ನವದೆಹಲಿ: ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಸಿಬಿಐ ಕಚೇರಿ ಎದುರು ವ್ಯಾಪಕ ಪ್ರತಿಭಟನೆ ಹಮ್ಮಿಕೊಂಡಿದೆ. ನವದೆಹಲಿಯಲ್ಲಿ 'ಸಿಬಿಐ ಘೇರಾವೋ' ಪ್ರತಿಭಟನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಚಾಲನೆ ದೊರೆಯಿತು.
Join us today at 11 AM as we march from Dayal Singh College on Lodhi Road to the CBI HQ, to protest the PM’s disgraceful & unconstitutional attempt to block an investigation into the Rafale scam by removing the CBI Chief. Similar protests are being held today, across India.
— Rahul Gandhi (@RahulGandhi) October 26, 2018
ಕಾಂಗ್ರೆಸ್ ಪಕ್ಷವು ಪ್ರಮುಖವಾಗಿ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾವನ್ನು ರಜೆಗೆ ಕಳುಹಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ದೇಶಾದ್ಯಂತ ಸಿಬಿಐ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ರಫೆಲ್ ಒಪ್ಪಂದದ ವಿಚಾರವಾಗಿ ಪ್ರಶ್ನಿಸಿದ ಕಾರಣಕ್ಕಾಗಿ ಅವರನ್ನು ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Thousands of protesters join Congress President @RahulGandhi in a protest at the CBI Headquarters in Delhi. #ModiSeCBIBachao pic.twitter.com/Tc29hEGRYW
— Congress (@INCIndia) October 26, 2018
Chandigarh: Police use water cannon at Congress workers who are protesting against the removal of CBI Director Alok Verma pic.twitter.com/SXwR3AgGRq
— ANI (@ANI) October 26, 2018
ದೆಹಲಿಯ ಸಿಬಿಐ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೊರಗಡೆ ಇರುವ ಬ್ಯಾರಿಕೇಡ್ಗಳನ್ನು ಮುರಿಯಲು ಯತ್ನಿಸಿದರಲ್ಲದೆ ಬಿಜೆಪಿ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಆದೇಶವನ್ನು ಜಾರಿಗೆ ತರಲು ಆದೇಶಿಸಿದ ಪ್ರಧಾನ ಮಂತ್ರಿ ನೇತೃತ್ವದ ಸಮಿತಿ ವಿರುದ್ದವು ಸಹಿತ ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ದೆಹಲಿಯಲ್ಲದೆ ಲಕ್ನೋ, ಬೆಂಗಳೂರು ಮತ್ತು ಪಾಟ್ನಾದಲ್ಲಿರುವ ಸಿಬಿಐ ಕಛೇರಿಗಳ ಎದುರು ಕಾಂಗ್ರೆಸ್ ಪ್ರತಿಭಟನೆ ನಡೆಸಿತು.ಚಂಡೀಘಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ತಡೆಯೊಡ್ಡಲು ಪೊಲೀಸರು ಜಲಫಿರಂಗಿಗಳನ್ನು ಬಳಸಿದರು.