ಭಾರತದಲ್ಲಿ COVID-19 ಮೂರನೇ ಅಲೆ ಬರಲಿದೆ ಎಂದ ತಜ್ಞರು..!

ಭಾರತದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳ ಮಧ್ಯೆ, ಕೋವಿಡ್-19 ಮೂರನೇ ಅಲೆಯು ದೇಶದಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ ಮತ್ತು ಜನರನ್ನು ರಕ್ಷಿಸಲು ಸರ್ಕಾರವು ಬೂಸ್ಟರ್ ಡೋಸ್‌ಗಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಎಂದು ಉನ್ನತ ಆರೋಗ್ಯ ತಜ್ಞರು ಹೇಳಿದ್ದಾರೆ.

Written by - Zee Kannada News Desk | Last Updated : Dec 16, 2021, 06:53 PM IST
  • ಭಾರತದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳ ಮಧ್ಯೆ, ಕೋವಿಡ್-19 ಮೂರನೇ ಅಲೆಯು ದೇಶದಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ ಮತ್ತು ಜನರನ್ನು ರಕ್ಷಿಸಲು ಸರ್ಕಾರವು ಬೂಸ್ಟರ್ ಡೋಸ್‌ಗಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಎಂದು ಉನ್ನತ ಆರೋಗ್ಯ ತಜ್ಞರು ಹೇಳಿದ್ದಾರೆ.
ಭಾರತದಲ್ಲಿ COVID-19 ಮೂರನೇ ಅಲೆ ಬರಲಿದೆ ಎಂದ ತಜ್ಞರು..! title=
file photo

ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳ ಮಧ್ಯೆ, ಕೋವಿಡ್-19 ಮೂರನೇ ಅಲೆಯು ದೇಶದಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ ಮತ್ತು ಜನರನ್ನು ರಕ್ಷಿಸಲು ಸರ್ಕಾರವು ಬೂಸ್ಟರ್ ಡೋಸ್‌ಗಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಎಂದು ಉನ್ನತ ಆರೋಗ್ಯ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ : Bank Union Strike: ಇಂದಿನಿಂದ ಎರಡು ದಿನ ಬ್ಯಾಂಕ್ ನೌಕರರ ಮುಷ್ಕರ, ನಡೆಯುವುದಿಲ್ಲ ಬ್ಯಾಂಕ್ ಕೆಲಸ

'ನಾವು ನಿಜವಾದ ಅಪಾಯದಲ್ಲಿದ್ದೇವೆ.ಹೊಸ ರೂಪಾಂತರವು ಅತ್ಯಂತ ಸಾಂಕ್ರಾಮಿಕವಾಗಿರುವುದರಿಂದ ಸನ್ನದ್ಧತೆಯ ಅವಶ್ಯಕತೆಯಿದೆ ಮತ್ತು ಇದು 'ನಿರೋಧಕ ಶಕ್ತಿಯನ್ನು ತಪ್ಪಿಸುತ್ತದೆ'ಎಂದು ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಡಾ.ಅಶೋಕ್ ಸೇಠ್ ಹೇಳಿದ್ದಾರೆಂದು ಇಂಡಿಯಾ.ಕಾಮ್ ಉಲ್ಲೇಖಿಸಿದೆ.

'ಅನಾರೋಗ್ಯದ ಗಂಭೀರತೆಯು ಒಬ್ಬರ ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಗೆ ಸಂಪೂರ್ಣವಾಗಿ ಸಂಬಂಧಿಸಿದೆ. ಭಾರತವು ವಿಶಾಲವಾದ ದೇಶವಾಗಿದೆ ಮತ್ತು ಸಣ್ಣ ಪ್ರಮಾಣದಲ್ಲಿ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾದರೂ ಸಹ ಬಹಳಷ್ಟು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬಹುದು, ಎಂದು ಸೇಥ್ ಹೇಳಿದ್ದಾರೆ.

ಬೂಸ್ಟರ್ ಡೋಸ್‌ಗಳು 'COVID ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಮೂರು ಗುಂಪುಗಳಿಗೆ ಕಸಿ ರೋಗಿಗಳಂತೆ ರೋಗನಿರೋಧಕ ಶಕ್ತಿಯುಳ್ಳವರು ಸೇರಿದಂತೆ ಆರಂಭಿಕ ಬೂಸ್ಟರ್ ಡೋಸ್ ಅಗತ್ಯವಿರುತ್ತದೆ ಎಂದು ಸೇಥ್ ಹೇಳಿದರು.ಎರಡನೆಯ ಗುಂಪಿನಲ್ಲಿ ವಯಸ್ಸಾದ ಜನರು ಮತ್ತು ಮೂರನೇ ಗುಂಪಿನಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ.

ಇದನ್ನೂ ಓದಿ : Bank Union Strike: ಇಂದಿನಿಂದ ಎರಡು ದಿನ ಬ್ಯಾಂಕ್ ನೌಕರರ ಮುಷ್ಕರ, ನಡೆಯುವುದಿಲ್ಲ ಬ್ಯಾಂಕ್ ಕೆಲಸ

ಏತನ್ಮಧ್ಯೆ, ಓಮಿಕ್ರಾನ್ ರೂಪಾಂತರವು ಹಿಂದಿನ ಯಾವುದೇ ತಳಿಗಳಿಗಿಂತ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಂಗಳವಾರ ಎಚ್ಚರಿಸಿದೆ.ವಿಶ್ವ ಆರೋಗ್ಯ ಸಂಸ್ಥೆ ಡೈರೆಕ್ಟರ್-ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಮಾತನಾಡಿ, '77 ದೇಶಗಳು ಈಗ ಒಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ವಾಸ್ತವವೆಂದರೆ ಓಮಿಕ್ರಾನ್ ಬಹುಶಃ ಹೆಚ್ಚಿನ ದೇಶಗಳಲ್ಲಿದೆ, ಅದು ಇನ್ನೂ ಪತ್ತೆಯಾಗದಿದ್ದರೂ ಸಹ.ಓಮಿಕ್ರಾನ್ ಹಿಂದಿನ ಯಾವುದೇ ರೂಪಾಂತರಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ"ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News