ದೇಶಾದ್ಯಂತ ಕೊರೊನಾ ವೈರಸ್ ನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇವೆ. ಈ ಹಿನ್ನೆಲೆ ಸರ್ಕಾರದಿಂದ ಹಿಡಿದು ಎಲ್ಲ ನಾಗರಿಕರು ಎಚ್ಚರಿಕೆಗಳನ್ನು ನೀಡುತ್ತಲೇ ಇದ್ದಾರೆ. ಆದರೆ, ನೋಟುಗಳಿಂದ ಕೂಡ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ ನಿಮಗೆ ತಿಳಿದಿದೆಯೇ? ಹೌದು, ಇತ್ತೀಚೆಗಷ್ಟೇಯೇ ಈ ಕುರಿತು ಎಚ್ಚರಿಕೆ ನೀಡಿದ್ದ ಭಾರತೀಯ ಸ್ಟೇಟ್ ಬ್ಯಾಂಕ್, ಸದ್ಯ ಭಾರತದಲ್ಲಿ ನಿರ್ಮಾಣಗೊಂಡಿರುವ ಸ್ಥಿತಿಯ ಹಿನ್ನೆಲೆ ನೀವು ಬಳಸುವ ಕರೆನ್ಸಿ ನೋಟುಗಳಿಂದಲೂ ಕೂಡ ಕೊರೊನಾ ವೈರಸ್ ಪಸರಿಸುವ ಭೀತಿ ಇದೆ ಎಂದು ಹೇಳಿತ್ತು.
ಈ ಕುರಿತು ಹೇಳಿಕೆ ನೀಡಿರುವ ತಜ್ಞರು, ಕಾಗದದಿಂದ ತಯಾರಾಗಿರುವ ನೋಟುಗಳಿಂದಲೂ ಕೂಡ ಕೊರೊನಾ ವೈರಸ್ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇದೆ ಎಂದಿದ್ದರು. ಇದಕ್ಕೆ ಸಂಬಂಧಿಸಿದಂತೆ SBI ನಡೆಸಿರುವ ಒಂದು ಅಧ್ಯಯನದ ಪ್ರಕಾರ, ಸರ್ಕಾರ ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ಕೆನಡಾಗಳಂತಹ ದೇಶಗಳಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಕುರಿತು ಚಿಂತನೆ ನಡೆಸುವ ಅಗ್ಯತ್ಯತೆ ಇದೆ ಎಂದು ಹೇಳಿತ್ತು. ಈ ದೇಶದ ಕರೆನ್ಸಿ ನೋಟುಗಳ ಮೇಲೆ ಯಾವುದೇ ರೀತಿಯ ವೈರಸ್ ಪ್ರಭಾವ ಬೀರುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. ಇನ್ನೊಂದೆಡೆ ಭಾರತದಲ್ಲಿ ಕಾಗದದಿಂದ ತಯಾರಿಸಲಾಗಿರುವ ಕರೆನ್ಸಿ ನೋಟು ಬಳಕೆಯಾಗುತ್ತವೆ, ಈ ನೋಟುಗಳ ಮೂಲಕ ವೈರಸ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಹೇಳಿದೆ.
UPI ಯಂತ್ರಗಳ ಬಳಕೆ ಮಾಡಿ
ದೇಶಾದ್ಯಂತ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಾಗರಿಕರಿಗೆ ಆದಷ್ಟು ಹೆಚ್ಚು UPI ಯಂತ್ರಗಳ ಬಳಕೆ ಮಾಡಲು ಸೂಚಿಸಿದೆ. ಅಂದರೆ, ನಾಗರಿಕರು ಸಂಪರ್ಕರಹಿತ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಗಳಾಗಿರುವ UPI, IMPS, RTGS ಹಾಗೂ ಮೊಬೈಲ್ ವ್ಯಾಲೆಟ್ ಮತ್ತು ನೆಟ್ ಬ್ಯಾಂಕಿಂಗ್ ಸೇವೆಗಳ ಬಳಕೆ ಮಾಡಲು ಸರ್ಕಾರ ಸಲಹೆ ನೀಡಿದೆ. ಈ ಸಂಪರ್ಕ ರಹಿತ ಸೇವೆಗಳನ್ನು ಬಳಸುವ ಮೂಲಕ ಸಂಪರ್ಕ ಹೊಂದಿರುವ ಸೇವೆಗಳ ಮೂಲಕ ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ.
CAIT ಜಾರಿಗೊಳಿಸಿದೆ ನಿರ್ದೇಶನಗಳು
CAIT ಅಂದರೆ Confederation Of All India Traders ಅಧ್ಯಕ್ಷ BC ಭಾರತೀಯ ಹಾಗೂ ಮುಖ್ಯಸಚಿವರಾಗಿರುವ ಪ್ರವೀಣ್ ಖಂಡೆಲ್ ವಾಲ್ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂದೇಶ ನೀಡಿದ್ದು, "ಮಹಾಮಾರಿಯಾಗಿ ಪರಿಣಮಿಸಿರುವ ಕೊರೊನಾ ವೈರಸ್ ಹರಡಲು ಭಾರತೀಯ ಹಾಗೂ ಕಾಗದದಿಂದ ತಯಾರಿಸಲಾಗಿರುವ ಕರೆನ್ಸಿ ನೋಟುಗಳು ಸಹಕಾರಿಯಾಗಿ ಪರಿನಮಿಸಲಿವೆ" ಎಂದು ಹೇಳಿದ್ದಾರೆ. ಜೊತೆಗೆ ಭಾರತ ಸರ್ಕಾರ ಸದ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿಂಥೆಟಿಕ್ ಪಾಲಿಮರ್ ನಿಂದ ತಯಾರಾಗುವ ಕರೆನ್ಸಿ ನೋಟುಗಳ ಕುರಿತು ಗಂಭೀರ ಚಿಂತನೆ ನಡೆಸಬೇಕು. ಇದರಿಂದ ಸಾಂಕ್ರಾಮಿಕ ರೋಗ ಹರಡುವಿಕೆಯ ಸಾಧ್ಯತೆ ತೀರಾ ಕಮ್ಮಿಯಾಗಿದೆ ಎಂದು ಹೇಳಿದ್ದರು.