Coronavirus Oral capsule: ಕ್ಯಾಪ್ಸೂಲ್ ನಿಂದ ಕೊರೊನಾ ಚಿಕಿತ್ಸೆ! ಮೂರನೇ ಹಂತದ ಪರೀಕ್ಷೆ ಯಶಸ್ವಿ, ನಾಳೆ ಬಳಕೆಗೆ ಅನುಮತಿ ಸಾಧ್ಯತೆ

Coronavirus Oral capsule: ಈ ಕುರಿತು ಹೇಳಿಕೆ ನೀಡಿರುವ ಆಪ್ಟಿಮಸ್ ಫಾರ್ಮಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ ಶ್ರೀನಿವಾಸ್ ರೆಡ್ಡಿ, “COVID-19 ಗೆ ಅತ್ಯಾಧುನಿಕ ಮತ್ತು ಕಡಿಮೆ ವೆಚ್ಚದ ಪರಿಣಾಮಕಾರಿ ಚಿಕಿತ್ಸೆಯ ಆಯ್ಕೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಕಡಿಮೆ ಸಮಯದಲ್ಲಿ ರೋಗವನ್ನು ತಟಸ್ಥಗೊಳಿಸುವುದು ನಮ್ಮ ಗುರಿಯಾಗಿದೆ. ಆಪ್ಟಿಮಸ್ ಕೇಂದ್ರೀಯ ಪರವಾನಗಿ ಪ್ರಾಧಿಕಾರದ ಮುಂದೆ ಹಂತ 3 ಕ್ಲಿನಿಕಲ್ ಪ್ರಯೋಗಗಳನ್ನು ಪ್ರಸ್ತುತಪಡಿಸಿದ ಮೊದಲ ಫಾರ್ಮಾ ಕಂಪನಿಯಾಗಿದೆ. ಔಷಧದ ಅಧ್ಯಯನವನ್ನು 29 ವಿವಿಧ ದೇಶಗಳಲ್ಲಿ ನಡೆಸಲಾಗಿದೆ. ಪ್ರಸ್ತುತ ಭಾರತದಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ಲಸಿಕೆಗಳನ್ನು ಬಳಸಲಾಗುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ.

Written by - Nitin Tabib | Last Updated : Oct 29, 2021, 07:24 PM IST
  • ಮೂರನೇ ಹಂತದ ಪರೀಕ್ಷೆ ಪೂರ್ಣಗೊಳಿಸಿದ ಮೊಲ್ನುಪಿರಾವಿರ್.
  • ಶೀಘ್ರದಲ್ಲಿಯೇ ಬರಲಿದೆ ಕೊರೊನಾ ಚಿಕಿತ್ಸೆಗೆ ಮೌಖಿಕ ಔಷಧಿ.
  • ನಾಳೆ DCGI ಅನುಮೋದನೆ ಸಾಧ್ಯತೆ.
Coronavirus Oral capsule: ಕ್ಯಾಪ್ಸೂಲ್ ನಿಂದ ಕೊರೊನಾ ಚಿಕಿತ್ಸೆ! ಮೂರನೇ ಹಂತದ ಪರೀಕ್ಷೆ ಯಶಸ್ವಿ, ನಾಳೆ ಬಳಕೆಗೆ ಅನುಮತಿ ಸಾಧ್ಯತೆ title=
Coronavirus Oral Capsule (File Photo)

ನವದೆಹಲಿ: Coronavirus Oral Capsule - ಭಾರತದಲ್ಲಿ ಕೊರೊನಾವೈರಸ್ (Coronavirus In India) ಚಿಕಿತ್ಸೆಗಾಗಿ ಮೊಲ್ನುಪಿರವಿರ್ (Molnupiravir) ಮೌಖಿಕ ಕ್ಯಾಪ್ಸುಲ್‌ಗಳ (Oral Capsule) ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಔಷಧ ತಯಾರಕ ಆಪ್ಟಿಮಸ್ ಫಾರ್ಮಾ (Optimus Pharma) ಗುರುವಾರ ತಿಳಿಸಿದೆ. ಮೇ 18, 2021 ರಂದು, ಹೈದರಾಬಾದ್ ಮೂಲದ ಸಂಸ್ಥೆಯು ವಿಷಯ ತಜ್ಞರ ಸಮಿತಿಯ (SEC) ಶಿಫಾರಸುಗಳ ಪ್ರಕಾರ ಪ್ರಯೋಗವನ್ನು ನಡೆಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI), DGHS ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅನುಮೋದನೆಯನ್ನು ಪಡೆದುಕೊಂಡಿತ್ತು. CDSCO ನ, ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ. ಐದನೇ ದಿನದ ಅಧ್ಯಯನದ ಪ್ರಕಾರ, ಚಿಕಿತ್ಸೆಯಲ್ಲಿ ಸೇರಿಸಲಾದ ರೋಗಿಗಳಲ್ಲಿ ಶೇ. 78.4  RT-PCR ಋಣಾತ್ಮಕವಾಗಿದೆ ಎಂದು ಕಂಡುಬಂದಿದೆ, ಪ್ಲೇಸ್ಬೊ ಗುಂಪಿನಲ್ಲಿ ಇದು ಶೇ. 48.2 ರಷ್ಟಿದೆ. 

