ನವದೆಹಲಿ: Coronavirus Third Wave ಮಕ್ಕಳ ಪಾಲಿಗೆ ಅಪಾಯಕಾರಿಯಾಗಿದೆ ಎಂಬ ಅಂಶವನ್ನು AIIMS ನಿರ್ದೇಶಕ ಡಾ. ರಣದೀಪ್ ಗುಲೇರಿಯಾ (Dr. Randeep Guleria) ತಳ್ಳಿಹಾಕಿದ್ದಾರೆ. ಮಂಗಳವಾರ ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿರುವ ಅವರು, ಯಾವುದೇ ಭಾರತೀಯ ಅಥವಾ ಜಾಗತಿಕ ಅಧ್ಯಯನದಲ್ಲಿ ಇಂತಹ ಯಾವುದೇ ಸಂಗತಿ ಬೆಳಕಿಗೆ ಬಂದಿಲ್ಲ ಎಂದಿದ್ದಾರೆ. ಅಷ್ಟೇ ಯಾಕೆ, ಎರಡನೇ ಅಲೆಯಲ್ಲಿಯೂ ಕೂಡ ಸೊಂಕಿತರಾದ ಮಕ್ಕಳಲ್ಲಿ ವೈರಸ್ ನ ಕೇವಲ ಮಾಮೂಲಿ ಲಕ್ಷಣಗಳಿದ್ದವು ಎಂದು ಅವರು ಹೇಳಿದ್ದಾರೆ. ಅವರಲ್ಲಿದ್ದ ಬೇರೆ ಗಂಭೀರ ಕಾಯಿಲೆಯ ಹಿನ್ನೆಲೆ ಅವರಲ್ಲಿನ ಗಂಭೀರತೆ ಸ್ವಲ್ಪ ಜಾಸ್ತಿಯಾಗಿತ್ತು. ಭವಿಷ್ಯದಲ್ಲಿಯೂ ಕೂಡ ಮಕ್ಕಳ ಮೇಲೆ ಕೊರೊನಾ ವೈರಸ್ (Coronavirus) ಯಾವುದೇ ಗಂಭೀರ ಪರಿಣಾಮ ಬೀರುತ್ತದೆ ಎಂದು ತಮಗನಿಸುವುದಿಲ್ಲ ಎಂದು ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಇದನ್ನೂ ಓದಿ- ವ್ಯಾಕ್ಸಿನ್ ಪ್ರೋಗ್ರಾಮ್ ಗಾಗಿ ಕೇಂದ್ರ ಸರ್ಕಾರದಿಂದ ನೂತನ ಮಾರ್ಗಸೂಚಿಗಳು, ಜೂನ್ 21ರಿಂದ ಅನ್ವಯ
ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ ಆರೋಗ್ಯ ಸಚಿವಾಲಯ, ಕೊರೊನಾ ವೈರಸ್ (Coronavirus) ನ ಎರಡನೇ ಅಲೆ ಕಳೆದ ವಾರ ತನ್ನ ವೇಗ ಕಳೆದುಕೊಂಡಿದೆ ಎಂದಿದೆ. ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿರುವ ಲವ್ ಅಗರವಾಲ್ (Luv Agarwal ಪ್ರಕಾರ, ಒಟ್ಟು ಚೇತರಿಕೆಯ ದರ ವೇಗವಾಗಿ ಏರಿಕೆಯಾಗಿ ಶೇ.94.3 ರಷ್ಟಾಗಿತ್ತು ಎಂದು ಅವರು ಹೇಳಿದ್ದಾರೆ. ಇದಲ್ಲದೆ ಜೂನ್ 1 ರಿಂದ ಜೂನ್ 7 ರ ಮಧ್ಯೆ ಪಾಸಿಟಿವಿಟಿ ದರ ಕೂಡ ಶೇ.6.3ರಷ್ಟಿತ್ತು. ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ ವಾರ ಹೊಸ ಪ್ರಕರಣಗಳಲ್ಲಿ ಕೇವಲ ಶೇ.33 ರಷ್ಟು ಮಾತ್ರ ಇಳಿಕೆಯಾಗಿದೆ. ಸಕ್ರೀಯ ಪ್ರಕರಣಗಳಲ್ಲಿ ಶೇ.65 ರಷ್ಟು ಇಳಿಕೆಯಾಗಿದೆ. ದೇಶಾದ್ಯಂತ ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆ ಇರುವ ಸುಮಾರು 15 ರಾಜ್ಯಗಳಿವೆ ಎಂದು ಲವ್ ಅಗರವಾಲ್ ಹೇಳಿದ್ದಾರೆ.
