Corona Active Cases In India: Alert! ಮರಳಿ ಬರುತ್ತಿದೆ ಕೊರೊನಾ, ಒಂದೇ ದಿನದಲ್ಲಿ 43,654 ಪ್ರಕರಣಗಳು, ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಕೇರಳದಿಂದ ವರದಿ

Corona Active Cases In India - ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕರೋನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಆರೋಗ್ಯ ಸಚಿವಾಲಯದ (Health Ministry) ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ ಒಂದು ದಿನದಲ್ಲಿ ದೇಶದೊಳಗೆ 43 ಸಾವಿರ 654 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. 

Written by - Nitin Tabib | Last Updated : Jul 28, 2021, 12:40 PM IST
  • ಕಳೆದ 24 ಗಂಟೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ.
  • ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಕೇವಲ ಕೇರಳ ಒಂದೇ ರಾಜ್ಯದಿಂದ ವರದಿಯಾಗಿವೆ.
  • ಕೇರಳದಲ್ಲಿ ಒಂದೇ ದಿನದೊಳಗೆ ಸುಮಾರು 156 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.
Corona Active Cases In India: Alert! ಮರಳಿ ಬರುತ್ತಿದೆ ಕೊರೊನಾ, ಒಂದೇ ದಿನದಲ್ಲಿ 43,654 ಪ್ರಕರಣಗಳು, ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಕೇರಳದಿಂದ ವರದಿ  title=
Corona Active Cases In India (File Photo)

ನವದೆಹಲಿ: Corona Active Cases In India - ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕರೋನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಆರೋಗ್ಯ ಸಚಿವಾಲಯದ (Health Ministry) ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ ಒಂದು ದಿನದಲ್ಲಿ ದೇಶದೊಳಗೆ 43 ಸಾವಿರ 654 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಅರ್ಧದಷ್ಟು ಪ್ರಕರಣಗಳು ಕೇವಲ ಕೇರಳದ ಒಂದೇ ರಾಜ್ಯದಿಂದ ವರದಿಯಾಗಿವೆ. ಇದೇ ವೇಳೆ, ಈ ಅವಧಿಯಲ್ಲಿ ಕರೋನಾದಿಂದ (Covid-19) ಮೃತಪಟ್ಟವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ ಮತ್ತು ಈ ಅವಧಿಯಲ್ಲಿ 640 ಜನರು ಸೋಂಕಿನಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಆದರೆ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಇನ್ನೂ ನಾಲ್ಕು ಲಕ್ಷಕ್ಕಿಂತ ಕಡಿಮೆಯಾಗಿದೆ. ಪ್ರಸ್ತುತ ದೇಶಾದ್ಯಂತ 3 ಲಕ್ಷ 99 ಸಾವಿರ 436 ಸಕ್ರೀಯ ಪ್ರಕರಣಗಳಿವೆ (Covid-19 Active Cases In India). ಇನ್ನೊಂದೆಡೆ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ (Coronavirus)ಸೋಂಕಿನಿಂದ ಸುಮಾರು 41 ಸಾವಿರ 678 ಜನರು ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ-Cloudburst Hits J&K: ಜಮ್ಮು-ಕಾಶ್ಮೀರದಲ್ಲಿ ಮೋಡ ಸ್ಫೋಟ, 4 ಸಾವು, 39 ನಾಪತ್ತೆ

ದೇಶಾದ್ಯಂತ ಇದುವರೆಗೆ ಸುಮಾರು 4 ಲಕ್ಷ 22 ಸಾವಿರಕ್ಕಿಂತ ಹೆಚ್ಚು ಜನರು ಕೊರೊನಾ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ (Covid-19 Deaths In India). ಇನ್ನೊಂದೆಡೆ 3 ಕೋಟಿ 6 ಲಕ್ಷ 63 ಸಾವಿರದ 147 ಜನರು ಕೊರೊನಾ ವಿರುದ್ಧದ ಹೋರಾಟವನ್ನು ಗೆದ್ದಿದ್ದಾರೆ. ದೇಶದಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಸಿ ಗೆದ್ದವರ ದರ ಶೇ.97.39 ರಷ್ಟಿದೆ. ಇನ್ನೊಂದೆಡೆ ನಿತ್ಯ ಸೋಂಕಿಗೆ ಗುರಿಯಗುತ್ತಿರುವವರ ದರ ಶೇ.5 ಕ್ಕಿಂತ ಕಡಿಮೆಯಾಗಿದೆ.

ಇದನ್ನೂ ಓದಿ-Uttar Pradesh: ಬರಾಬಂಕಿಯಲ್ಲಿ ಭೀಕರ ರಸ್ತೆ ಅಪಘಾತ, 18 ಜನರು ಧಾರುಣ ಸಾವು

ಮಂಗಳವಾರ ಕೇರಳ ಒಂದೇ ರಾಜ್ಯದಿಂದ ಕೊರೊನಾ ಸೋಂಕಿನ ಸುಮಾರು 22 ಸಾವಿರ 129 ಹೊಸ  ಪ್ರಕರಣಗಳು ವರದಿಯಾಗಿವೆ. ಕಳೆದ 51 ದಿನಗಳಲ್ಲಿ ಮೊದಲ ಬಾರಿಯೇ ಯಾವುದೇ ಒಂದು ರಾಜ್ಯದಿಂದ ಕೊರೋನಾದ 20 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ TPR ದರ ಕೂಡ ಶೇ.12 ಕ್ಕಿಂತ ಹೆಚ್ಚಾಗಿದೆ. ಕೇರಳದ ಈ ಹೊಸ ಪ್ರಕರಣಗಳ ದಾಖಲೆ ಮತ್ತೊಮ್ಮೆ ಚಿಂತೆ ಹೆಚ್ಚಿಸಿದೆ. ನೂತನ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಒಂದು ದಿನದೊಳಗೆ 156 ಜನ ಕೊರೊನಾದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 

ಇದನ್ನೂ ಓದಿ-Antony Blinken : ದೆಹಲಿಗೆ ಬಂದಿಳಿದ ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News