ಮುಂಬೈನಲ್ಲಿ ದಂಪತಿಗಳ ಮೇಲೆ ಆಸಿಡ್ ದಾಳಿ: ಚಿಂತಾಜನಕ ಸ್ಥಿತಿಯಲ್ಲಿ ಪತ್ನಿ, ಪತಿ ಸಾವು

ಸೋಮವಾರ ರಾತ್ರಿ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ರೆಸ್ಟೋರೆಂಟ್ ಗೆ ತೆರಳಿ ವಾಪಸಾಗುತ್ತಿದ್ದ ದಂಪತಿಗಳು.

Last Updated : May 31, 2019, 05:35 PM IST
ಮುಂಬೈನಲ್ಲಿ ದಂಪತಿಗಳ ಮೇಲೆ ಆಸಿಡ್ ದಾಳಿ:  ಚಿಂತಾಜನಕ ಸ್ಥಿತಿಯಲ್ಲಿ ಪತ್ನಿ, ಪತಿ ಸಾವು title=

ಮುಂಬೈ: ರೆಸ್ಟೋರೆಂಟ್ ನಿಂದ ವಾಪಸಾಗುತ್ತಿದ್ದ ವೇಳೆ ದಂಪತಿಗಳ ಮೇಲೆ ದುಷ್ಕರ್ಮಿಗಳಿಂದ ಆಸಿಡ್ ದಾಳಿ ನಡೆದಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಮಧ್ಯಮ ವಯಸ್ಕ ದಂಪತಿಗಳು ಸೋಮವಾರ ರಾತ್ರಿ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿರುವ ರೆಸ್ಟೋರೆಂಟ್ ಗೆ ಭೋಜನಕ್ಕೆಂದು ತೆರಳಿದ್ದರು. ಭೋಜನ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಅವರ ಮೇಲೆ ಆಸಿಡ್ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವಿನಾಶ್ ಮತ್ತು ಅವರ ಪತ್ನಿ ಸೀಮಾ ವಿಶ್ವಕರ್ಮ ಆಸಿಡ್ ದಾಳಿಗೆ ತುತ್ತಾಗಿರುವ ದುರ್ದೈವಿಗಳಾಗಿದ್ದು, ಅವಿನಾಶ್ ಈ ದಾಳಿಯಲ್ಲಿ ನಿಧನರಾಗಿದ್ದಾರೆ. ಪತ್ನಿ ಸೀಮಾ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

Trending News