ಇದನ್ನೂ ಓದಿ-Alert! ದೇಶಕ್ಕೆ ಎಂಟ್ರಿ ಕೊಟ್ಟ Coronavirus ಹೊಸ ರೂಪಾಂತರಿ! ಯಾರಿಗೆ ಹೆಚ್ಚು ಅಪಾಯ?
ಕಳೆದ ಒಂದು ದಿನದಲ್ಲಿ 86,498 ಹೊಸ ಕರೋನಾ ಪ್ರಕರಣಗಳು ಕಂಡುಬಂದಿವೆ ಎಂಬುದು ನೆಮ್ಮದಿಯ ಸುದ್ದಿ. ಕಳೆದ ತಿಂಗಳು ಕರೋನಾದ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ, ಹೊಸ ಪ್ರಕರಣಗಳ ಸಂಖ್ಯೆ 79% ರಷ್ಟು ಕಡಿಮೆಯಾಗಿದೆ. ಇದಲ್ಲದೆ, ಕಳೆದ ವಾರ ಒಟ್ಟು ಹೊಸ ಪ್ರಕರಣಗಳಲ್ಲಿ ಶೇಕಡಾ 33 ರಷ್ಟು ಇಳಿಕೆ ಕಂಡುಬಂದಿದೆ. ಕಳೆದ ಒಂದು ತಿಂಗಳಿನಿಂದ, 322 ಜಿಲ್ಲೆಗಳು ಹೊಸ ಕರೋನದ ಪ್ರಕರಣಗಳಲ್ಲಿ ಸ್ಥಿರ ಕುಸಿತವನ್ನು ಕಾಣುತ್ತಿವೆ. ಮೂರನೆಯ ತರಂಗದಲ್ಲಿ ಮಕ್ಕಳ ಮೇಲೆ ಉಂಟಾಗುವ ಪರಿಣಾಮದ (Corona Effect On Children)ಬಗ್ಗೆ ಅನೇಕ ತಜ್ಞರು ಭೀತಿ ವ್ಯಕ್ತಪಡಿಸಿರುವುದು ಇಲ್ಲಿ ಗಮನಾರ್ಹ. ಇಂತಹ ಪರಿಸ್ಥಿತಿಯಲ್ಲಿ, ಏಮ್ಸ್ ನಿರ್ದೇಶಕರು (AIIMS Director Dr. Randeep Guleria) ಈ ಕುರಿತಾದ ಸಾಧ್ಯತೆಗಳನ್ನು ತಳ್ಳಿಹಾಕಿರುವುದರಿಂದ ದೇಶಾದ್ಯಂತ ಇರುವ ಮಕ್ಕಳ ಪೋಷಕರು ಖಂಡಿತ ನಿಟ್ಟುಸಿರು ಬಿಡಲಿದ್ದಾರೆ ಎಂಬುದು ಮಾತ್ರ ನಿಜ.
ಇದನ್ನೂ ಓದಿ- Vaccine: ದಿನದ ಯಾವ ಸಮಯದಲ್ಲಿ ಲಸಿಕೆ ಹಾಕಿಸಿದರೆ ಉತ್ತಮ? ಅಧ್ಯಯನ ಏನ್ ಹೇಳುತ್ತೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.