Coronavirus: ಮುಂದಿನ 30 ದಿನಗಳು ತುಂಬಾ ಕ್ರಿಟಿಕಲ್, ಕೊರೊನಾ ಕುರಿತು ಆರೋಗ್ಯ ಸಚಿವಾಲಯದ ಗಂಭೀರ ಹೇಳಿಕೆ

Coronavirus Latest Update - ಈ ಕುರಿತು ನಡೆಸಿರುವ ಸುದ್ಧಿಗೋಷ್ಠಿಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಕೊರೊನಾ ಹರಡುವಿಕೆಯನ್ನು ಅಪಾಯಕಾರಿ ಎಂದು ಹೇಳಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವಂತೆ ದೇಶದ ನಾಗರಿಕರಿಗೆ ಮನವಿ ಮಾಡಿದ್ದಾರೆ. ಮುಂದಿನ ನಾಲ್ಕು ವಾರಗಳು ನಮ್ಮ ಪಾಲಿಗೆ ನಿರ್ಣಾಯಕ ಎಂದು ಹೇಳಿರುವ ಅವರು. ದೇಶದ ಹಲವು ಭಾಗಗಳಲ್ಲಿ ಅಪಾಯಕಾರಿ ಪರಿಸ್ಥಿತಿ ಉದ್ಭವಿಸಲಿದೆ ಎಂದು ಹೇಳಿದ್ದಾರೆ. 

Written by - Nitin Tabib | Last Updated : Apr 6, 2021, 07:30 PM IST
  • ದೇಶದಲ್ಲಿ ಕೊರೊನಾ ಸೋಂಕಿನ ಸ್ಥಿತಿ ತುಂಬಾ ಚಿಂತಾಜನಕವಾಗಿದೆ.
  • ದೇಶದ ನಾಗರಿಕರಿಗೆ ಎಚ್ಚರಿಕೆ ಜಾರಿಗೊಳಿಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ.
  • ಮುಂಬರುವ 30 ದಿನಗಳು ತುಂಬಾ ಅಪಾಯಕಾರಿಯಾಗಿವೆ ಎಂದ ಆರೋಗ್ಯ ಕಾರ್ಯದರ್ಶಿಗಳು.
Coronavirus: ಮುಂದಿನ 30 ದಿನಗಳು ತುಂಬಾ ಕ್ರಿಟಿಕಲ್, ಕೊರೊನಾ ಕುರಿತು ಆರೋಗ್ಯ ಸಚಿವಾಲಯದ ಗಂಭೀರ ಹೇಳಿಕೆ title=
Corona Latest Update (File Photo)

ನವದೆಹಲಿ: Coronavirus Latest Condition In India - ಕೊರೊನಾ ವೈರಸ್ ಮಹಾಮಾರಿಯ (Corona Pandemic) ವಿರುದ್ಧದ ಹೋರಾಟದಲ್ಲಿ ಮಾನವಕುಲವನ್ನು ರಕ್ಷಿಸಲು ಭಾರತ ಜಾಗತಿಕ ಮುಂದಾಳತ್ವ ವಹಿಸಿದೆ. ಜಗತ್ತಿನ ಹಲವು ಭಾಗಗಳಲ್ಲಿ ಜಾರಿಯಲ್ಲಿರುವ ವ್ಯಾಕ್ಸಿನೆಶನ್ ಅಭಿಯಾನಗಳ ಹೊರತಾಗಿ, ಜನರ ನಿರ್ಲಕ್ಷ ಧೋರಣೆ ಇಡೀ ವಿಶ್ವಕ್ಕೆ ಅಪಾಯಕಾರಿ ಸಾಬೀತಾಗುತ್ತಿದೆ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ವೈರಸ್ (Covid-19) ನ ಎರಡನೇ ಅಲೆ ಮುಂದುವರೆದಿದೆ. ಕೈಮೀರಿದ ಸೋಂಕಿನ ವೇಗವನ್ನು ತಡೆಗಟ್ಟಲು ಸರ್ಕಾರ ಕೂಡ ಕಟಿಬದ್ಧವಾಗಿದೆ. ಇನ್ನೊಂದೆಡೆ ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಮಂಗಳವಾರ ದೇಶದಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿಯ ನಡುವೆ ಭಾರಿ ಎಚ್ಚರಿಕೆಯೊಂದನ್ನು ಜಾರಿಗೊಳಿಸಿದೆ.

ಮುಂದಿನ 30 ದಿನಗಳು ತುಂಬಾ ಕ್ರಿಟಿಕಲ್ 
ಈ ಕುರಿತು ನಡೆಸಿರುವ ಸುದ್ಧಿಗೋಷ್ಠಿಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಕೊರೊನಾ (Coronavirus) ಹರಡುವಿಕೆಯನ್ನು ಅಪಾಯಕಾರಿ ಎಂದು ಹೇಳಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವಂತೆ ದೇಶದ ನಾಗರಿಕರಿಗೆ ಮನವಿ ಮಾಡಿದ್ದಾರೆ. ಮುಂದಿನ ನಾಲ್ಕು ವಾರಗಳು ನಮ್ಮ ಪಾಲಿಗೆ ನಿರ್ಣಾಯಕ ಎಂದು ಹೇಳಿರುವ ಅವರು. ದೇಶದ ಹಲವು ಭಾಗಗಳಲ್ಲಿ ಅಪಾಯಕಾರಿ ಪರಿಸ್ಥಿತಿ ಉದ್ಭವಿಸಲಿದೆ ಎಂದು ಹೇಳಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಖತರ್ನಾಕ್ ಸ್ಥಿತಿ ಇದೆ ಎಂದು ಅವರು ಹೇಳಿದ್ದಾರೆ. ಕೊರೊನಾ ಡೆತ್ ರೇಟ್ ಕುರಿತು ಹೇಳುವುದಾದರೆ, ಸದ್ಯ ಇದು ಶೇ.5ಕ್ಕೆ ಬಂದು ತಲುಪಿದ್ದು, ಕೆಲ ದಿನಗಳ ಹಿಂದೆಯಷ್ಟೇ ಇದು ಶೇ.2 ರಷ್ಟಿತ್ತು. 

ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ
ಮಹಾರಾಷ್ಟ್ರದಲ್ಲಿ ಫೆಬ್ರುವರಿ ತಿಂಗಳಲ್ಲಿ ನಿತ್ಯ ಸರಾಸರಿ 2 ಸಾವಿರ ಪ್ರಕರಣಗಳು ಬರುತ್ತಿದ್ದವು. ಆದರೆ ಇಂದು ಅಲ್ಲಿ ನಿತ್ಯ 44 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೇವಲ ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ದೇಶದ ಒಟ್ಟು ಕೊರೊನಾ ಪ್ರಕರಣಗಳ ಶೇ.58ರಷ್ಟು ರೋಗಿಗಳಿದ್ದಾರೆ. ದೇಶದ ನಿವಾಸಿಗಳನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ನಡೆಸಲಾಗುತ್ತಿರುವ ಮಹಾ ಅಭಿಯಾನ ಅಂದರೆ ಕೊರೊನಾ ವ್ಯಕ್ಸಿನೆಶನ್ ಕೆಲಸದಲ್ಲಿ ಸದ್ಯ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಪ್ರಸ್ತುತ 80 ಲಕ್ಷಕ್ಕೂ ಅಧಿಕ ಜನರು ವ್ಯಾಕ್ಸಿನ್ ನ ಮೊದಲ ಪ್ರಮಾಣ ಹಾಕಿಸಿಕೊಂಡಿದ್ದಾರೆ. ಇನ್ನೊಂದೆಡೆ ಗುಜರಾತ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಎಲ್ಲರಿಗೂ ಲಸಿಕೆ ನೀಡುವ ಪ್ರಶ್ನೆಗೆ ಉತ್ತರ
ಎಲ್ಲರಿಗೂ ಲಸಿಕೆ ನೀಡುವ ಕುರಿತಾಗಿ ಕೇಳಿರುವ ಪ್ರಶ್ನೆಗೆ ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಉತ್ತರ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಇಡೀ ವಿಶ್ವಾದ್ಯಂತ ಈ ವಿಷಯದ ಮೇಲೆ ಆಳವಾದ ಚರ್ಚೆ ನಡೆಸಲಾಗಿದೆ. ವ್ಯಾಕ್ಸಿನೇಷನ್ ಅಭಿಯಾನದ ಮೊದಲ ಉದ್ದೇಶ ಸಾವಿನಿಂದ ಜನರಿಗೆ ಕಾಪಾಡುವುದು ಮತ್ತು ಎರಡನೇ ಉದ್ದೇಶ ಆರೋಗ್ಯ ರಕ್ಷಣೆಯ ಸಿಸ್ಟಂ ಅನ್ನು ಬಲಪಡಿಸುವುದಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- Blood Cancer Signs: ನಿಮಗೂ ಈ ಲಕ್ಷಣಗಳಿದ್ದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ

ಭಾರತ, ಅಮೇರಿಕಾ, ಯುಕೆ ಗಳಂತಹ ದೇಶಗಳಲ್ಲಿ ಈ ಎರಡು ಉದ್ದೇಶಗಳನ್ನು ಸಾಧಿಸಲು ಲಸಿಕಾಕರಣ ಅಭಿಯಾನ ನಡೆಸಲಾಗುತ್ತಿದೆ. ಯುಕೆನಲ್ಲಿ ಇಂದಿಗೂ ಕೂಡ ಪ್ರತಿಯೊಂದು ವಯಸ್ಸಿನ ವ್ಯಕ್ತಿಗಳಿಗೆ ಲಸಿಕೆ ನೀಡಲು ಅನುಮತಿ ನೀಡಲಾಗಿಲ್ಲ. ಅಮೇರಿಕಾದಲ್ಲಿಯೂ ಕೂಡ ವಯಸ್ಸು ಹಾಗೂ ಅವಶ್ಯಕತೆಗೆ ಅನುಗುಣವಾಗಿ ಲಸಿಕೆ ನೀಡಲಾಗಿದೆ. ಫ್ರಾನ್ಸ್ ನಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಪಾಯ ಹೆಚ್ಚಾಗಿದೆ ಮತ್ತು ಅವರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ- Hapatitis ಲಸಿಕೆಯಿಂದ Corona ಚಿಕಿತ್ಸೆ ಸಾಧ್ಯ? DCGI ಅನುಮತಿ ಕೋರಿದ Zydus Cadila

ಸ್ವೀಡನ್ ನಲ್ಲಿ 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿಯೂ ಕೂಡ 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ವಿಭಿನ್ನ ಕೆಟಗರಿ ಅಡಿಯೂ ಕೂಡ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ನಮ್ಮ ದೇಶದಲ್ಲಿಯೂ ಕೂಡ ಯೋಜನೆಗೆ ಅನುಗುಣವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- Critical Health Insurance Policy ಬಗ್ಗೆ ನಿಮಗೆಷ್ಟು ತಿಳಿದಿದೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News