ModiMosa ಎಂಬ ಹ್ಯಾಷ್‌ಟ್ಯಾಗ್ ಮೂಲಕ ಮೋದಿಯನ್ನು ಕರ್ನಾಟಕಕ್ಕೆ ಸ್ವಾಗತಿಸಿದ ಕಾಂಗ್ರೇಸ್..!‌

Congress Tweet : ಪ್ರಧಾನಿ ನರೇಂದ್ರ ಮೋದಿಯವರು ಕಾರ್ನಾಟಕ ರಾಜ್ಯಕ್ಕೆ ಬೇಟಿ ನೀಡಿದ್ದಾರೆ. ಕಾಂಗ್ರೇಸ್‌ ತನ್ನ ಸರಣಿ ಟ್ವೀಟ್ ಗಳ ಮೂಲಕ ಪ್ರಧಾನಿಯನ್ನು ಸ್ವಾಗತಿಸುವುದರ ಜೊತೆಗೆ ಹಲವು ಪ್ರಶ್ನೆಗಳನ್ನು ಕೇಳಿದೆ. ಮೈಸೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ಸದ್ಯ ಮಂಡ್ಯದಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ. ಮಧ್ಯಾಹ್ನ ಅವರು ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಈ ವಿಚಾರವಾಗಿ ಕಾಂಗ್ರೇಸ್‌ ಮೋದಿ ಮೋಸ ಎನ್ನುವ ಹ್ಯಾಷ್‌ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿದೆ.   

Written by - Zee Kannada News Desk | Last Updated : Mar 12, 2023, 02:16 PM IST
  • ಭಾರತದ ಪ್ರಧಾನಿ ನರೇಂದ್ರ ಮೋದಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭಾನುವಾರ ರಾಜ್ಯಕ್ಕೆ ಆಗಮಿಸಿದ್ದಾರೆ.
  • ನೀವು ಹೀಗೆ ಹೋಗಿ ಹಾಗೆ ಬರುವುದರಲ್ಲಿ 'ಮಾಡಾಳ್' ಭ್ರಷ್ಟಾಚಾರ ಹೊರಬಂದಿದೆ.
  • ಪ್ರಧಾನಿ ನರೇಂದ್ರ ಮೋದಿಯನ್ನು ಟ್ವೀಟ್‌ ಮೂಲಕ ಪ್ರಶ್ನಿಸಿದೆ.
ModiMosa ಎಂಬ ಹ್ಯಾಷ್‌ಟ್ಯಾಗ್ ಮೂಲಕ ಮೋದಿಯನ್ನು ಕರ್ನಾಟಕಕ್ಕೆ ಸ್ವಾಗತಿಸಿದ ಕಾಂಗ್ರೇಸ್..!‌  title=

Congress : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಂಇಪಿಸುತ್ತಿದ್ದಂತೆ ಚುನಾವಣೆ ಕಾವು ಏರುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭಾನುವಾರ ರಾಜ್ಯಕ್ಕೆ ಆಗಮಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಪ್ರತಿಪಕ್ಷ ಕಾಂಗ್ರೆಸ್ #ModiMosa ಎಂಬ ಹ್ಯಾಷ್‌ಟ್ಯಾಗ್ ಬಳಕೆ ಮಾಡಿಕೊಂಡು ಟ್ವೀಟ್ ಮಾಡುವ ಮೂಲಕ ನರೇಂದ್ರ ಮೋದಿಯನ್ನು ಸ್ವಾಗತಿಸುವುದರ ಜೊತೆಗೆ, ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ. ಭಾನುವಾರ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಭ್ರಷ್ಟಾಚಾರದ ಪರ್ವತವನ್ನೇ ಹೊತ್ತುಕೊಂಡಿರುವ ಬಿಜೆಪಿ ಕರ್ನಾಟಕ ಪರವಾಗಿ ಮತ ಕೇಳಲು ನಾಚಿಕೆ ಎನಿಸುವುದಿಲ್ಲವೇ?' ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಟ್ವೀಟ್‌ ಮೂಲಕ ಪ್ರಶ್ನಿಸಿದೆ. 

