Coronavirus Third Wave: Corona ಸೋಂಕಿನ ಹೊಸ ಅಲೆ ಹೇಗೆ ಬರುತ್ತದೆ? AIIMS ವೈದ್ಯ ಹೇಳಿದ್ದೇನು?

Coronavirus Third Wave: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ (Coronavirus Second Wave) ಭಾರತವು (Coronavirus Cases In India) ತೀವ್ರವಾಗಿ ತತ್ತರಿಸಿ ಹೋಗಿದೆ. ಈ ಹಳೆಯ ವೇಳೆ ದಿನನಿತ್ಯ ಅಪಾರ ಸಂಖ್ಯೆಯ ಜೀವಗಳು ತಮ್ಮ ಪ್ರಾಣ ಕಳೆದುಕೊಂಡಿವೆ ಹಾಗೂ ಆಸ್ಪತ್ರೆಗಳಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಬಿಕ್ಕಟ್ಟನ್ನು (Coronavirus Crisis) ಮತ್ತಷ್ಟು ಉಲ್ಬಣಗೊಳಿಸಿತ್ತು.

Written by - Nitin Tabib | Last Updated : Jun 20, 2021, 11:28 PM IST
  • ಕೊರೊನಾ ವೈರಸ್ ನ ಎರಡನೇ ಅಲೆಯ ವೇಗ ಇದೀಗ ಕಡಿಮೆಯಾಗಿದೆ.
  • ಆದರೆ, ಸಂಭಾವ್ಯ ಮೂರನೇ ಅಲೆಯ ಕುರಿತು ತಜ್ಞರು ನಿರಂತರ ಎಚ್ಚರಿಕೆ ನೀಡುತ್ತಲೇ ಇದ್ದಾರೆ.
  • ಮೂರನೇ ಅಲೆ ಹೇಗೆ ಬರಲಿದೆ ಎಂಬುದರ ಕುರಿತು AIIMS ವೈದ್ಯರು ಹೇಳಿದ್ದೇನು?
Coronavirus Third Wave: Corona ಸೋಂಕಿನ ಹೊಸ ಅಲೆ ಹೇಗೆ ಬರುತ್ತದೆ? AIIMS ವೈದ್ಯ ಹೇಳಿದ್ದೇನು? title=
Coronavirus Third Wave In India (File Photo)

ನವದೆಹಲಿ: Coronavirus Third Wave - ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯ (Coronavirus Second Wave) ವೇಗವು ಇದೀಗ ಸಾಕಷ್ಟು ಕಡಿಮೆಯಾಗಿದೆ. ಕರೋನಾದ ಅಂಕಿ ಅಂಶಗಳು (Coronavirus Case) ಕಡಿಮೆಯಾಗುತ್ತಲೇ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಧಾನವಾಗಿ ನಿರ್ಬಂಧನೆಗಳನ್ನು ಸಡಿಲಗೊಳಿಸುತ್ತಿವೆ. ಆದರೂ ಕೂಡ ಕರೋನವೈರಸ್ನ ಮೂರನೇ ಅಲೆಯ ಸಾಧ್ಯತೆಯನ್ನು ವ್ಯಕ್ತಪಡಿಸಿ, ಲಾಕ್ಡೌನ್ ಅನ್ನು ಸಡಿಲಿಸದಂತೆ ತಜ್ಞರು ಎಚ್ಚರಿಸಿದ್ದಾರೆ. ಕರೋನದ ಮೂರನೇ ಅಲೆ (Croronavirus Third Wave) ಯಾವಾಗ ಬರುತ್ತದೆ, ಅದು ಎಷ್ಟು ಗಂಭೀರವಾಗಿರುತ್ತದೆ ಮತ್ತು ಜನರು ಅದರ ಕುರಿತು ಎಷ್ಟು ಜಾಗರೂಕರಾಗಿರಬೇಕು?. ಇಂತಹ ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತಿವೆ.

ಏತನ್ಮಧ್ಯೆ, ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕ ನೀರಜ್ ನಿಸ್ಚಲ್ ಅವರು ಭಾನುವಾರ ಕೊರೊನಾ ವೈರಸ್ ನ ಸಂಭಾವ್ಯ ಮೂರನೇ ಅಲೆಗೆ ಕಾರಣವಾಗುವ ಪ್ರಮುಖ  ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರೊ. ನೀರಜ್ ಹೇಳುವ ಪ್ರಕಾರ, 'ಕರೋನದ ಸಂಭವನೀಯ ಮೂರನೇ ಅಲೆಯು ಮುಖ್ಯವಾಗಿ ಎರಡು ಪ್ರಮುಖ ಅಂಶಗಳನ್ನು ಅವಲಂಬಿಸಿರುತ್ತದೆ - ಮೊದಲ ವೈರಸ್-ಸಂಬಂಧಿತ ಮತ್ತು ಎರಡನೆಯ ಮಾನವ-ಸಂಬಂಧಿತ. ವೈರಸ್‌ನಲ್ಲಿನ ಮ್ಯೂಟೆಶನ್ ಮತ್ತು ಅದರ ಜಟಿಲತೆಗಳು ನಮ್ಮ ಕೈಯಲ್ಲಿಲ್ಲ, ಆದರೆ ನಮ್ಮ ಪ್ರಯತ್ನಗಳಿಂದ ಮಾನವ ಸಂಬಂಧಿತ ಅಂಶಗಳನ್ನು ನಾವು ನಿವಾರಿಸಬಹುದು ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-School College Reopen: ಈ ರಾಜ್ಯದಲ್ಲಿ ಜುಲೈ ಒಂದರಿಂದ ಶಾಲೆ ಕಾಲೇಜು ಆರಂಭ