ಈ ಸಂದರ್ಭದಲ್ಲಿ, ಸೌಮ್ಯದಿಂದ ಮಧ್ಯಮ ಕೋವಿಡ್ (Coronavirus) ಸೋಂಕಿನ ಗುಣಲಕ್ಷಣ ಹೊಂದಿದವರ ಚಿಕಿತ್ಸೆಗಾಗಿ ಮೊಲ್ನುಪಿರವಿರ್ ತುರ್ತು ಅನುಮೋದನೆಗಾಗಿ ಮೆರ್ಕ್ ಮತ್ತು ರಿಡ್ಜ್‌ಬ್ಯಾಕ್ ಮನವಿಯನ್ನು ಪರಿಗಣಿಸಲು ಸಲಹಾ ಸಮಿತಿಯು ನವೆಂಬರ್ 30 ರಂದು ಸಭೆ ಸೇರಲಿದೆ. ಅಂತೆಯೇ, ಚಿಕಿತ್ಸೆಗೆ ಒಳಪಡುವ ಜನರಲ್ಲಿ ಅಧ್ಯಯನದ 10 ನೇ ದಿನದಂದು ಶೇ. 91.5 ಪ್ರತಿಶತದ RT-PCR ನಕಾರಾತ್ಮಕತೆಯನ್ನು ದಾಖಲಿಸಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಆಪ್ಟಿಮಸ್ ಫಾರ್ಮಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಶ್ರೀನಿವಾಸ್ ರೆಡ್ಡಿ, "COVID-19 ಗೆ ಅತ್ಯಾಧುನಿಕ ಮತ್ತು ಕಡಿಮೆ ವೆಚ್ಚದ ಪರಿಣಾಮಕಾರಿ ಚಿಕಿತ್ಸಾ ಆಯ್ಕೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಕಡಿಮೆ ಸಮಯದಲ್ಲಿ ರೋಗವನ್ನು ತಟಸ್ಥಗೊಳಿಸುವುದು ನಮ್ಮ ಗುರಿಯಾಗಿದೆ." ಎಂದು ಹೇಳಿದ್ದಾರೆ. 

ಇದನ್ನೂ ಓದಿ-Coronavirus Havoc: ಈ ದೇಶದಲ್ಲಿ ಮತ್ತೆ ವಿನಾಶ ಉಂಟು ಮಾಡುತ್ತಿದೆ ಕರೋನಾ

ಪ್ರಸ್ತುತ ಆಪ್ಟಿಮಸ್ ಫಾರ್ಮಾ ಕೇಂದ್ರೀಯ ಪರವಾನಗಿ ಪ್ರಾಧಿಕಾರದ ಮುಂದೆ ಹಂತ 3 ರ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಸ್ತುತಪಡಿಸಿದ ಮೊದಲ ಫಾರ್ಮಾ ಕಂಪನಿಯಾಗಿದೆ. ದೇಶದ 29 ವಿವಿಧ ಸ್ಥಳಗಳಲ್ಲಿ ಔಷಧದ ಅಧ್ಯಯನವನ್ನು ನಡೆಸಲಾಗಿದೆ. ಪ್ರಸ್ತುತ ಭಾರತದಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ಲಸಿಕೆಗಳನ್ನು ಬಳಸಲಾಗುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ.  DCGI ಮತ್ತು SEC ಇದುವರೆಗೆ ಜಾನ್ಸನ್ ಮತ್ತು ಜಾನ್ಸನ್, ಮಾಡರ್ನಾ, ಸ್ಪುಟ್ನಿಕ್ ವಿ ಮತ್ತು ಝೈಡಸ್ ಕ್ಯಾಡಿಲಾದಿಂದ ಲಸಿಕೆಗಳನ್ನು ಅನುಮೋದಿಸಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-COVID-19 ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದ 3 ಲಕ್ಷ ಪ್ರಕರಣ ಹಿಂತೆಗೆದುಕೊಂಡ ಯುಪಿ ಸರ್ಕಾರ

ಇನ್ನೊಂದೆಡೆ, ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಪ್ರಸ್ತುತ, 1 ಲಕ್ಷ 60 ಸಾವಿರದ 989 ಸಕ್ರಿಯ ಕರೋನಾ ಪ್ರಕರಣಗಳಿದ್ದು, 3 ಕೋಟಿ 36 ಲಕ್ಷ 14 ಸಾವಿರ 434 ಜನರು ಚೇತರಿಸಿಕೊಂಡಿದ್ದಾರೆ ಮತ್ತು ತಮ್ಮ ಮನೆಗಳಿಗೆ ತೆರಳಿದ್ದಾರೆ. ಇದೇ ವೇಳೆ ಕರೋನಾದಿಂದ 4 ಲಕ್ಷ 56 ಸಾವಿರ 386 ಜನರು ಸಾವನ್ನಪ್ಪಿದ್ದಾರೆ. ಇದುವರೆಗೆ ದೇಶದಲ್ಲಿ 100 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಡೋಸ್ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 49,09,254 ಜನರಿಗೆ ಕರೋನಾ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ-Corona Vaccine: ಈ ಲಸಿಕೆಯಿಂದ ಎಚ್‌ಐವಿ ಅಪಾಯವಿದೆಯೇ? ದಕ್ಷಿಣ ಆಫ್ರಿಕಾದ ನಂತರ, ನಮೀಬಿಯಾದಲ್ಲಿ ಲಸಿಕೆ ನಿಷೇಧ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News