ಮಧುಬಾನಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಕೀಲ್ ಅಹ್ಮದ್ ಸಸ್ಪೆಂಡ್

ನಾಲ್ಕು ಬಾರಿ ಬಿಜೆಪಿ ಸಂಸದರಾಗಿರುವ ಹುಕ್ಮದೇವ್ ನಾರಾಯಣ್ ಯಾದವ್ ಪುತ್ರ ಅಶೋಕ್ ಯಾದವ್  ಮತ್ತು ವಿಕಾಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಅಭ್ಯರ್ಥಿ ಬದ್ರಿ ಕುಮಾರ್ ಪುರ್ಬೆ ವಿರುದ್ಧ ಶಕೀಲ್ ಸ್ಪರ್ಧಿಸುತ್ತಿದ್ದಾರೆ.

Last Updated : May 6, 2019, 08:18 AM IST
ಮಧುಬಾನಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಕೀಲ್ ಅಹ್ಮದ್ ಸಸ್ಪೆಂಡ್ title=

ಮಧುಬಾನಿ: ಬಿಹಾರದ ಮಧುಬಾನಿ ಲೋಕಸಭೆ ಕ್ಷೇತ್ರದಿಂದ ಪಕ್ಷದ ನಿರ್ಧಾರದ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತನ್ನ ಬಂಡಾಯ ಅಭ್ಯರ್ಥಿ ಶಕೀಲ್ ಅಹ್ಮದ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಿದೆ.

ಮಧುಬಾನಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಕೇಂದ್ರ ಸಚಿವ ಶಕೀಲ್ ಅಹ್ಮದ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಇವರೊಂದಿಗೆ, ಬಿಹಾರದ ಬೆನಿಪಟ್ಟಿ ಪಟ್ಟಣದ ಶಾಸಕ ಭವನ ಜಾ ಅವರನ್ನೂ ಸಹ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಕಾಂಗ್ರೆಸ್ನಿಂದ ಅಮಾನತುಗೊಳಿಸಲಾಗಿದೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.

ಇತ್ತೀಚೆಗೆ ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಅಹ್ಮದ್, ಹಲವು ಪಕ್ಷಗಳು ಅವರು ಬೆಂಬಲ ವ್ಯಕ್ತಪಡಿಸಿರುವುದರಿಂದ ಚುನಾವಣೆಯಲ್ಲಿ ಜಯ ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದರು.

"ನಾನು ಮಧುಬಾನಿಯಿಂದ ಸ್ವತಂತ್ರವಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ನನಗೆ ಅನಿಸಿಲ್ಲ, ನಾನು ಅನೇಕ ರಾಜಕೀಯ ಪಕ್ಷಗಳಿಂದ ಬೆಂಬಲ ಪಡೆಯುತ್ತಿದ್ದೇನೆ, ಮಧುಬಾನಿಯಲ್ಲಿ ಉತ್ತಮ ಉತ್ತಮ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ" ಎಂದು ಅವರು ಹೇಳಿದ್ದರು.
  
ನಾಲ್ಕು ಬಾರಿ ಬಿಜೆಪಿ ಸಂಸದರಾಗಿರುವ ಹುಕ್ಮದೇವ್ ನಾರಾಯಣ್ ಯಾದವ್ ಪುತ್ರ ಅಶೋಕ್ ಯಾದವ್  ಮತ್ತು ವಿಕಾಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಅಭ್ಯರ್ಥಿ ಬದ್ರಿ ಕುಮಾರ್ ಪುರ್ಬೆ ವಿರುದ್ಧ ಶಕೀಲ್ ಸ್ಪರ್ಧಿಸುತ್ತಿದ್ದಾರೆ.

ಮೇ 6 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಐದನೇ ಹಂತದಲ್ಲಿ ಮಧುಬಾನಿ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಮೇ 23 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
 

Trending News