Corona ನಾಲ್ಕನೇ ಅಲೆಯ ಆತಂಕ! ತುರ್ತು ಸಭೆ ಕರೆದ ಆರೋಗ್ಯ ಸಚಿವಾಲಯ ಹೇಳಿದ್ದೇನು?

Covid-19 Fourth Wave: ದೇಶದಲ್ಲಿ ಮತ್ತೊಮ್ಮೆ ಕೊರೊನಾ ಭೀತಿ ಶುರುವಾಗಿದೆ. ಕೋವಿಡ್‌ನ ನಾಲ್ಕನೇ ಅಲೆಯ (Covid-19) ಆತಂಕದ ನಡುವೆ, ಆರೋಗ್ಯ ಸಚಿವಾಲಯವು (Health Ministry) ತುರ್ತು ಭೆಯನ್ನು ಕರೆದಿದೆ. ಸಭೆಯಲ್ಲಿ ಕೊರೊನಾ (Coronavirus) ತಡೆಗೆ ಮಹತ್ವದ ಆದೇಶಗಳನ್ನು ನೀಡಲಾಗಿದೆ.  

Written by - Nitin Tabib | Last Updated : Mar 16, 2022, 09:18 PM IST
  • ಮತ್ತೊಮ್ಮೆ ಎದುರಾದ ಕೊರೊನಾ ನಾಲ್ಕನೆಯ ಅಲೆಯ ಆತಂಕ
  • ಕೇಂದ್ರ ಆರೋಗ್ಯ ಸಚಿವಾಲಯದಿಂದ ತುರ್ತು ಸಭೆ.
  • ಚೀನಾದಲ್ಲಿ ಹಲವು ನಗರಗಳಲ್ಲಿ ಲಾಕ್ ಡೌನ್
Corona ನಾಲ್ಕನೇ ಅಲೆಯ ಆತಂಕ! ತುರ್ತು ಸಭೆ ಕರೆದ ಆರೋಗ್ಯ ಸಚಿವಾಲಯ ಹೇಳಿದ್ದೇನು? title=
Covid-19 Fourth Wave (File Photo)

ನವದೆಹಲಿ: Covid-19 Fourth Wave - ಕೊರೊನಾ ಬಗ್ಗೆ ದೇಶದಲ್ಲಿ ಆತಂಕದ ಕಾರ್ಮೋಡಗಳು ಮತ್ತೊಮ್ಮೆ ಸುಳಿದಾಡಲಾರಂಭಿಸಿವೆ. ಆಗ್ನೇಯ ಏಷ್ಯಾದ ಹಲವು ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಹೆಚ್ಚುತ್ತಿರುವ ಕೊರೊನಾ ಭೀತಿ ಮತ್ತು ದೇಶದಲ್ಲಿ ನಾಲ್ಕನೇ ಅಲೆಯ ಸಾಧ್ಯತೆಯ ನಡುವೆ ಕೇಂದ್ರ ಆರೋಗ್ಯ ಸಚಿವಾಲಯವು ತುರ್ತು ಸಭೆ ನಡೆಸಿದೆ. ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಕೊರೊನಾ ಕುರಿತು ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಮಹತ್ವದ  ನಿರ್ಧಾರ
ಚೀನಾದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಹಿನ್ನೆಲೆ ಆರೋಗ್ಯ ಸಚಿವಾಲಯ ಈ ಸಭೆಯನ್ನು ಕರೆದಿದೆ. ಚೀನಾದಲ್ಲಿ ಕೊರೊನಾ ಪ್ರಕರಣಗಳು ಮತ್ತೊಮ್ಮೆ ಉತ್ತುಂಗಕ್ಕೇರಿವೆ. ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಅವರ ಅಧ್ಯಕ್ಷತೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಸಭೆ ನಡೆದಿದೆ. ಈ ವೇಳೆ ಕೊರೊನಾ ಬಗ್ಗೆ ಹೆಚ್ಚಿನ ನಿಗಾವಹಿಸುವ ಅವಶ್ಯಕತೆ ಇದೆ ಎನ್ನಲಾಗಿದೆ. ಇದಕ್ಕಾಗಿ, ಜೀನೋಮ್ ಅನುಕ್ರಮಕ್ಕೆ ಗರಿಷ್ಠ ಒತ್ತು ನೀಡುವುದರೊಂದಿಗೆ, ಕರೋನಾ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ನೀಡಲಾಗಿದೆ. ಗರಿಷ್ಠ ಪರೀಕ್ಷೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ-ಕೊರೊನಾ ಕುರಿತು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಮಾಹಿತಿ ಬಿಡುಗಡೆ

ಚೀನಾದ ಹಲವು ನಗರಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ
ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ (China) ಐದು ಸಾವಿರಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಚೀನಾದಲ್ಲಿ ಕರೋನಾ ಸೋಂಕಿನ ಹೆಚ್ಚಿನ ಪ್ರಕರಣಗಳು ಓಮಿಕ್ರಾನ್ (Omicron Variant) ರೂಪಾಂತರದ ಉಪ-ವೇರಿಯಂಟ್ 'ಸ್ಟೆಲ್ತ್' ಗೆ ಸೇರಿವೆ. ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಂದಾಗಿ, ಚೀನಾ ಅನೇಕ ನಗರಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಲಾಕ್‌ಡೌನ್‌ನ ಪರಿಣಾಮವು ಚೀನಾದ 30 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ಮೇಲೆ ಕಂಡುಬರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೊರೊನಾ ನಾಲ್ಕನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ-Coronavirus: ಚೀನಾದಲ್ಲಿ ಮತ್ತೆ ಕರೋನಾ ಸ್ಫೋಟ!

BA-2 ರೂಪಾಂತರದ ಬಗ್ಗೆ WHO ಎಚ್ಚರಿಕೆ
ಈ ಉಪ ರೂಪಾಂತರವನ್ನು BA-2 ಎಂದು ಹೆಸರಿಸಲಾಗಿದೆ. ಈ ಉಪ-ರೂಪಾಂತರಿ ಮೂಲ ರೂಪಾಂತರಿಗಿಂತ ಭಿನ್ನವಾಗಿದೆ. ಅದನ್ನು ಲಘುವಾಗಿ ಪರಿಗಣಿಸುವುದು ತಪ್ಪು ಸಾಬೀತಾಗಬಹುದು ಎಂದು WHO ಹೇಳಿದೆ. ಅದನ್ನು ಪತ್ತೆ ಹಚ್ಚುವಲ್ಲಿಯೂ ಕೂಡ ಕ್ಲಿಷ್ಟತೆ ಇರುವುದರಿಂದ ಅದು ಆತಂಕಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬಿಎ-2 ರೂಪಾಂತರವು ಕೋವಿಡ್‌ನ ಮೂಲ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಸಾಬೀತಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ-ಚೀನಾದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ, ನಗರಗಳಲ್ಲೆಡೆ ಲಾಕ್ ಡೌನ್ ಜಾರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News