ನ್ಯಾಯಾಂಗ ನಿಂದನೆ ಪ್ರಕರಣ : ನಿವೃತ್ತ ನ್ಯಾಯಾಧೀಶ ಕರ್ಣನ್ ಬಿಡುಗಡೆ

ಕೋಲ್ಕತ್ತಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಸಿ.ಎಸ್.ಕರ್ಣನ್ ಇಂದು ಪ್ರೆಸಿಡೆನ್ಸಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.   

Last Updated : Dec 20, 2017, 12:43 PM IST
  • ನಿವೃತ್ತ ನ್ಯಾಯಾಧೀಶ ಸಿ.ಎಸ್.ಕರ್ಣನ್ ಇಂದು ಪ್ರೆಸಿಡೆನ್ಸಿ ಜೈಲಿನಿಂದ ಬಿಡುಗಡೆ.
  • ಕರ್ಣನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು.
  • ಪೊಲೀಸರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಕರ್ಣನ್ ಅವರನ್ನು ಜೂನ್ 20ರಂದು ಬಂಧಿಸಿದ್ದರು.
ನ್ಯಾಯಾಂಗ ನಿಂದನೆ ಪ್ರಕರಣ : ನಿವೃತ್ತ ನ್ಯಾಯಾಧೀಶ ಕರ್ಣನ್ ಬಿಡುಗಡೆ  title=

ಕೋಲ್ಕತ್ತಾ : ಕೋಲ್ಕತ್ತಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಸಿ.ಎಸ್.ಕರ್ಣನ್ ಇಂದು ಪ್ರೆಸಿಡೆನ್ಸಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. 

ನ್ಯಾಯಾಧೀಶ ಕರ್ಣನ್ ಈ ಹಿಂದೆ ಕೆಲ ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಜತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಕರ್ಣನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೇ 9 ರಂದು ಕರ್ಣನ್‌ಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ಕರ್ಣನ್ ತಲೆಮರೆಸಿಕೊಂಡಿದ್ದರು. ಸೇವೆಯಿಂದ ನಿವೃತ್ತರಾದ ದಿನವೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಪೊಲೀಸರು ಅವರಿಗಾಗಿ ಬಹಳಷ್ಟು ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. 

ಬಹಳಷ್ಟು ತನಿಖೆಯ ನಂತರ ಪೊಲೀಸರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಕರ್ಣನ್ ಅವರನ್ನು ಜೂನ್ 20ರಂದು ಬಂಧಿಸಿದ್ದರು. ಬಳಿಕ ಕರ್ಣನ್ ಅವರನ್ನು ಕೋಲ್ಕತ್ತಾ ಪ್ರೆಸಿಡೆನ್ಸಿ ಜೈಲಿನಲ್ಲಿ ಇರಿಸಲಾಗಿತ್ತು. 

Trending News