇಂದ್ರ ಸರ್ಕಾರ (Central Government) ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಖಾಸಗಿ ಆಸ್ಪತ್ರೆಗಳು ಜುಲೈ 1ರಿಂದ ಕೇವಲ CoWin ಪ್ಲಾಟ್ಫಾರ್ಮ್ (CoWin Platform) ಮೂಲಕವೇ ಲಸಿಕೆಗಳಿಗಾಗಿ ಆರ್ಡರ್ ಮಾಡಬೇಕು ಎಂದಿದೆ. ಅಂದರೆ, ಖಾಸಗಿ ಆಸ್ಪತ್ರೆಗಳು ಇನ್ಮುಂದೆ ನೇರವಾಗಿ ಲಸಿಕೆ ಉತ್ಪಾದಕರಿಂದ (Vaccine Manufacturers) ಲಸಿಕೆಗಳನ್ನು ಖರೀದಿಸುವ ಹಾಗಿಲ್ಲ. ಇದಲ್ಲದೆ ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಮಂಥಲಿ ಲಿಮಿಟ್ ಕೂಡ ನಿರ್ಧರಿಸಿದೆ. ಎಲ್ಲರಿಗೂ ಸರಿಯಾದ ಪ್ರಮಾಣದಲ್ಲಿ ಲಸಿಕೆ ಸಿಗುವಂತಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.

ಲಸಿಕೆ ಸಂಗ್ರಹಕ್ಕೆ ಸರ್ಕಾರದ ನಿಯಮ
ಮಂಗಳವಾರ ಮುಂಬೈ ಆಸ್ಪತ್ರೆಯಲ್ಲಿ ಸರ್ಕ್ಯೂಲೆಟ್ ಮಾಡಲಾಗಿರುವ SOP ಪ್ರಕಾರ, ಕಳೆದ ತಿಂದಳ ಯಾವುದೇ ಒಂದು ವಾರದಲ್ಲಿ ನಿತ್ಯ ಬಳಕೆಯಾದ ವ್ಯಾಕ್ಸಿನ್ ಗಳ ಎರಡು ಪಟ್ಟು ಲಸಿಕೆಗಳನ್ನು (Corona Vaccine) ಮಾತ್ರ ಖರೀದಿಸಿ ಸಂಗ್ರಹಿಸಿಡಬಹುದು. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳು ವಾರದ ಯಾವುದೇ ಒಂದು ದಿನದಲ್ಲಿ ಬಳಕೆಯಾದ ಒಟ್ಟು ಲಸಿಕೆಗಳನ್ನು ಖರೀದಿಗಾಗಿ ಆಧಾರವಾಗಿಟ್ಟುಕೊಳ್ಳಬಹುದಾಗಿದೆ.  ಇದಕ್ಕಾಗಿ ಖಾಸಗಿ ಆಸ್ಪತ್ರೆಗಳು CoWin ಪ್ಲಾಟ್ಫಾರ್ಮ್ ಮೂಲಕ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ. 

ಇದನ್ನೂ ಓದಿ-International Flights : ಜು. 31 ರವರೆಗೆ ಇಂಟೆರ್ ನ್ಯಾಷನಲ್ ಫ್ಲೈಟ್ ಬಂದ್ : ಕೇಂದ್ರ ಸರ್ಕಾರ ಆದೇಶ

