ಪ್ಲೇ ಹೋಂನಲ್ಲಿ ಮುಗ್ಧ ಮಗುವಿಗೆ ಹೊಡೆದಿದ್ದ ಪಾಲಕಿಗೆ 10 ವರ್ಷ ಜೈಲು!

ಆರೋಪಿ ಮಕ್ಕಳ ಪಾಲಕಿಯನ್ನು ಆಫ್ಸಾನಾ ನಾಸಿರ್ ಶೇಕ್ ವಿರುದ್ಧ ಸೆಕ್ಷನ್ 307 ಮತ್ತು 325 ಪ್ರಕಾರ ಪ್ರಕರಣ ದಾಖಲಾಗಿತ್ತು. 

Last Updated : Mar 28, 2019, 04:09 PM IST
ಪ್ಲೇ ಹೋಂನಲ್ಲಿ ಮುಗ್ಧ ಮಗುವಿಗೆ ಹೊಡೆದಿದ್ದ ಪಾಲಕಿಗೆ 10 ವರ್ಷ ಜೈಲು! title=

ಮುಂಬೈ: ನವಿ ಮುಂಬೈನ ಪಾಲನಗರ್ ಪ್ಲೇ ಸ್ಕೂಲ್ ನಲ್ಲಿ ಆರು ತಿಂಗಳ ಮುಗ್ಧ ಮಗುವಿಗೆ ಸಾಯುವಂತೆ ಹೊಡೆದಿದ್ದ ಪಾಲಕಿಗೆ ಆಲಿಬಾಗ್ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಆದರೆ, ಬಾಲಕಿಯ ಪೋಷಕರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

2016ರ ನವೆಂಬರ್ ನಲ್ಲಿ ಪೂರ್ವ ಡೇ ಕೇರ್ ನಲ್ಲಿ ಪಾಲಕಿಯೊಬ್ಬಳು ಮಗುವಿಗೆ ಚೆನ್ನಾಗಿ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಳಿಕ ಪ್ಲೇ ಹೋಂಗಳಲ್ಲಿ ಮಕ್ಕಳ ಸುರಕ್ಷತೆ ವಿಚಾರವಾಗಿ ಸಾಕಷ್ಟು ಚರ್ಚೆಯಾಗಿತ್ತು. 

ಆರೋಪಿ ಮಕ್ಕಳ ಪಾಲಕಿಯನ್ನು ಆಫ್ಸಾನಾ ನಾಸಿರ್ ಶೇಕ್ ವಿರುದ್ಧ ಸೆಕ್ಷನ್ 307 ಮತ್ತು 325 ಪ್ರಕಾರ ಪ್ರಕರಣ ದಾಖಲಾಗಿತ್ತು. ಇದೀಗ ಅಪರಾಧಿ ಮಹಿಳೆಗೆ ಭಾರತೀಯ ದಂಡ ಸಂಹಿತೆ 307ರ ಅಡಿಯಲ್ಲಿ 10 ವರ್ಷಗಳ ಹಾಗೂ 325ರ ಅಡಿಯಲ್ಲಿ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದ್ದು, ಎರಡು ಸಾವಿರ ರೂ. ದಂಡವನ್ನೂ ವಿಧಿಸಲಾಗಿದೆ. 
 

Trending News