'ನರೇಂದ್ರ ಮೋದಿ ಅವರೇ, " ನೆರೆ ಬಂದಾಗ ಬರಲಿಲ್ಲ,ಬರ ಬಂದಾಗ ಬರಲಿಲ್ಲ, ಕರ್ನಾಟಕಕ್ಕೆ ಆಕ್ಸಿಜನ್ ಕೊಡಲಿಲ್ಲ,ವ್ಯಾಕ್ಸಿನ್ ನೀಡಲಿಲ್ಲ, GST ಪಾಲು ಸಿಗಲಿಲ್ಲ. ಅವರು ಪ್ರಧಾನಿ ಕಚೇರಿಯ ಬಾಗಿಲು ಕಾದರೂ ಭೇಟಿಯಾಗಿರಲಿಲ್ಲ. ಚುನಾವಣೆಗಾಗಿ ಹಲ್ಲು ಕಿಸಿದು, ಕೈಬೀಸಿ ಹೋಗಲು ಬರುವ ಕರ್ನಾಟಕಕ್ಕೆ ಮಾಡಿದ್ದು ಮಹಾ ವಂಚನೆ.
ರಾಜ್ಯದಲ್ಲಿ ನೆರೆ ಬಂದಾಗ ಸಿಎಂ ಆಗಿದ್ದ ಅವರು ಪ್ರಧಾನಿ ಕಚೇರಿ ಅಲೆದರೂ ಭೇಟಿಗೆ ಅವಕಾಶ ಕೊಟ್ಟಿರಲಿಲ್ಲ. ತಿಂಗಳುಗಟ್ಟಲೆ ಸಂಪುಟ ರಚನೆಗೆ ಅವಕಾಶ ಕೊಡದೆ ಇಳಿವಯಸ್ಸಿನ BSYರನ್ನು ಗೋಳು ಹೊಯ್ದುಕೊಂಡ ಅವರು ಕಣ್ಣೀರು ಹಾಕಿಸಿ ಅಧಿಕಾರ ಕಿತ್ತುಕೊಂಡಿದ್ದೇಕೆ ಎಂಬ ನಿಗೂಢ ಪ್ರಶ್ನೆಗೆ ಉತ್ತರಿಸುವರೇ? "ಭ್ರಷ್ಟಾಚಾರಕ್ಕೆ ಬಿಜೆಪಿಯೇ ಭರವಸೆ, ಭ್ರಷ್ಟರಿಗೆ ಮೋದಿಯೇ ಭರವಸೆ"! 40% ಕಮಿಷನ್ ಲೂಟಿಯ ಬಗ್ಗೆ ಹಲವು ಪತ್ರಗಳನ್ನು ಬರೆದರೂ ಇತ್ತ ಸುಳಿಯದ ಚುನಾವಣೆಗಾಗಿ ವಾರಕ್ಕೊಮ್ಮೆ ಕರ್ನಾಟಕದಲ್ಲಿ ಚಾಪೆ ಹಾಸಿ ಮಲಾಗುತ್ತಿರುವುದು ಅವರ ಆತ್ಮವಂಚಕತನಕ್ಕೆ ಸಾಕ್ಷಿ.

 

ಇದನ್ನೂ ಓದಿ-ಇಹಲೋಕ ತ್ಯಜಿಸಿದ ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ದೀಕ್ಷಿತ್..!

PSI ಹಗರಣದಿಂದ ನೊಂದ ಯುವಕರ ಬಗ್ಗೆ ಮೋದಿ ಮಾತಾಡುವರೇ? ಅವರೇ, ನೀವು ಹಿಂದೊಮ್ಮೆ ಬೆಂಗಳೂರಿಗೆ ಬಂದಾಗ ಎರಡೇ ದಿನಕ್ಕೆ ಕಿತ್ತುಬಂದ ರಸ್ತೆಯಲ್ಲಿ "ವಿಕಾಸ್" ಕಂಡಿತ್ತು! ಮತ್ತೊಮ್ಮೆ ನೀವು ಹೀಗೆ ಹೋಗಿ ಹಾಗೆ ಬರುವುದರಲ್ಲಿ 'ಮಾಡಾಳ್' ಭ್ರಷ್ಟಾಚಾರ ಹೊರಬಂದಿದೆ. ಭ್ರಷ್ಟಾಚಾರದ ಪರ್ವತವನ್ನೇ ಹೊತ್ತಿರುವ ಪರವಾಗಿ ಮತ ಕೇಳಲು ನಾಚಿಕೆ ಎನಿಸುವುದಿಲ್ಲವೇ? ಡಬಲ್ ಇಂಜಿನ್ ವೇಗ ಸಿಕ್ಕಿದ್ದು ಅಭಿವೃದ್ಧಿಗಲ್ಲ, ಭ್ರಷ್ಟಾಚಾರಕ್ಕೆ ಮಾತ್ರ! ಕರ್ನಾಟಕದಲ್ಲಿ ಡಬಲ್ ವೇಗದಲ್ಲಿ ಸಾಗುತ್ತಿರುವ 40% ಲೂಟಿಯ ಬಗ್ಗೆ "ನಾ ಖಾವುಂಗಾ ನಾ ಖಾನೆದುಂಗಾ" ಡೈಲಾಗ್ ಖ್ಯಾತಿಯ ಅವರು ತೆಗೆದುಕೊಂಡ ಕ್ರಮಗಳೇನು? ರಾಜ್ಯದಲ್ಲಿನ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಒಂದೂ ಪದ ಮಾತಾಡದಿರುವುದೇಕೆ? ಪೆಟ್ರೋಲ್, ಡೀಸೆಲ್ ಬೆಲೆ ಕೈ ಸುಡುತ್ತಿವೆ, ಅಡುಗೆ ಅನಿಲದ ಬೆಲೆ ಮೈ ಸುಡುತ್ತಿವೆ! ಅವರೇ, ನಿಮ್ಮ ಅಚ್ಚೇ ದಿನಗಳು ಜನರ ಬದುಕನ್ನು ಭಾರವಾಗಿಸುತ್ತಿವೆ, ಬಿಜೆಪಿ ಈಗಾಗಲೇ ಜನರ ಭವಿಷ್ಯದ ಭರವಸೆ ಕಿತ್ತುಕೊಂಡಿರುವಾಗ "ಬಿಜೆಪಿಯೇ ಭರವಸೆ" ಎನ್ನುವುದು ಜೋಕ್ ಅಲ್ಲದೆ ಇನ್ನೇನು? " ಎಂದು ಕಾಂಗ್ರೇಸ್‌ ಟ್ವೀಟ್ ನಲ್ಲಿ ಪ್ರಶ್ನಿಸಿದೆ. 

ಇದನ್ನೂ ಓದಿ-MC Stan: ಸಂಗೀತ ಕಾರ್ಯಕ್ರಮ ಮಧ್ಯದಲ್ಲಿ ನಿಲ್ಲಿಸಿದ ಎಂಸಿ ಸ್ಟಾನ್ ಮುಂದೇನಾಯಿತು? ನೀವೇ ನೋಡಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News