ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಅಧಿಕೃತ ಖರ್ಚುಗಳನ್ನು ತಡೆಯಲು ಖರ್ಚು ಇಲಾಖೆ ( Department of Expenditure) ಸುತ್ತೋಲೆ ಹೊರಡಿಸಿತ್ತು, ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಅಥವಾ ಕಡಿತಗೊಳಿಸುವುದಿಲ್ಲ ಎಂದು ಕೇಂದ್ರವು ಸ್ಪಷ್ಟಪಡಿಸಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸತತವಾಗಿ ಟ್ವೀಟ್ ಮಾಡಿದ ಕೆಲವೇ ಗಂಟೆಗಳ ನಂತರ ಕೇಂದ್ರದ ಸ್ಪಷ್ಟನೆ ಬಂದಿದೆ.
ಆರ್ಥಿಕ ಸಂಕಷ್ಟದಲ್ಲಿ ಕೇಂದ್ರ ಸರ್ಕಾರ, ಸಚಿವಾಲಯಗಳಲ್ಲಿ ಹೊಸ ಹುದ್ದೆಗಳ ರಚನೆಗೆ ತಡೆ
ಸೆಪ್ಟೆಂಬರ್ 04 ರ ದಿನಾಂಕದ ಖರ್ಚು ಇಲಾಖೆ ಸುತ್ತೋಲೆಗಳು ಹುದ್ದೆಗಳ ರಚನೆಗೆ ಆಂತರಿಕ ಕಾರ್ಯವಿಧಾನವನ್ನು ನಿರ್ವಹಿಸುತ್ತದೆ ಮತ್ತು ಯಾವುದೇ ರೀತಿಯಲ್ಲಿ ನೇಮಕಾತಿಯನ್ನು ಪರಿಣಾಮ ಬೀರುವುದಿಲ್ಲ ಅಥವಾ ಕಡಿತಗೊಳಿಸುವುದಿಲ್ಲ" ಎಂದು ಹಣಕಾಸು ಸಚಿವಾಲಯವು ಸುತ್ತೋಲೆಯ ಕೆಲವು ಅಂಶಗಳನ್ನು ಸ್ಪಷ್ಟಪಡಿಸಲು ಟ್ವೀಟ್ ಮಾಡಿದೆ.
मोदी सरकार की सोच -
'Minimum Govt Maximum Privatisation'कोविड तो बस बहाना है,
सरकारी दफ़्तरों को स्थायी ‘स्टाफ़-मुक्त’ बनाना है,
युवा का भविष्य चुराना है,
‘मित्रों’ को आगे बढ़ाना है।#SpeakUp pic.twitter.com/Lu8BKjJ7bg— Rahul Gandhi (@RahulGandhi) September 5, 2020
'ಭಾರತ ಸರ್ಕಾರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ನಿರ್ಬಂಧ ಅಥವಾ ನಿಷೇಧವಿಲ್ಲ. ಸಿಬ್ಬಂದಿ ಆಯ್ಕೆ ಆಯೋಗ, ಯುಪಿಎಸ್ಸಿ, ರೈಲ್ವೆ ನೇಮಕಾತಿ ಮಂಡಳಿ ಮುಂತಾದ ಸರ್ಕಾರಿ ಸಂಸ್ಥೆಗಳ ಮೂಲಕ ಸಾಮಾನ್ಯ ನೇಮಕಾತಿಗಳು ಯಾವುದೇ ನಿರ್ಬಂಧಗಳಿಲ್ಲದೆ ಎಂದಿನಂತೆ ಮುಂದುವರಿಯುತ್ತದೆ" ಎಂದು ಹೇಳಿದೆ.
ಸೆಪ್ಟೆಂಬರ್ 4 ರ ದಿನಾಂಕದ ಸುತ್ತೋಲೆಯಲ್ಲಿ, ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಬರುವ ಖರ್ಚು ಇಲಾಖೆ, ನಿರ್ಣಾಯಕ ಆದ್ಯತೆಯ ಯೋಜನೆಗಳ ಅಗತ್ಯತೆಗಳನ್ನು ಪೂರೈಸಲು ಸಾಕಷ್ಟು ಸಂಪನ್ಮೂಲಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ಅಭಿವೃದ್ಧಿಯೇತರ ವೆಚ್ಚಗಳನ್ನು ನಿಷೇಧಿಸಿತು.
CLARIFICATION:
There is no restriction or ban on filling up of posts in Govt of India . Normal recruitments through govt agencies like Staff Selection Commission, UPSC, Rlwy Recruitment Board, etc will continue as usual without any curbs. (1/2) pic.twitter.com/paQfrNzVo5— Ministry of Finance (@FinMinIndia) September 5, 2020
ಸಚಿವಾಲಯಗಳು / ಇಲಾಖೆಗಳು, ಲಗತ್ತಿಸಲಾದ ಕಚೇರಿಗಳು, ಅಧೀನ ಕಚೇರಿಗಳು, ಶಾಸನಬದ್ಧ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಖರ್ಚು ಇಲಾಖೆಯ ಅನುಮೋದನೆಯೊಂದಿಗೆ ಹೊರತುಪಡಿಸಿ ಹೊಸ ಹುದ್ದೆಗಳ ರಚನೆಯನ್ನು ನಿಷೇಧಿಸಲಾಗಿದೆ ಎಂದು ಕೇಂದ್ರವು ದಾಖಲೆಯಲ್ಲಿ ಪ್ರಕಟಿಸಿದೆ.
ಕರೋನವೈರಸ್ ಪರಿಸ್ಥಿತಿಯನ್ನು ಕೇಂದ್ರ ನಿರ್ವಹಿಸುತ್ತಿರುವುದನ್ನು ಟೀಕಿಸಿರುವ ರಾಹುಲ್ ಗಾಂಧಿ ಕೇಂದ್ರದ ಈ ಸುತ್ತೋಲೆಯ ವಿಚಾರವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ."ಮೋದಿ ಸರ್ಕಾರದ ಆಲೋಚನೆ ಕನಿಷ್ಠ ಸರ್ಕಾರ, ಗರಿಷ್ಠ ಖಾಸಗೀಕರಣ.ಕೋವಿಡ್ ಕೇವಲ ಒಂದು ನೆಪವಷ್ಟೇ, ಎಲ್ಲಾ ಖಾಯಂ ಸಿಬ್ಬಂದಿಗಳ ಸರ್ಕಾರಿ ಕಚೇರಿಗಳನ್ನು ಮುಕ್ತಗೊಳಿಸುವುದು, ಯುವಕರ ಭವಿಷ್ಯವನ್ನು ಕದಿಯುವುದು ಮತ್ತು ತನ್ನ ಸ್ನೇಹಿತರನ್ನು ಮುಂದಕ್ಕೆ ಸಾಗಿಸುವುದು ಸರ್ಕಾರದ ಯೋಜನೆಯಾಗಿದೆ" ಎಂದು ರಾಹುಲ್ ಗಾಂಧಿ ಹಿಂದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.