ಆಸ್ಪತ್ರೆಗಳಲ್ಲಿರುವ ಬೆಡ್ ಗಳ ಸಂಖ್ಯೆಗಳ ಆಧಾರದ ಮೇಲೆ ಲಸಿಕೆ ವಿತರಣೆ
ಯಾವ ಆಸ್ಪತ್ರೆಗಳಲ್ಲಿ ಇದುವರೆಗೆ ಲಸಿಕೆಯ ಅಭಿಯಾನ ಆರಂಭಗೊಂಡಿಲ್ಲವೋ, ಆ ಆಸ್ಪತ್ರೆಗಳಲ್ಲಿರುವ ಬೆಡ್ ಗಳ ಆಧಾರದ ಮೇಲೆ ವ್ಯಾಕ್ಸಿನ್ ನೀಡಲಾಗುವುದು. ಉದಾಹರಣೆಗೆ, 50 ಬೆಡ್ ಗಳಿರುವ ಆಸ್ಪತ್ರೆ ಕೇವಲ 3000 ಪ್ರಮಾಣಗಳನ್ನು ಮಾತ್ರ ಆರ್ಡರ್ ಮಾಡಬಹುದು. 50 ರಿಂದ 300 ಬೆಡ್ ಇರುವ ಆಸ್ಪತ್ರೆಗಳು 6000 ಲಸಿಕೆಗಳಿಗಾಗಿ ಮಾತ್ರ ಆರ್ಡರ್ ಮಾಡಬಹುದು. 300 ಕ್ಕೂ ಅಧಿಕ ಬೆಡ್ ಗಳಿರುವ ಆಸ್ಪತ್ರೆಗಳು 10 ಸಾವಿರ ಪ್ರಮಾಣಗಳಿಗೆ ಆರ್ಡರ್ ಮಾಡಬಹುದು. ಖಾಸಗಿ ವ್ಯಾಕ್ಸಿನೆಶನ್ ಕೇಂದ್ರ ಗಳು ಒಂದು ತಿಂಗಳಲ್ಲಿ ಒಟ್ಟು ನಾಲ್ಕು ಕಂತುಗಳಲ್ಲಿ ಲಸಿಕೆಗಾಗಿ ಆರ್ಡರ್ ಮಾಡಬಹುದು ಎಂದು SOPಯಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಯಾವುದೇ ಸರ್ಕಾರಿ ಕಚೇರಿಯಿಂದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಕೇವಲ CoWin ಪ್ಲಾಟ್ಫಾರ್ಮ್ ಮೂಲಕ ಖರೀದಿಗಾಗಿ ಆರ್ಡರ್ ನೀಡಬೇಕು.

ಇದನ್ನೂ ಓದಿ-Supreme Court Big Verdict: ಕೊರೊನಾದಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸರ್ಕಾರ ಪರಿಹಾರ ಒದಗಿಸಬೇಕು

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಇದುವರೆಗೆ ಜನರಿಗೆ ಕೊರೊನಾ ವ್ಯಾಕ್ಸಿನ್ ನ 32 ಕೋಟಿ, 36 ಲಕ್ಷ 63 ಸಾವಿರದ 297 ಪ್ರಮಾಣಗಳನ್ನು ವಿತರಿಸಲಾಗಿದೆ. ಅಮೇರಿಕಾದಲ್ಲಿ 32ಕೋಟಿ 33 ಲಕ್ಷಕ್ಕೂ ಅಧಿಕ ಲಸಿಕೆಯ ಪ್ರಮಾಣಗಳನ್ನು ನೀಡಲಾಗಿದೆ. ಬ್ರಿಟನ್ ನಲ್ಲಿ ಇದುವರೆಗೆ 7 ಕೋಟಿಗೂ ಅಧಿಕ ಲಸಿಕೆಯ ಪ್ರಮಾಣಗಳನ್ನು ನೀಡಲಾಗಿದೆ. ಭಾರತದಲ್ಲಿ ಜನವರಿ 2021ರಿಂದ ಕೊರೊನಾ ಲಸಿಕೆಯ ಅಭಿಯಾನ ಆರಂಭಗೊಂಡಿದೆ. ಇದಾದ ಬಳಿಕ ಇದುವರೆಗೆ 32 ಕೋಟಿಗೂ ಅಧಿಕ ಲಸಿಕೆಯ ಪ್ರಮಾಣಗಳನ್ನು ವಿತರಿಸಲಾಗಿದೆ.

ಇದನ್ನೂ ಓದಿ-One Nation One Ration Card:ಜುಲೈ 31ರವರೆಗೆ ಎಲ್ಲಾ ರಾಜ್ಯಗಳಲ್ಲಿ ಯೋಜನೆ ಜಾರಿಗೊಳಿಸಲು ಆದೇಶ, ಸುಪ್ರೀಂನಿಂದ ಮಹತ್ವದ ತೀರ್ಪು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News