ಕೊರೊನಾ ವೈರಸ್ ನ ಮೂರನೇ ಅಲೆ ಯಾವಾಗ ಬರಲಿದೆ?
COVID-19 ಗೆ ಸಂಬಂಧಿಸಿದ ಸೂಕ್ತವಾದ ನಡವಳಿಕೆಯನ್ನು ಅನುಸರಿಸದಿದ್ದರೆ ಮತ್ತು ಜನಸಂದಣಿಯನ್ನು ನಿಲ್ಲಿಸದಿದ್ದರೆ, ಮುಂದಿನ ಆರರಿಂದ ಎಂಟು ವಾರಗಳಲ್ಲಿ ವೈರಸ್ ಸೋಂಕಿನ ಮೂರನೇ ಅಲೆ ದೇಶಾದ್ಯಂತ (Coronavirus In India) ಎದುರಾಗುವ ಸಾಧ್ಯತೆ ಇದೆ ಎಂದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಿರ್ದೇಶಕ ರಂದೀಪ್ ಗುಲೇರಿಯಾ ಶನಿವಾರ ಎಚ್ಚರಿಸಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ ಭಾರತವು ತೀವ್ರವಾಗಿ ತತ್ತರಿಸಿ ಹೋಗಿದೆ. ಈ ಹಳೆಯ ವೇಳೆ ದಿನನಿತ್ಯ ಅಪಾರ ಸಂಖ್ಯೆಯ ಜೀವಗಳು ತಮ್ಮ ಪ್ರಾಣ ಕಳೆದುಕೊಂಡಿವೆ (Coronavirus Death) ಹಾಗೂ ಆಸ್ಪತ್ರೆಗಳಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಬಿಕ್ಕಟ್ಟನ್ನು ಮತ್ತಷ್ಟು  ಉಲ್ಬಣಗೊಳಿಸಿತ್ತು. ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ದೇಶದ ಹೆಚ್ಚಿನ ಭಾಗಗಳಲ್ಲಿ ಲಾಕ್ ಡೌನ್ ಮತ್ತು ಕಠಿಣ ನಿರ್ಬಂಧಗಳನ್ನು ಸಹ ಜಾರಿಗೆ ತರಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-ಕೋವಿಡ್ ಸಂತ್ರಸ್ತರಿಗೆ ₹ 4 ಲಕ್ಷ ನೀಡಲು ಸಾಧ್ಯವಿಲ್ಲ ಎಂದ ಕೇಂದ್ರ

ಕೊರೊನಾ ಮೂರನೇ ಅಲೆಯಿಂದ ಹೇಗೆ ಪಾರಾಗಬೇಕು (How To Escape From Coronavirus Third Wave)
>> ಇನ್ನೂ ಕೂಡ ಸೋಂಕನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ
>> ಮನೆಯಲ್ಲಿ ಸ್ವಚ್ಚತೆ ಹಾಗೂ ವೈಯಕ್ತಿಕ ಇನ್ಫೆಕ್ಷನ್ ಬಗ್ಗೆ ಕಾಳಜಿ ವಹಿಸಿ.
>> ಮನೆಯಿಂದ ಹೊರಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ.
>> ಸಾಧ್ಯವಾದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ.
>> ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಕುಟುಂಬದ ಪ್ರತ್ಯೇಕ ಸದಸ್ಯರಿಗೆ ಕೊರೊನಾ ವ್ಯಾಕ್ಸಿನ್ ಹಾಕಿಸಿ.

ಇದನ್ನೂ ಓದಿ-3T+V Formula: ಲಾಕ್ ಡೌನ್ ಸಡಿಲಿಕೆ ದುಬಾರಿ ಬೀಳದಿರಲಿ, ರಕ್ಷಣೆಗಾಗಿ ಕೇಂದ್ರದಿಂದ ರಾಜ್ಯಗಳಿಗೆ 3T+V ಫಾರ್ಮುಲಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News