Covid-19 : ಕೊರೋನಾ ಪ್ರಕರಣದಲ್ಲಿ 'ವಿಶ್ವ ದಾಖಲೆ' ಬರೆದ ಭಾರತ..!

ಕಳೆದ 24 ಗಂಟೆಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳು ವರದಿ

Last Updated : Apr 26, 2021, 10:50 AM IST
  • ಕಳೆದ 24 ಗಂಟೆಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳು ವರದಿ
  • ಭಾರತ 'ವಿಶ್ವ ದಾಖಲೆ' ಬರೆದಿದೆ.
  • ಭಾನುವಾರ 3,54,531 ಹೊಸ ಕೊರೋನಾ ಪ್ರಕರಣಗಳು ವರದಿ
Covid-19 : ಕೊರೋನಾ ಪ್ರಕರಣದಲ್ಲಿ 'ವಿಶ್ವ ದಾಖಲೆ' ಬರೆದ ಭಾರತ..! title=

ನವದೆಹಲಿ : ಕಳೆದ 24 ಗಂಟೆಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗುವ ಮೂಲಕ ಭಾರತ 'ವಿಶ್ವ ದಾಖಲೆ' ಬರೆದಿದೆ. 

ಜಗತ್ತಿನಲ್ಲಿ ಒಂದೇ ದಿನ 3.5 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾದ ಮೊದಲ ದೇಶ ಭಾರತ(India) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವರ್ಲ್ಡ್ ಒಮೇಟರ್ಸ್ ಇಂದು ಪ್ರಕಟಿಸಿದೆ.

ಇದನ್ನೂ ಓದಿ : ಹೀಗೆ ಮಾಡಿ ನೋಡಿ, ಮೊಬೈಲಿನಲ್ಲಿ ನೆಟ್ ಸ್ಪೀಡ್ ಹೆಚ್ಚಾಗುತ್ತದೆ

ವರ್ಲ್ಡ್ ಒಮೇಟರ್ಸ್ ವೆಬ್‌ಸೈಟ್‌ನ(Worldometers) ಪ್ರಕಾರ, ಸಧ್ಯ ದೇಶದಲ್ಲಿ ಕೊರೊನಾವೈರಸ್ ಎರಡನೇ ಅಲೆ ರುದ್ರ ನರ್ತನವಾಡುತ್ತಿದೆ. ಭಾನುವಾರ 3,54,531 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ನಿನ್ನೆ 2,806 ಜನ ಕೋವಿಡ್-19 ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ : ವ್ಯಾಕ್ಸಿನ್ ಗಾಗಿ ಕೊವಿನ್ ಪೋರ್ಟಲಿನಲ್ಲಿ ಹೆಸರು ನೊಂದಾಯಿಸುವುದು ಹೇಗೆ..?

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲ(Ministry of Health and Family Welfare)ಯವು ಇಂದು ಬೆಳಗ್ಗೆ 9: 30 ರ ಸುಮಾರಿಗೆ ಕೋವಿಡ್-19 ವರದಿಯ ಅಧಿಕೃತ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಈ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ : Mobile ATM Van: ಕರೋನಾ ಯುಗದಲ್ಲಿ ಈ ಬ್ಯಾಂಕಿನ ಗ್ರಾಹಕರಿಗೆ ಮನೆ ಬಾಗಿಲಿಗೆ ತಲುಪಲಿದೆ ಮೊಬೈಲ್ ಎಟಿಎಂ

ದೇಶದಲ್ಲಿ ಒಟ್ಟು 1,73,06,300 ಕರೋನವೈರಸ್(Coronavirus) ಪ್ರಕರಣಗಳು ಏರಿಕೆ ಆಗಿವೆ. ಸಧ್ಯ 3.2 ಕೋಟಿಗೂ ಹೆಚ್ಚು ಸೋಂಕಿತರು ಭಾರತದಲ್ಲಿದ್ದಾರೆ. ಅಮೇರಿಕ ದ್ವಿತೀಯ ಸ್ಥಾನದಲ್ಲಿದೆ.

ಇದನ್ನೂ ಓದಿ : Oximeter Test : 'ಆಕ್ಸಿಮೀಟರ್' ಹೇಗೆ ಬಳಸುವುದರ ಕುರಿತು ಕೇಂದ್ರ ಸರ್ಕಾರದಿಂದ 8 ಗೈಡ್ ಲೈನ್ಸ್..! 

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿ(Report)ಯಾಗುತ್ತಿವೆ. ಅಲ್ಲದೆ, 28,14,544 ಆಕ್ಟಿವ್ ಪ್ರಕರಣಗಳಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News